ಅಡಿಕೆ ಧಾರಣೆ ಪಾತಾಳಕ್ಕೆ, ಬೆಳೆಗಾರ ಕಂಗಾಲು
ಶಿವಮೊಗ್ಗ/ಶಿರಸಿ: ಅಡಿಕೆ ಧಾರಣೆ ಕಳೆದ ಒಂದು ತಿಂಗಳಿಂದ ಕುಸಿತದ ಹಾದಿಯಲ್ಲಿ ಸಾಗಿದ್ದು ಮೂರು ವರ್ಷದ ಹಿಂದಿನ ದರಕ್ಕೆ ಬಂದು ನಿಂತಿದೆ. ಬೆಲೆ ಇಳಿಕೆ ಬೆಳಗಾರರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಜೂನ್ ಮಧ್ಯಭಾಗದಲ್ಲಿ ಕ್ವಿಂಟಲ್‌ಗೆ46,400 ರು. ತಲುಪಿದ್ದ ಧಾರಣೆ ನಂತರ ಇಳಿಮುಖವಾಗತೊಡಗಿ, ಜುಲೈ ಮೊದಲ ವಾರ 36 ಸಾವಿರಕ್ಕೆ ತಲುಪಿತ್ತು. ಆದರೆ ಇದೀಗ ಏಕಾಏಕಿ 25 ಸಾವಿರಕ್ಕಿಂತ ಕೆಳಕ್ಕೆ ಕುಸಿದಿದೆ.[ಚೀನಾಕ್ಕೆ ಅಡಿಕೆ ರಫ್ತು ಮಾಡಲಿದೆ ಕ್ಯಾಂಪ್ಕೋ]

ಕೇಂದ್ರದ ತಂತ್ರ ಕೈ ಕೊಟ್ಟಿತೆ?
ವ್ಯಾಪಾರಿಗಳು ಹೊರ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ರೈತನ ಹಿತ ಕಾಪಾಡಿವ ದೃಷ್ಟಿಯಿಂದ ಕೇಂದ್ರ ಸರ್ಕಾರ ಅಡಿಕೆ ಆಮದು ಸುಂಕವನ್ನು ಏರಿಕೆ ಮಾಡಿತ್ತು. ಪರಿಣಾಮ ದೇಶದ ಮಾರುಕಟ್ಟೆಯಲ್ಲಿ ರೈತನಿಗೆ ಹೆಚ್ಚಿನ ಬೆಲೆ ಸಿಗಬೇಕಿತ್ತು. ಆದರೆ ಎಲ್ಲರ ನಿರೀಕ್ಷೆ ತಲೆಕೆಳಗಾಗಿದೆ.[ಅಡಿಕೆ ಮಾನ ಕಾಪಾಡಲು ಮುಂದಾದ ಕೇಂದ್ರ ಸರ್ಕಾರ]
ಕಳೆದ ಮೂರು ವರ್ಷದಿಂದ ಉತ್ತಮ ಬೆಲೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಲೆನಾಡ ಜಿಲ್ಲೆಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳು ವಿಸ್ತಾರವಾಗಿದೆ. ಕಳೆದ ವರ್ಷ ಹೆಚ್ಚಿ ಬೆಲೆ ಕಂಡಿದ್ದ ರೈತರು ಈ ಬಾರಿ ಅರ್ಧದಷ್ಟು ಅಡಿಕೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಮುಂಗಾರು ಸಹ ಜೋರಾಗಿರದ ಕಾರಣ ಕೊಳೆ ರೋಗದ ಸಮಸ್ಯೆಯೂ ಕಾಣಿಸಿಕೊಂಡಿಲ್ಲ. ಹೆಚ್ಚಿನ ಬೆಲೆ ನಿರೀಕ್ಷೆ ಮಾಡಿಕೊಂಡು ಅಡಿಕೆಯನ್ನು ಇಟ್ಟುಕೊಂಡಿದ್ದ ರೈತನಿಗೆ ಈಗ ಏನು ಮಾಡಬೇಕು ಎಂಬುದು ತೋಚದ ಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications