• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರದ ಗಂಭೀರ ಚಿಂತನೆ: ಕೆ.ಗೋಪಾಲಯ್ಯ

|
Google Oneindia Kannada News

ಹಾಸನ,ನವೆಂಬರ್.14: ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಾನೆ ಹಾವಳಿ ತಡೆ ಸಂಬಂಧ ವಿಶೇಷ ತಂಡ ಬಂದು ಈಗಾಗಲೇ ಅಧ್ಯಯನ ಕೂಡ ನಡೆಸಿದೆ. ಈ ವಿಚಾರವನ್ನು ಸಿಎಂ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಜ್ಞರ ತಂಡ ವರದಿ ಕೊಟ್ಟ ಬಳಿಕ ಸಿಎಂ ಜೊತೆ ಮತ್ತೆ ಮಾತನಾಡುವುದಾಗಿ ತಿಳಿಸಿದರು.ಆನೆ ಹಾವಳಿ ತಡೆಗೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಲಾಗುತ್ತೆ. ಒಂದೇ ದಿನಕ್ಕೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆನೆಗಳ ಸ್ಥಳಾಂತರದ ಕೆಲಸ ಹಂತ ಹಂತವಾಗಿ ಆಗುತ್ತದೆ ಎಂದರು.

ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರದ ಗಂಭೀರ ಚಿಂತನೆ: ಕೆ.ಗೋಪಾಲಯ್ಯ ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರದ ಗಂಭೀರ ಚಿಂತನೆ: ಕೆ.ಗೋಪಾಲಯ್ಯ

ಸಿದ್ದರಾಮಯ್ಯ ಬಾದಾಮಿಯಿಂದ ಯಾಕೆ ಸ್ಪರ್ದೆ ಮಾಡ್ತಿಲ್ಲ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಿಂದಲಾದರೂ ಸ್ಫರ್ಧಿಸಲಿ ಆದರೆ ನಾವು ಎಲ್ಲಿ ಚುನಾವಣೆಯಿಂದ ಗೆದ್ದಿದ್ದೇವೊ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇವೆ. ಜನರಿಗೆ ಉತ್ತಮವಾದ ಕೆಲಸ ಮಾಡಿದ್ದರೆ ಜನ ಅಲ್ಲೆ ನಮಗೆ ಮತ ಕೊಡುತ್ತಾರೆ.ಆದರೆ ಸಿದ್ದರಾಮಯ್ಯ ಯಾಕೆ ಅವರು ಕ್ಷೇತ್ರ ಬದಲಾವಣೆ ಮಾಡ್ತಾರೆ ಅವರಿಗೆ ಯಾರ ಭಯ ಇದೆಯೋ ಗೊತ್ತಿಲ್ಲ ಈ ಬಗ್ಗೆ ಅವರೇ ಹೇಳಬೇಕು. ಅವರು ಕೆಲಸ ಮಾಡಿದ್ದೆ ಆಗಿದ್ದರೆ ಬಾದಾಮಿಯಿಂದ ಯಾಕೆ ಸ್ಪರ್ದೆ ಮಾಡ್ತಿಲ್ಲ ಎಂದು ಪ್ರಶ್ನಿಸಿದರು.

ಸೋಲಿನ ಭಯದಿಂದಲೇ ಅವರು ಕ್ಷೇತ್ರ ಹುಡುಕಾಡುತ್ತಿದ್ದಾರೆ. ಚುನಾವಣೆ ಯಲ್ಲಿ ನಾಮಪತ್ರ ಸಲ್ಲಿಸೋ ವೇಳೆಗೆ ಯಾವ ಕ್ಷೇತ್ರ ಹುಡುಕುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ ಗೋಪಾಲಯ್ಯ, ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ಹಲವು ನಾಯಕರು ಮರಳಿ ಕಾಂಗ್ರೆಸ್ ಹೋಗುವ ಪ್ರಶ್ನೇಯೆ ಇಲ್ಲ ಎಂದು ಉತ್ತರಿಸಿದರು.

ಇನ್ನು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನ ಮಾಡಿಲ್ಲ ಎನ್ನುವ ಕುರಿತ ಜೆಡಿಎಸ್ ನಾಯಕರ ಆಕ್ಷೇಪ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವೇಗೌಡರು ಹಿರಿಯ ನಾಯಕರು ಅವರನ್ನು ಖುದ್ದು ಸಿಎಂ ಅವರೆ ಫೋನ್ ಮಾಡಿ ಆಹ್ವಾನ ಮಾಡಿದ್ದಾರೆ. ಈಗ ಕಾರ್ಯಕ್ರಮವೂ ಮುಗಿದಿದೆ, ಇದರ ಬಗ್ಗೆ ಈಗ ಏನೂ ಪ್ರತಿಕ್ರಿಯೆ ನೀಡುವುದಿಲ್ಲ.ದೇವೇಗೌಡರ ಬಗ್ಗೆ ನಮಗೆ ದೊಡ್ಡ ಗೌರವ ಇದೆ ಏನಾದರು ವಿಚಾರ ಇದ್ದರೆ ಅದನ್ನು ಸರಿಪಡಿಸೋ ಕೆಲಸ ಮಾಡೋಣ ಎಂದರು.

English summary
Serious thinking of the government to prevent forest menace in Hassan district says K. Gopalaiah,a special team for forest disaster prevention has already come and conducted a study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X