ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಶಿಢ್ಲಘಟ್ಟ ಜೆಡಿಎಸ್ ಶಾಸಕ ರಾಜಣ್ಣ ಕೈತಪ್ಪಲಿದೆಯೇ ಟಿಕೆಟ್?

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಶಿಡ್ಲಘಟ್ಟ, ಡಿಸೆಂಬರ್ 08 : ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಅಸ್ಥಿತ್ವದಲ್ಲಿರುವ ಏಕೈಕ ಕ್ಷೇತ್ರ ಶಿಡ್ಲಘಟ್ಟ ಆದರೆ ಈ ಬಾರಿ ಅಲ್ಲಿ ಪಕ್ಷದ ಇಬ್ಬರು ಮುಖಂಡರ ನಡುವೆ ಟಿಕೆಟ್ ಗೆ ಕಿತ್ತಾಟ ನಡೆಯುತ್ತಿದ್ದು, ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್ ಸಿಗುತ್ತದೆಯೊ ಅಥವಾ ಕಳೆದ ಬಾರಿ ಜೆಡಿಎಸ್ ಪಾಲಿನ ಕಿಂಗ್ ಮೇಕರ್ ಎನಿಸಿಕೊಂಡಿದ್ದ ಮೇಲೂರು ರವಿಗೆ ಟಿಕೆಟ್ ದೊರಕುತ್ತದೆಯೊ ನೋಡಬೇಕಿದೆ.

  AZ ಸಮೀಕ್ಷೆ: ರಾಜ್ಯದಲ್ಲಿ ದೋಸ್ತಿ ಸರ್ಕಾರ, JDS ಕಿಂಗ್ ಮೇಕರ್

  ಒಂದು ಕಾಲದಲ್ಲಿ ಜೆಡಿಎಸ್ ಮತದಾರರು ಹೆಚ್ಚಿದ್ದ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಈಗ ಜೆಡಿಎಸ್ ಗೆ ಉಳಿದಿರುವುದು ಒಂದು ಕ್ಷೇತ್ರ ಮಾತ್ರ. ಪ್ರಸ್ತುತ ಶಿಡ್ಲಘಟ್ಟ ಜೆಡಿಎಸ್ ಶಾಸಕ ಎಂ.ರಾಜಣ್ಣ ಅವರಿಗೆ ಟಿಕೆಟ್ ನೀಡಿದರೆ ತಾಲ್ಲೂಕಿನ ಜೆಡಿಎಸ್ ಮುಖಂಡ ಮೇಲೂರು ರವಿ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿರುವುದು ಜೆಡಿಎಸ್ ರಾಜ್ಯ ಮುಖಂಡರಲ್ಲಿ ದಿಗಿಲು ಹುಟ್ಟಿಸಿದೆ. ಏಕೆಂದರೆ ಎಂ,ರಾಜಣ್ಣ ಕಳೆದ ಚುನಾವಣೆಯಲ್ಲಿ ಗೆಲ್ಲಲು ಮೇಲೂರು ರವಿ ಅವರೇ ಪ್ರಮುಖ ಕಾರಣರಾಗಿದ್ದರು.

  ಥ್ರಿಲ್ಲಿಂಗ್ ಟಚ್ ನೀಡಿದ ಕರ್ನಾಟಕ ಚುನಾವಣಾ ಸಮೀಕ್ಷೆಗಳು

  ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಿಂಗ್ ಮೇಕರ್ ಎಂದೇ ಕರೆಸಿಕೊಳ್ಳುವ ರವಿ ಅವರು ಜೆಡಿಎಸ್ ಗೆ ತಿರುಗಿ ಬಿದ್ದರೆ ಖಂಡಿತ ತಾಲ್ಲೂಕಿನಲ್ಲಿ ಜೆಡಿಎಸ್ ನೆಲಕಚ್ಚುವುದು ಗ್ಯಾರೆಂಟಿ ಎಂಬ ಅರಿವು ವರಿಷ್ಠರಿಗಿದೆ. ಹಾಗಾಗಿ ಭಿನ್ನಮತ ಶಮನಗೊಳಿಸಿ ಮತ್ತೊಮ್ಮೆ ಜೆಡಿಎಸ್ ಅನ್ನು ತಾಲ್ಲೂಕಿನಲ್ಲಿ ಗೆಲ್ಲಿಸಲು ಪಕ್ಷದ ವರಿಷ್ಠರು ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

  ಭಿನ್ನಾಭಿಪ್ರಾಯಕ್ಕೆ ಏನು ಕಾರಣ

  ಭಿನ್ನಾಭಿಪ್ರಾಯಕ್ಕೆ ಏನು ಕಾರಣ

  ಕಳೆದ ಚುನಾವಣೆ ಸಮಯದಲ್ಲಿ ಗಳಸ್ಯ-ಕಂಠಸ್ಯ ಎಂಬಂತಿದ್ದ ಮೇಲೂರು ರವಿ ಮತ್ತು ಎಂ ರಾಜಣ್ಣ ಅವರು ಕೇವಲ ಒಂದೇ ವರ್ಷದಲ್ಲಿ ಭಿನ್ನಾಬಿಪ್ರಾಯ ಮೂಡಿಸಿಕೊಂಡರು. ರಾಜಣ್ಣ, ತಮ್ಮ ಗೆಲುವಿಗೆ ಕಾರಣರಾದ ಮೇಲೂರು ರವಿ ಅವರಿಗೆ ವಿಧೇಯರಾಗಿರದೇ ದರ್ಪ ತೋರಿದರು ಹಾಗಾಗಿ ಮಸ್ಥಾಪ ಉಂಟಾಯಿತು ಎಂಬುದು ರವಿ ಬೆಂಬಲಿಗರ ವಾದ.

  ಟಿಕೆಟ್ ಗಾಗಿ ದೇವೇಗೌಡರಲ್ಲಿ ಮನವಿ

  ಟಿಕೆಟ್ ಗಾಗಿ ದೇವೇಗೌಡರಲ್ಲಿ ಮನವಿ

  ಟಿಕೆಟ್‌ಗಾಗಿ ಈಗಾಗಲೇ ಇಬ್ಬರೂ ಮುಖಂಡರೂ ಜೆಡಿಎಸ್ ಮುಖಂಡರ ಮನೆ ಎಡತಾಕಿ ಬಂದಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಎಲ್ಲ ಜೆಡಿಎಸ್ ಜನಪ್ರತಿನಿಧಿಗಳೂ ಹೋಗಿ ರವಿ ಅವರಿಗೆ ಟಿಕೆಟ್ ನೀಡದಿದ್ದರೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಸ್ವತಃ ದೇವೇಗೌಡರಿಗೇ ಹೇಳಿ ಬಂದಿದ್ದಾರೆ ಎನ್ನಲಾಗಿದೆ. ದೇವೇಗೌಡರ ಒಲವು ರವಿ ಅವರ ಪರವಾಗಿಯೇ ಇದೆ ಎಂಬ ಮಾತೂ ಕೇಳಿ ಬರುತ್ತಿದೆ.

  ಇಬ್ಬರ ಜಗಳ ಮೂರನೆಯವರಿಗೆ ಲಾಭ

  ಇಬ್ಬರ ಜಗಳ ಮೂರನೆಯವರಿಗೆ ಲಾಭ

  ಜೆಡಿಎಸ್ ನ ಇಬ್ಬರು ನಾಯಕರ ಜಗಳದಿಂದ ಮಾಜಿ ಸಚಿವ ವಿ.ಮುನಿಯಪ್ಪ ಒಳಗೊಳಗೆ ಮಂಡಿಗೆ ಉಣ್ಣುತ್ತಿದ್ದಾರೆ. ಇಬ್ಬರು ನಾಯಕರು ಜಗಳ ಮಾಡಿಕೊಂಡರೆ ಅದರ ಲಾಭ ರಾಜಕೀಯ ಅನುಭವವುಳ್ಳ ವಿ.ಮುನಿಯಪ್ಪ ಸುಲಭವಾಗಿ ಪಡೆಯಲಿದ್ದಾರೆ. ಅದರಲ್ಲಿಯೂ ಮೇಲೂರು ರವಿ ಪಕ್ಷೇತರರಾಗಿ ಚುನಾವಣೆಗೆ ನಿಂತರಂತೂ ವಿ.ಮುನಿಯಪ್ಪ ಹಾದಿ ಸುಲಭವಾಗಿಬಿಡಲಿದೆ.

  ಯುವಕರ ಬೆಂಬಲ ಹೆಚ್ಚು

  ಯುವಕರ ಬೆಂಬಲ ಹೆಚ್ಚು

  ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೇಲೂರು ರವಿ ಪರ ಉತ್ತಮ ಅಲೆ ಇದ್ದು, ಕಳೆದ ಬಾರಿ ಮೇಲೂರು ರವಿ ಪ್ರಭೆ ಇಂದಲೇ ಎಂ.ರಾಜಣ್ಣ ಗೆದ್ದಿದ್ದರು ಎನ್ನಲಾಗುತ್ತಿದೆ. ಈ ಬಾರಿ ಸ್ವತಃ ರವಿ ಅವರೇ ಚುನಾವಣಾ ಕಣಕ್ಕೆ ಇಳಿಯುತ್ತಿರುವುದರಿಂದ ಅವರ ಪರ ಅಲೆ ಇನ್ನೂ ಜೋರಾಗಿದೆ. ಯುವ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ಕಾರಣ ಅವರಿಗೆ ಯುವ ಮತದಾರರ ಬೆಂಬಲ ಹೆಚ್ಚಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Shidlaghatta JDS MLA M Rajanna may loose election ticket this time because his fellow party worker young face Melur Ravi announced that he is contesting election and the JDS leaders showing intresting on Melur Ravi.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more