ಮಂಡ್ಯ : ಕಿಡ್ನಿ ಮಾರಿಕೊಂಡ ಮಹಿಳೆಗೆ ಚಿಕಿತ್ಸೆಗೆ ಹಣವಿಲ್ಲ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಜುಲೈ 04 : ಹಣದಾಸೆಗೆ ಕಿಡ್ನಿ ಮಾರಿಕೊಂಡಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡಲು ನಾಗಮಂಗಲದ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಮುಂದಾಗಿದೆ.

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಮೇಶ್ವರ ಕಾಲೋನಿಯ ನಿವಾಸಿ ಚಂದ್ರಮ್ಮ (32) ಕಿಡ್ನಿ ಮಾರಿಕೊಂಡು ಅಸ್ವಸ್ಥಗೊಂಡಿರುವ ಮಹಿಳೆ. ಕಿಡ್ನಿ ತೆಗೆದ ಜಾಗದಲ್ಲಿ ಕೀವು ತುಂಬಿಕೊಂಡು ನೋವು ಕಾಣಿಸಿಕೊಂಡಿದೆ. [ಈ 2 ಸಾವು ನಿಮ್ಮ ಕಣ್ಣಲ್ಲಿ ನೀರು ತರಿಸದೆ ಇರದು]

chandramma

ಚಂದ್ರಮ್ಮ ಏಳು ವರ್ಷಗಳ ಹಿಂದೆ ಮಧ್ಯವರ್ತಿಯ ಮೂಲಕ 2 ಲಕ್ಷ ರೂಪಾಯಿ ಪಡೆದು ಹೊಸಕೋಟೆಯ ಸತೀಶ್ ಎಂಬುವರಿಗೆ ಕಿಡ್ನಿ ಕೊಟ್ಟಿದ್ದರು. ಹಣ ಕೊಟ್ಟವರು ಮತ್ತೆ ಈಕೆಯತ್ತ ತಿರುಗಿ ನೋಡಿಲ್ಲ. ಚಂದ್ರಮ್ಮಳಿಗೆ ಶುಶ್ರೂಷೆ ಚೆನ್ನಾಗಿಯಾಗದ ಕಾರಣದಿಂದ ಕಿಡ್ನಿ ತೆಗೆದ ಜಾಗದಲ್ಲಿ ನೋವು ಕಾಣಿಸಿಕೊಂಡಿದೆ. [ಕ್ಷಮಿಸಿ, ಕಿಡ್ನಿ ಮಾರಾಟ ಮಾಡುತ್ತಿಲ್ಲ: ದೀಕ್ಷಿತ್]

ಈಗ ಹಣವೂ ಖರ್ಚಾಗಿದ್ದು ಚಿಕಿತ್ಸೆ ಪಡೆಯಲು ಚಂದ್ರಮ್ಮ ಪರದಾಡುವಂತಾಗಿದೆ. ಸಂಕಷ್ಟದಲ್ಲಿರುವ ಮಹಿಳೆಗೆ ಎಲ್ಲಾ ವಿಧದ ವೈದ್ಯಕೀಯ ಪರೀಕ್ಷೆ ಸೇರಿದಂತೆ ಅಗತ್ಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡುವುದಾಗಿ ಶ್ರೀ ಆದಿಚುಂಚನಗಿರಿಯ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ. [ಕಿಡ್ನಿ ಮಾರಾಟ ದಂಧೆ ತನಿಖೆಗೆ ರಾಜ್ಯ ಸರ್ಕಾರ ಆದೇಶ]

ಕಿಡ್ನಿ ಮಾರಿಕೊಂಡಿರುವ ಚಂದ್ರಮ್ಮ ಅವರಿಗೆ ಇಬ್ಬರು ಮಕ್ಕಳು. ಬಡತನದ ಕಾರಣದಿಂದ ಜೀವನ ಕಷ್ಟವಾಗಿದೆ. ಈಕೆ ರೇಷ್ಮೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ಮಾಲೀಕರಿಂದಲೂ ರೂ.80 ಸಾವಿರ ಸಾಲ ಪಡೆದಿದ್ದಾರೆ. [ಮಗಳಿಗೆ ಕಿಡ್ನಿ ಕೊಟ್ಟು, ಮರುಜೀವ ನೀಡಿದ ತಂದೆ]

ಕಿಡ್ನಿ ಮಾರಾಟ ಮಾಡುವ ಭಾರೀ ದೊಡ್ಡ ಜಾಲವೇ ಇಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
32-year-old women Chandramma of Ramanagara district, who sold her kidney admitted to private hospital at Mandya.
Please Wait while comments are loading...