ಕಾಂಗ್ರೆಸ್ ಸರ್ಕಾರಕ್ಕೆ ಕೆಲವು ನೆನಪುಗಳು ಹಾಗೂ ಪ್ರಶ್ನೆಗಳು?: ವಿಜಯೇಂದ್ರ ಹೇಳಿದಿಷ್ಟು!
ಬೆಂಗಳೂರು, ಅಕ್ಟೋಬರ್ 31: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಕೆಲವು ನೆನಪುಗಳು ಹಾಗೂ ಪ್ರಶ್ನೆಗಳನ್ನ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ಶಾಸಕ ಬಿ ವೈ ವಿಜಯೇಂದ್ರ ಕೇಳಿದ್ದಾರೆ.
ಕರ್ನಾಟಕ ಸಂಭ್ರಮ-೫೦
— Vijayendra Yediyurappa (@BYVijayendra) October 31, 2023
ಕಾಂಗ್ರೆಸ್ ಸರ್ಕಾರಕ್ಕೆ ಕೆಲವು ನೆನಪುಗಳು ಹಾಗೂ ಪ್ರಶ್ನೆಗಳು ?
•ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತ ಕೇಂದ್ರ ಸರ್ಕಾರಕ್ಕೆ ಸರಣೀ ಪ್ರಶ್ನೆಯನ್ನಿಡುತ್ತಿರುವ ನೀವು ಎಂಬತ್ತರ ದಶಕದ ಐತಿಹಾಸಿಕ ಗೋಕಾಕ್ ಚಳವಳಿಯ ಹುಟ್ಟಿಗೆ ಕಾರಣರಾದವರಾರು ಎಂಬುದನ್ನು ಮರೆತಂತಿದೆ?
•ಕನ್ನಡ ಭಾಷೆಯ… pic.twitter.com/MLKb95DxYZ
ಈ ಕುರಿತು ಟ್ವೀಟ್ ಮಾಡಿರುವ ವಿಜಯೇಂದ್ರ, ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತ ಕೇಂದ್ರ ಸರ್ಕಾರಕ್ಕೆ ಸರಣೀ ಪ್ರಶ್ನೆಯನ್ನಿಡುತ್ತಿರುವ ನೀವು ಎಂಬತ್ತರ ದಶಕದ ಐತಿಹಾಸಿಕ ಗೋಕಾಕ್ ಚಳವಳಿಯ ಹುಟ್ಟಿಗೆ ಕಾರಣರಾದವರಾರು ಎಂಬುದನ್ನು ಮರೆತಂತಿದೆ? ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯ ಅಸ್ತಿತ್ವಕ್ಕೆ ಕೊಡಲಿ ಹಾಕಲು ಹೊರಟಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ಗೋಕಾಕ್ ವರದಿಯನ್ನು ಮೂಲೆಗೆ ಸರಿಸಲು ಹೊರಟಾಗ ಇಂದಿರಾ ಓಲೈಕೆಯ ಕಾಂಗ್ರೆಸ್ಸಿಗರು ಏನು ಮಾಡುತ್ತಿದ್ದರು? ಗೋಕಾಕ್ ವರದಿ ಅನುಷ್ಠಾನಕ್ಕಾಗಿ ರಾಷ್ಟ್ರಕವಿ ಕುವೆಂಪು ಅವರು ದನಿ ಎತ್ತಿದರು, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಸಾಹಿತಿ-ಕಲಾವಿದರು ಬೀದಿಗಿಳಿದರು, ಲಕ್ಷಾಂತರ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿತ್ತು. ಇಂಥಾ ಕನ್ನಡ ವಿರೋಧಿ ಪರಿಸ್ಥಿತಿ ನಿರ್ಮಿಸಿದ ಕುಖ್ಯಾತಿ ಯಾರಿಗೆ ಸಲ್ಲಬೇಕು? ಎಂದು ಟ್ವೀಟ್ ಮೂಲಕ ಕೇಳಿದ್ದಾರೆ.
ಕನ್ನಡ, ರೈತ, ದಲಿತ ಚಳುವಳಿಗಳನ್ನು ದಮನಮಾಡಲು ಅಂದು ಹೋರಾಟಗಾರರ ಮೇಲೆ ಲಾಟಿ ಬೀಸಿದ್ದು, ಜೈಲಿಗೆ ತಳ್ಳಿದ್ದು, ಗುಂಡು ಹಾರಿಸಿದ್ದು ಅಮಾಯಕರ ಪ್ರಾಣ ತೆಗೆದದ್ದು ಇದಕ್ಕೆ ಉತ್ತರವೆಂಬಂತೆ ೮೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ಬಿಜೆಪಿಗೆ ಕನ್ನಡ ಜನತೆ ಹೃದಯದ ಬಾಗಿಲು ತೆರೆದು ಕೊಟ್ಟಿದ್ದು ಇತಿಹಾಸ, ಇದು ಮರೆಯಲು ಹೇಗೆ ಸಾಧ್ಯ? ಎಂದು ವಿಜಯೇಂದ್ರ ಕೇಳಿದ್ದಾರೆ.
ಸುಮಾರು ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ 'ಕರ್ನಾಟಕದ ರೈಲ್ವೆ' ಯನ್ನು ಮದರಾಸಿನ ಕೈಗೆ ಕೊಟ್ಟು ಕನ್ನಡಿಗರ ಉದ್ಯೋಗಾವಕಾಶ ಕಸಿದು ಅನ್ಯ ರಾಜ್ಯದವರ ಪಾಲಾಗಿಸುತ್ತಿದ್ದ ಇತಿಹಾಸ ಕನ್ನಡಿಗರು ಮರೆಯಲಾದೀತೆ? ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಹೆಸರು ಬದಲಿಸಲು ಹಾಗೂ ಆ ಭಾಗದಲ್ಲಿ ಅಭಿವೃದ್ಧಿಯ ಕ್ರಾಂತಿಯಾಗಲು ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕಾದ ಸಂದರ್ಭ ನೀವು ಮರೆತದ್ದಾದರೂ ಹೇಗೆ? ಎಂದು ಶಾಸಕ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಉಪಕಾರ ಸ್ಮರಣೆ ಇಲ್ಲದ, ಕೊಡುಗೆ ಕೊಟ್ಟವರ ನೆನೆಯದ ಗುಣ ಕಾಂಗ್ರೆಸ್ ಸಂಸ್ಕೃತಿ. ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸರು ನಿಮ್ಮ ಪಕ್ಷದ ಬೆನ್ನಲುಬಾಗಿದ್ದವರು, ತಮ್ಮ ಮೈಸೂರು ಪ್ರೇಮವನ್ನು ಬದಿಗೊತ್ತಿ ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡುವ ದಿಟ್ಟತನ ತೋರಿದವರು. ಇದರ ಪ್ರತಿಫಲವಾಗಿ ನೀವಿಂದು 50 ರ ಸಂಭ್ರಮಾರಣೆಯಲ್ಲಿ ಮುಳುಗಿದ್ದೀರಿ, ಆದರೆ ಅರಸರನ್ನೇ ಮರೆತು ಉಪೇಕ್ಷಿಸಿದ್ದೀರಿ ? ಕನ್ನಡ ಅಂಕಿಗಳಿಗೆ ನಿಮ್ಮ ಸರ್ಕಾರ ತಿಲಾಂಜಲಿ ನೀಡಿದ್ದು ಯಾವಾಗ? ಕರ್ನಾಟಕಕ್ಕೆ ಕಾಂಗ್ರೆಸ್ ಎಸಗಿರುವ ಅನ್ಯಾಯಗಳು ಸಾಲು ಸಾಲು. ಹೇಳಲು ಇನ್ನೂ ಸಮಯವಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications