ಶಿವಮೊಗ್ಗ ಗಲಭೆ: 1990ರ ಜಮ್ಮು ಕಾಶ್ಮೀರಕ್ಕೂ ಇಂದಿನ ಕಾಂಗ್ರೆಸ್ ಆಡಳಿತದ ಕರ್ನಾಟಕಕ್ಕೂ ಸಾಮ್ಯತೆ: ಬಿಜೆಪಿ ಪಟ್ಟಿ
ಬೆಂಗಳೂರು, ಅಕ್ಟೋಬರ್ 05: ಶಿವಮೊಗ್ಗದಲ್ಲಿ ಈಡ್ ಮಿಲಾದ್ ಮೆರವಣಿಗೆ ವೇಳೆ ನಡೆದ ಘಟನೆಯು ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದು, ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಈ ಘಟನೆ ಮತ್ತು ಶಿವಮೊಗ್ಗ ಪರಿಸ್ಥಿತಿಯನ್ನು 1990ರ ದಶಕದಲ್ಲಿ ಕಾಶೀರದಲ್ಲಿನ ಘಟನೆ ಮತ್ತು ಅಂದಿನ ಪರಿಸ್ಥಿತಿಗಳಿಗೆ ಕರ್ನಾಟಕ ಬಿಜೆಪಿ ಹೋಲಿಕೆ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದೆ.
ಈ ಕುರಿತು ಹೋಲಿಕೆಯ ಪಟ್ಟಿಗಳನ್ನು ನೀಡಿ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿಯು, ಇತ್ತೀಚೆಗೆ ಶಿವಮೊಗ್ಗದಲ್ಲಿ ಭಯೋತ್ಪಾದಕರು, ಜಿಹಾದಿಗಳ ದಾಳಿಯಿಂದ ಹಿಂದೂಗಳು ಭಯಭೀತಗೊಂಡಿದ್ದಾರೆ. ಕಾಶ್ಮೀರದಿಂದ ಪಂಡಿತರನ್ನು ಒಕ್ಕಲೆಬ್ಬಿಸಿದಂತೆ, ಶಿವಮೊಗ್ಗದಿಂದಲೂ ವ್ಯವಸ್ಥಿತವಾಗಿ ದಾಳಿ ಮಾಡಿ ಹಿಂದೂಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆಪಾದಿಸಿದೆ.

1990ರ ಜಮ್ಮು ಕಾಶ್ಮೀರಕ್ಕೂ ಇಂದಿನ ಕಾಂಗ್ರೆಸ್ ಆಡಳಿತದ ಕರ್ನಾಟಕಕ್ಕೂ ಎರಡಕ್ಕೂ ಸಾಮ್ಯತೆ ಇದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಈ ಸಂಬಂಧ ಕೆಲವು ಘಟನೆಗಳನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
1990ರ ಜಮ್ಮು ಕಾಶ್ಮೀರಕ್ಕೂ ಇಂದಿನ ಕಾಂಗ್ರೆಸ್ ಆಡಳಿತದ ಕರ್ನಾಟಕಕ್ಕೂ ಇರುವ ಸಾಮ್ಯತೆ ;
— BJP Karnataka (@BJP4Karnataka) October 5, 2023
✔️ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ
📍 ಶಿವಮೊಗ್ಗದಲ್ಲೂ ಪೊಲೀಸರ ಮೇಲೆ ಕಲ್ಲು ತೂರಾಟ
✔️ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಾಳಿ
📍 ಶಿವಮೊಗ್ಗದಲ್ಲೂ ಹಿಂದೂಗಳ ಮೇಲೆ ದಾಳಿ
✔️ ಕಾಶ್ಮೀರದಲ್ಲಿ ಶಿಕ್ಷಕರ ಮನೆ ಧ್ವಂಸ
📍 ಶಿವಮೊಗ್ಗದಲ್ಲೂ…
ಪಿಎಫ್‌ಐ ಗೂಂಡಾಗಳನ್ನು ಹೊರಬಿಟ್ಟು, ಭಯೋತ್ಪಾದಕರು, ಗೂಂಡಾಗಳನ್ನು ಅಮಾಯಕರು ಎಂದು ಬಿಡುಗಡೆ ಮಾಡುವ ಕಾಂಗ್ರೆಸ್ ಸರ್ಕಾರವೇ ಇಂತಹ ಘಟನೆಗಳಿಗೆ, ಅಶಾಂತಿಗೆ ಹೊಣೆ ಎಂದು ರಾಜ್ಯ ಬಿಜೆಪಿ ದೂರಿದೆ. ಇನ್ನೂ ಕಾಶ್ಮೀರ ಮತ್ತು ಕರ್ನಾಟಕದ ಶಿವಮೊಗ್ಗಕ್ಕೆ ಬಿಜೆಪಿ ಮಾಡಿದ ಹೋಲಿಕೆಯ ಪಟ್ಟಿ ವಿವರ ಇಲ್ಲಿದೆ.
ಕಾಶ್ಮೀರ-ಶಿವಮೊಗ್ಗ ಘಟನೆಗಳ ಸಾಮ್ಯತೆಯ ಪಟ್ಟಿ ನೀಡಿದ ಬಿಜೆಪಿ
* 1990ರಲ್ಲಿ ಕಾಶ್ಮೀರದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ನಡೆದಿತ್ತು.
* ಶಿವಮೊಗ್ಗದಲ್ಲೂ ಪೊಲೀಸರ ಮೇಲೆ ಕಲ್ಲು ತೂರಾಟ ಭಾನುವಾರ ನಡೆದಿದೆ.
* ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದಾಳಿ ನಡೆದಿತ್ತು
* ಶಿವಮೊಗ್ಗದಲ್ಲೂ ಹಿಂದೂಗಳ ಮೇಲೆ ದಾಳಿ ನಡೆದಿದೆ.
* ಕಾಶ್ಮೀರದಲ್ಲಿ ಶಿಕ್ಷಕರ ಮನೆ ಧ್ವಂಸಗೊಳಿಸಲಾಗಿತ್ತು.
* ಶಿವಮೊಗ್ಗದಲ್ಲೂ ಶಿಕ್ಷಕರ ಮನೆ ಧ್ವಂಸಗೊಳಿಸುವ ಮೂಲಕ ಅಂತದ್ದೆ ಘಟನೆ ನಡೆದಿದೆ.
* ಕಾಶ್ಮೀರದಲ್ಲಿ ಜಿಹಾದಿಗಳಿಂದ ಮೆರವಣಿಗೆ ದಾಂಧಲೆ ನಡೆಸಲಾಗಿತ್ತು.
* ಶಿವಮೊಗ್ಗದಲ್ಲೂ ಜಿಹಾದಿಗಳಿಂದ ಮೆರವಣಿಗೆ ಪುಂಡಾಟ ನಡೆಸಲಾಗಿದೆ.
* ಕಾಶ್ಮೀರದಲ್ಲಿ ತಲ್ವಾರ್ ಹಿಡಿದು ಭಯೋತ್ಪಾದಕರ ಓಡಾಡಿದ್ದರು.
* ಶಿವಮೊಗ್ಗದಲ್ಲೂ ತಲ್ವಾರ್ ಹಿಡಿದು ಆತಂಕವಾದಿಗಳ ಓಡಾಡಿದ್ದರು.
* ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರದ ಬೆಂಬಲ ನೀಡಿತ್ತು.
* ಶಿವಮೊಗ್ಗದಲ್ಲಿ ನಡೆದ ಘಟನೆಗೆ ಕಾಂಗ್ರೆಸ್ ಸರ್ಕಾರದ ಬೆಂಬಲ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications