ಮಂಡ್ಯಗೆ ಮೋಧಿ ಭೇಟಿ: ಬಿಜೆಪಿ ಕಾರ್ಯಕ್ರಮಕ್ಕೆ ಟಕ್ಕರ್ ಕೊಡಲು ಜೆಡಿಎಸ್ ಸಮಾವೇಶ, ಕಾಂಗ್ರೆಸ್‌ನಿಂದ ಪ್ರಜಾಧ್ವನಿ!

ಬೆಂಗಳೂರು,

ಮಾರ್ಚ್
10:
ವಿಧಾನಸಭಾ
ಚುನಾವಣೆಯನ್ನು
ಗಮನದಲ್ಲಿಟ್ಟುಕೊಂಡು
ಬಿಜೆಪಿ
ಆಯೋಜಿಸುತ್ತಿರುವ
ಹಲವು
ಕಾರ್ಯಕ್ರಮಗಳಿಗೆ
ರಾಷ್ಟ್ರೀಯ
ನಾಯಕರು
ಬರುವುದು
ಕಳೆದೆರಡು
ತಿಂಗಳಿನಿಂದ
ಹೆಚ್ಚಾಗಿದ್ದು
ಎಲ್ಲರಿಗೂ
ತಿಳಿದ
ವಿಷಯವೆ.
ಬಹು
ನಿರೀಕ್ಷಿತ
ಬೆಂಗಳೂರು-
ಮೈಸೂರು
ಎಕ್ಸ್‌ಪ್ರೆಸ್‌ವೇಯನ್ನು
ಕೂಡ
ಪ್ರಧಾನಿ
ನರೇಂದ್ರ
ಮೋದಿ
ಉದ್ಘಾಟಿಸಲಿದ್ದು
ಮಾರ್ಚ್
12ರಂದು
ರಾಜ್ಯಕ್ಕೆ
ಭೇಟಿ
ನೀಡಲಿದ್ದಾರೆ.
ಸಮಯದಲ್ಲಿ
ಮೂರು
ಪಕ್ಷಗಳು
ಶಕ್ತಿ
ಪ್ರದರ್ಶನಕ್ಕೆ
ಮುಂದಾಗಿವೆ.

id="toptextpromo">
id='are-slot-1'
class='oiad
oi-axt
oiadv'>

ಮಾರ್ಚ್

12ರಂದು
href="https://kannada.oneindia.com/topic/narendra-modi">ಪ್ರಧಾನಿ
ಮಂಡ್ಯಕ್ಕೂ
ಭೇಟಿ
ನೀಡಲಿದ್ದಾರೆ.
ಹಿನ್ನೆಲೆ
ಮಂಡ್ಯ,
ರಾಮನಗರ,
ಚನ್ನಪಟ್ಟಣದ
ಸುತ್ತಲೂ
ರಾಜಕೀಯ
ಬೆಳವಣಿಗೆ
ಗರಿಗೆದರಿದ್ದು,
ಇದಕ್ಕೆ
ಪೂರಕವೆಂಬಂತೆ
ಕಾಂಗ್ರೆಸ್,
ಬಿಜೆಪಿ,
ಜೆಡಿಎಸ್
ನಾಯಕರು
ಹಲವು
ಕಾರ್ಯಕ್ರಮಗಳನ್ನು
ಆಯೋಜಿಸುತ್ತಿದ್ದಾರೆ.
ಕಾಂಗ್ರೆಸ್
ಮಾರ್ಚ್
10
ರಿಂದಲೇ
ಪ್ರಜಾಧ್ನಿ
ಯಾತ್ರೆಯನ್ನು
ರಾಮನಗರದಲ್ಲಿ
ಹ್ಮಮಿಕೊಂಡಿದ್ದರೇ,
ಜೆಡಿಎಸ್
ಬೃಹತ್
ಸಮಾವೇಶ
ಹಮ್ಮಿಕೊಳ್ಳುವ
ಮೂಲಕ
ಬಿಜೆಪಿ
ಕಾರ್ಯಕ್ರಮಕ್ಕೆ
ಟಕ್ಕರ್
ಕೊಡಲು
ಸಿದ್ಧವಾಗಿದೆ.

id='are-slot-2'
class='oiad
oi-axt
oiadv'>

 1.8 ಕಿ.ಮೀ.ವರೆಗೆ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ

1.8 ಕಿ.ಮೀ.ವರೆಗೆ ರೋಡ್ ಶೋ ನಡೆಸಲಿರುವ ಪ್ರಧಾನಿ ಮೋದಿ

ಮಾರ್ಚ್‌ 12ರಂದು ಬೆಂಗಳೂರು ಮೈಸೂರು ನಡುವೆ ನಿರ್ಮಿಸಿರುವ 118 ಕಿಲೋ ಮೀಟರ್‌ ಉದ್ದದ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾಗಲಿದ್ದು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆ ಮದ್ದೂರು ಸಮೀಪದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಗರದೊಳಗೆ 1.8 ಕಿ.ಮೀ.ವರೆಗೆ ರೋಡ್ ಶೋ ಕೂಡ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಡ್ಯದ ಐಬಿ ವೃತ್ತದಿಂದ ಮೈ ಶುಗರ್ ಫ್ಯಾಕ್ಟರಿ ಸರ್ಕಲ್‌ವರೆಗೆ ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಯಲಿದೆ. ಬಳಿಕ ಕಾರಿನಲ್ಲಿ ತೆರಳುವ ನರೇಂದ್ರ ಮೋದಿಯವರು ರಸ್ತೆ ಪಕ್ಕದಲ್ಲಿ ನಿಂತು ರೋಡ್ ಶೋ ವೀಕ್ಷಿಸುವ ಗ್ರಾಮಸ್ಥರನ್ನು ಮಾತನಾಡುವ ನಿರೀಕ್ಷೆ ಇದೆ. ಈ ಮೂಲಕ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಲು ಆಡಳಿತರೂಢ ಬಿಜೆಪಿ ಸಿದ್ಧವಾಗಿದೆ.

ಎಲ್ಲಾ ಗ್ರಾಮಗಳಿಗೂ ತೆರಳಿ ಜನರನ್ನು ಕರೆತರಲಿರುವ ಬಸ್‌ಗಳು!

ಎಲ್ಲಾ ಗ್ರಾಮಗಳಿಗೂ ತೆರಳಿ ಜನರನ್ನು ಕರೆತರಲಿರುವ ಬಸ್‌ಗಳು!

ಮಂಡ್ಯ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಸುತ್ತಮತ್ತಲಿನ ಗ್ರಾಮಗಳಿಂದ ಕಾಲ್ನಡಿಗೆಯಲ್ಲೇ ಸಮಾವೇಶಕ್ಕೆ ಬರಲು ಗ್ರಾಮಸ್ಥರು ಸಿದ್ಧತೆ ನಡೆಸಿದ್ದಾರೆ. ಸ್ವಲ್ಪ ದೂರವಿರುವ ಗ್ರಾಮಗಳಿಂದ ದ್ವಿಚಕ್ರ ವಾಹನ ಇಲ್ಲವೇ ಇತರೆ ಖಾಸಗಿ ವಾಹನಗಳಲ್ಲೂ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಕಾರ್ಯಕ್ರಮಕ್ಕೆ ಬರಲು ಜನರಿಗೆ ಸುಮಾರು 3 ಸಾವಿರಕ್ಕೂ ಹೆಚ್ಚಿನ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಚಾಮರಾಜನಗರ, ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾರಿಗೆ ಬಸ್‌ಗಳನ್ನು ನಿಯೋಜಿಸಲಾಗಿದೆ. ಎಲ್ಲ ಗ್ರಾಮಗಳಿಗೂ ಸರ್ಕಾರಿ ಬಸ್ಸುಗಳು ತೆರಳಿ ಜನರನ್ನು ಬೃಹತ್ ಸಮಾವೇಶಕ್ಕೆ ಕರೆತರಲಿವೆ.

 ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಿರುವ ಜೆಡಿಎಸ್

ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಿರುವ ಜೆಡಿಎಸ್

ಬಿಜೆಪಿಗೆ ತಿರುಗೇಟು ನೀಡಲು ಜಿಲ್ಲೆ ಹಾರೋಹಳ್ಳಿಯಲ್ಲಿ ಅದೇ ದಿನ ಜಾತ್ಯಾತೀತ ಜನತಾದಳ (ಜೆಡಿಎಸ್) ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ನಡೆಸುತ್ತಿದೆ. ತಾವು ಮುಖ್ಯಮಂತ್ರಿ ಆಗಿದ್ದಾಗ ಹಾರೋಹಳ್ಳಿಗೆ ತಾಲ್ಲೂಕಿನ ಸ್ಥಾನಮಾನ ಘೋಷಿಸಿದ್ದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ದಂಪತಿಗೆ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ಈ ಸಮಾವೇಶ ನಡೆಯಲಿದೆ. ಜೊತೆಗೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನಕ್ಕೂ ಸಮಾವೇಶ ವೇದಿಕೆಯಾಗಲಿದೆ.

ಈ ಬೃಹತ್ ಸಮಾವೇಶದ ನೇತೃತ್ವವನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿರುವ ನಿಖಿಲ್‌ ಕುಮಾರಸ್ವಾಮಿ ವಹಿಸಿಕೊಂಡಿದ್ದಾರೆ. ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದ್ದು ಎಲ್ಲರಿಗೂ ಭರ್ಜರಿ ಬಾಡೂಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಮೂಲಕ ಮಂಡ್ಯ ಸುತ್ತಮುತ್ತ ಜೆಡಿಎಸ್ ಪ್ರಾಬಲ್ಯ ಕಳೆದುಕೊಂಡಿಲ್ಲ ಎಂಬುದನ್ನು ತೋರಿಸಿ, ಬಿಜೆಪಿ ಕಾರ್ಯಕ್ರಮಕ್ಕೆ ಜನರನ್ನು ಕಡಿಮೆ ಮಾಡುವ ರಣತಂತ್ರವನ್ನು ಪಕ್ಷ ನಡೆಸುತ್ತಿದೆ.

ಮೋದಿ ಭೇಟಿ ಬೆನ್ನಲ್ಲೇ ರಾಮನಗರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಮೋದಿ ಭೇಟಿ ಬೆನ್ನಲ್ಲೇ ರಾಮನಗರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಪ್ರಧಾನಿ ಮೋದಿ ಇನ್ನೇರಡು ದಿನಗಳಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಈಗಾಗಲೇ ಮಂಡ್ಯ ಸುತ್ತಮುತ್ತ ಶಕ್ತಿ ಪ್ರದರ್ಶನ ನಡೆಸುತ್ತಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದ್ದಾರೆ. ರಾಮನಗರದಲ್ಲಿ ಎರಡು ದಿನಗಳ ಕಾಲ ಯಾತ್ರೆ ನಡೆಸಿ, ಪ್ರಧಾನಿ ಭೇಟಿಗೂ ಮುನ್ನವೇ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿಕೊಂಡಿದೆ.

ರಾಮನಗರದ ತಮ್ಮ ತವರು ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಶುಕ್ರವಾರ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಂಗಳೂರು ಮೈಸೂರು ಹೆದ್ದಾರಿಗೆ ಮೊದಲು ಸೂಕ್ತ ಸರ್ವಿಸ್ ರಸ್ತೆ ನಿರ್ಮಿಸಲಿ, ದಶಪಥ ಹೆದ್ದಾರಿಗೆ ಈಗಾಗಲೇ 80 ಜನ ಬಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸಮಯ ಹಾಗಾಗಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣೆ ಘೋಷಣೆಯಾಗುವ ಮೊದಲೇ ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಎಲ್ಲಾ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ರಣತಂತ್ರ ಹೂಡುತ್ತಿವೆ. ಮತ್ತೊಬ್ಬರ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಹೇಗೆ ಜನರನ್ನು ಸೆಳೆಯುವುದು ಎಂಬುದನ್ನು ಪಕ್ಷಗಳು ಯೋಚಿಸುತ್ತಿವೆ. ಇದರ ನಡುವೆಯೇ ಮಾರ್ಚ್‌ 12ರಂದು ಬೆಂಗಳೂರು ಮೈಸೂರು ನಡುವೆ ನಿರ್ಮಿಸಿರುವ 118 ಕಿಲೋ ಮೀಟರ್‌ ಉದ್ದದ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಸಜ್ಜಾಗಿದೆ. ಈ ಎಕ್ಸ್‌ಪ್ರೆಸ್‌ವೇ ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ಪ್ರಮುಖ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+