ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತೆ ಅನ್ಕೊಂಡಿದೆ ಜೆಡಿಎಸ್ :ಶೋಭಾ ಲೇವಡಿ

ಬೆಂಗಳೂರು, ಮೇ 07:ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತಿದೆ ಎಂಬ ನಿರೀಕ್ಷೆ ಇದೆ ಆದರೆ ಜೆಡಿಎಸ್‌ಗೆ ಬಾರಿ ನಿರಾಸೆ ಕಾದಿದೆ. ಬಿಜೆಪಿ 130ಕ್ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ಅಧಿಕಾರ ಸ್ಥಾಪಿಸಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಸುಷ್ಮಾ ಸ್ವರಾಜ್ ಅವರ ಆರೋಗ್ಯ ದೃಷ್ಟಿಯಿಂದ ಅವರು ಯಾವುದೇ ಬಹಿರಂಗ ಪ್ರಚಾರ ಸಭೆಗೆ ಭಾಗವಹಿಸುತ್ತಿಲ್ಲ, ಇಂಡೋರ್ ಸಭೆಗೆ ಮಾತ್ರ ಸೀಮಿತವಾಗಿದೆ ಜೆಡಿಎಸ್, ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತಿದೆ ಎಂದುಕೊಂಡಿದೆ.

ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ 2007ಎಲ್ಲಿ ಮಾತು ತಪ್ಪಿದ್ದರಿಂದ ನಮಗೆ ಅಧಿಕಾರಕ್ಕೆ ಬರುವ ಅವಕಾಶ ದೊರೆಯಿತು ಎಂದರು.

Shobha Karandlaje criticizes JDS day dreaming of victory

ಮಹಿಳೆಯರನ್ನು ಪಕ್ಷದಿಂದ ಹೆಚ್ಚು ಸ್ಪರ್ಧಿಸುವ ಕುರಿತು ಚರ್ಚೆ ನಡೆಸಲಾಯಿತು. ಚುನಾವಣಾ ನಿರ್ವಹಣಾ ಜವಾಬ್ದಾರಿ ಹಿನ್ನೆಲೆಯಲ್ಲಿ ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ, ಇದಕ್ಕೆ ಬೇರೆ ಕಾರಣಗಳು ಇಲ್ಲ, ನಾನು ಸಚಿವೆಯಾಗಿದ್ದಾಗ ಬೇರೆ ಖಾತೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ ಇದಕ್ಕೆ ಪುರಾವೆಗಳಿದ್ದರೆ ಬಹಿರಂಗ ಪಡಿಸಲಿ ಎಂದು ಶೋಭಾ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+