Karnataka Weather: ರಾಜ್ಯಕ್ಕೆ ರಣಭೀಕರ ಚಳಿ ಮುನ್ನೆಚ್ಚರಿಕೆ! ಈ ಜಿಲ್ಲೆಗಳಿಗೆ ಆರೆಂಜ್, ಲ್ಲೋ ಅಲರ್ಟ್
Karnataka Cold Wave Alert: ಕರ್ನಾಟಕದಾದ್ಯಂತ ಭೀಕರ ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿದ್ದ ಮೈಕೊರೆವ ಚಳಿಯು ದಕ್ಷಿಣ ಒಳನಾಡಿಗೂ ವಿಸ್ತರಿಸಿದೆ. ಶೀತ ಅಲೆಯ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆಯು ಇದೀಗ ಥಂಡೀ ವಿಪರಿತವಾಗಿ ಹೆಚ್ಚಾಗಿರುವ ಹಿನ್ನೆಲೆ ಕಾರಣ ಈ ಕೆಳಗಿನ ವಿವಿಧ ಜಿಲ್ಲೆಗಳಿಗೆ 'ಆರೆಂಜ್' ಮತ್ತು 'ಯೆಲ್ಲೋ ಅಲರ್ಟ್' ಘೋಷಿಸಿದೆ. ಅತ್ಯಧಿಕ ಚಳಿಯ ಜಿಲ್ಲೆಗಳು, ಮುಂದಿನ ಮುನ್ಸೂಚನೆ ಏನಿದೆ? ಎಂಬ ವರದಿ ಇಲ್ಲಿದೆ.
ವಾರದ ಹಿಂದೆ ಬೀದರ್‌ನಲ್ಲಿ ಹೆಚ್ಚಿನ ಚಳಿ ದಾಖಲಾಗಿದ್ದರಿಂದ ಆ ಒಂದು ಜಿಲ್ಲೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಈ ಶಿತ ಅಲೆ ಪ್ರಮಾಣ ಹೆಚ್ಚಾಗಿದ್ದರಿಂದ ಎಂಟು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಯಿತು. ಶುಕ್ರವಾರದಿಂದ (ಡಿ.12) ರಾಜ್ಯ ವ್ಯಾಪಿ ಭಾರೀ ಶೀತ ಅಲೆ ಮುಂದುವರಿಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಗದಗ, ಯಾದಗಿರಿ, ವಿಜಯಪುರ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೇಂಜ್ ಅಲರ್ಟ್ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಮನೆಯಿಂದ ಹೊರ ಕಾಲಿಡದಷ್ಟು ದಟ್ಟ ಮಂಜು, ಮೈಕೊರೆವ ಚಳಿ ವಾತಾವರಣ ದಾಖಲಾಗಿದೆ. ಜನರ ಬೆಚ್ಚಗಿನ ಧಿರಿಸುವ ಧರಿಸಿ ಮನೆ ಒಳಗೆ ಇದ್ದಾರೆ. ಸಂಜೆ ನಂತರ ಹೊರಾಂಗ ಚಟುವಟಿಕೆಗಳಿಗೆ ಈ ಭಾಗದಲ್ಲಿ ಬ್ರೇಕ್ ಬಿದ್ದಿದೆ. ಹಗಲು ಹೆಚ್ಚಿನ ಬಿಸಿಲು, ಶುಷ್ಕ ವಾತಾವರಣ ಕಂಡು ಬರುತ್ತಿದೆ. ಸಂಜೆ ಆಗುತ್ತಿದ್ದಂತೆ ಹೆಚ್ಚಾಗುವ ಚಳಿಯು ಮಾರನೇ ದಿನ ಬೆಳಗ್ಗೆ ಸುಮಾರು 09 ಗಂಟೆವರೆಗೆ ಕಂಡು ಬರುತ್ತಿದೆ. ದಿಢೀರ್ ಹೆಚ್ಚಾದ ಚಳಿಗೆ ಜನರು ನಡುಗಿದ್ದಾರೆ.
ದಕ್ಷಿಣ ಒಳನಾಡಿಗೂ ಶೀತ ಅಲೆ ವಿಸ್ತರಿಸಿದ್ದರಿಂದ ಕಳೆದ ಎರಡು ದಿನಗಳಿಂದ ಹೆಚ್ಚಿನ ಚಳಿ, ಬೆಳಗ್ಗೆ ದಟ್ಟ ಮಂಜು ಆವರಿಸುತ್ತಿದೆ. ಹಾವೇರಿ, ಕೊಪ್ಪಳ ಜೊತೆಗೆ ಈ ಶೀತ ಅಲೆಯು ಬಳ್ಳಾರಿ, ವಿಜಯನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ವಿಸ್ತರಿಸಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕ ಕೇಂದ್ರದ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಕಡಿಮೆ ತಾಪಮಾನದ ಜಿಲ್ಲೆಗಳು
ಬೀದರ್‌ನಲ್ಲಿ 9.2 ಡಿಗ್ರಿ ಸೆಲ್ಸಿಯಸ್ ಅತೀ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಜಿಲ್ಲೆಯು ತೀವ್ರ ಚಳಿ ಎದುರಿಸುತ್ತಿದೆ. ಇದರ ನಂತರದ ಸ್ಥಾನದಲ್ಲಿ ವಿಜಯಪುರ ಮತ್ತು ಧಾರವಾಡ ತಲಾ 10 ಡಿಗ್ರಿ ಸೆಲ್ಸಿಯಸ್, ಗದಗ, ರಾಯಚೂರು 11 ಡಿಗ್ರಿ ಸೆಲ್ಸಿಯಸ್, ಗದಗ ಮತ್ತು ದಾವಣಗೆರೆ ತಲಾ 12 ಡಿಗ್ರಿ ಸೆಲ್ಸಿಯಸ್, ಹಾಸನ ಮತ್ತು ಕೊಪ್ಪಳ 13 ಡಿಗ್ರಿ ಸೆಲ್ಸಿಯಸ್, ಬೆಳಗಾವಿ ಏರ್‌ಪೋರ್ಟ್ 14 ಮತ್ತು ಹಾವೇರಿ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಉಳಿದಂತೆ ಕಲಬುರಗಿ ಮತ್ತು ಚಿತ್ರದುರ್ಗ 15 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಕೆಐಎಎಲ್ 16 ಮತ್ತು ಮಂಡ್ಯ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೇಲಿನ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ನಿತ್ಯ ವ್ಯತ್ಯಾಸವಾಗುತ್ತಿದೆ. ಬೆಳಗ್ಗೆ, ರಾತ್ರಿ ಭಾರೀ ಥಂಢೀ ಆವರಿಸುತ್ತಿದೆ. ಹಗಲು ಸ್ಪಷ್ಟ ಆಕಾಶ ಇರಲಿದ್ದು, ಒಣಹವೆ ವಾತಾವರಣ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ಕಳೆದ ಮೂರು ದಿನಗಳಿಂದ ಚಳಿ ಹೆಚ್ಚಾಗುತ್ತಿದೆ. ನಗರ ಸೇರಿ ರಾಜ್ಯದಲ್ಲಿ ಈ ಚಳಿ ಮತ್ತು ಅಧಿಕ ಬಿಸಿಲಿನ ವಾತಾವರಣ ಇನ್ನು ಒಂದು ವಾರದ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
-
ಬೆಂಗಳೂರಿಗರೇ ಎಚ್ಚರ; ಸೂರ್ಯನ ಪ್ರತಾಪಕ್ಕೆ ಕೂಲ್ ಸಿಟಿ ಕಂಗಾಲು: ಮುಂದಿನ ಎರಡು ದಿನ ತಾಪಮಾನ ಮತ್ತಷ್ಟು ಏರಿಕೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications