Train Cancellation: ಬೆಂಗಳೂರಿನಿಂದ ಹೊರಡುವ ರೈಲು ಅ.12-16ರವರೆಗೆ ರದ್ದು, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 8: ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಪಾಪಟಪಲ್ಲಿ-ಡೋರ್ನಕಲ್ ಬೈಪಾಸ್ ನಿಲ್ದಾಣಗಳಲ್ಲಿ ಮೂರನೇ ಮಾರ್ಗದ (ಪ್ಯಾಚ್ ಟ್ರಿಪ್ಲಿಂಗ್) ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದಾಗಿ ಬೆಂಗಳೂರಿನಿಂದ ವಿವಿಧ ಮಾರ್ಗಗಳಲ್ಲಿ ಹೊರಡುವ ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

* ದಾನಾಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06509) ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಇದೇ ಅಕ್ಟೋಬರ್ 13ರಂದು ಸೇವೆ ಆರಂಭಿಸಬೇಕಿತ್ತು. ಅದರ ಸೇವೆ ಶುರುವಾಗುವ ಮೊಲದೇ ರೈಲು ಸಂಚಾರ ರದ್ದುಗೊಳಿಸಲಾಗಿದೆ.

Several Bengaluru Danapur Trains Cancelled Due to Track Work

* ಅಕ್ಟೊಬರ್ 15 ರಂದು ಪ್ರಾರಂಭವಾಗಬೇಕಿದ್ದ ದಾನಾಪುರ ಕೆಎಸ್‌ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು (06510) ರದ್ದುಗೊಳಿಸಲಾಗಿದೆ.

* ಯಶವಂತಪುರ ತುಘಲಕಾಬಾದ್ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (00629) 12.10.2025 ಮತ್ತು 15.10.2025 ರಂದು ಪ್ರಾರಂಭವಾಗುವುದಿತ್ತು, ಅದನ್ನು ಇದನ್ನು ರದ್ದುಗೊಳಿಸಲಾಗಿದೆ.

* ಅಕ್ಟೊಬರ್ 12 ಮತ್ತು 16 ರಂದು ಪ್ರಾರಂಭವಾಗಲಿದ್ದ ತುಘಲಕಾಬಾದ್ -ಯಶವಂತಪುರ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 00630) ಪ್ರಯಾಣಗಳನ್ನು ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

* ರೈಲು ಸಂಖ್ಯೆ 03251 ದಾನಾಪುರ SMVT ಬೆಂಗಳೂರು ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ಅಕ್ಟೋಬರ್ 12 ಮತ್ತು 13 ರಂದು ಸಂಚರಿಸಬೇಕಿತ್ತು ಕಾಮಗಾರಿ ಪ್ರಯುಕ್ತ ಇದರ ಸಂಚಾರ ಸ್ಥಗಿತಗೊಳ್ಳಲಿದೆ.

* SMVT ಬೆಂಗಳೂರು ದಾನಾಪುರ ದ್ವೈವಾರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಚಾರ (03252) 14.10.2025 ಮತ್ತು 15.10.2025 ರಂದು ರದ್ದಾಗಿದೆ.

* ದಾನಾಪುರ SMVT ಬೆಂಗಳೂರು ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03259) ಸಂಚಾರ 14.10.2025 ರಂದು ಸಂಚರಿಸುತ್ತಿಲ್ಲ. ಪ್ರಯಾಣಿಕರು ಗಮನಿಸಿ ಪ್ರಯಾಣವನ್ನು ಪ್ಲಾನ್ ಮಾಡಿಕೊಳ್ಳಬೇಕು.

* ಕೊನೆಯದಾಗಿ SMVT ಬೆಂಗಳೂರು ದಾನಾಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 03260), 16.10.2025 ರಂದು ಸೇವೆ ನೀಡದೇ ಸಂಚಾರ ಸ್ಥಗಿತಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ದೀಪಾವಳಿ ವಿಶೇಷ ರೈಲುಗಳು

ಮುಜಫರ್‌ಪುರ-ಹುಬ್ಬಳ್ಳಿ ಮತ್ತು ಯಶವಂತಪುರ-ದಾಸನಪುರ ಮಾರ್ಗದಲ್ಲಿ ದೀಪಾವಳಿ ಮತ್ತು ಛತ್ ಹಬ್ಬದ ಪ್ರಯುಕ್ತ ವಿಶೇಷ ರೈಲು ಕಾರ್ಯಾಚರಣೆ ಮಾಡಲಾಗುತ್ತದೆ. ಅಕ್ಟೋಬರ್ 10 ರಿಂದ ನವೆಂಬರ್ 14ರವರೆಗೆ ಮುಜಫರ್‌ಪುರ-ಹುಬ್ಬಳ್ಳಿ-ಮುಜಾಫರ್‌ಪುರ ರರೈಲು (05543 & 05544) ಸಂಚಾರ ಸೇವೆ ನೀಡಲಿದೆ. ಪ್ರತಿ ಶುಕ್ರವಾರ ಮತ್ತು ಸೋಮವಾರ ಈ ಸೇವೆ ಲಭ್ಯವಗಲಿದೆ.

ಅದೇ ರೀತಿ ದಾಸನಪುರ-ಯಶವಂತಪುರ-ದಾಸನಪುರ ವಿಶೇಷ ರೈಲು (03261 & 03262) ಅಕ್ಟೋಬರ್ 14ರಿಂದ ಡಿಸೆಂಬರ್ 30ರವರೆಗೆ ಮಂಗಳವಾರ ಮತ್ತು ಗುರವಾರ ಸೇವೆ ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+