ಸಿದ್ದರಾಮಯ್ಯ ಸೊಸೆ ಹೆಸರಿನಲ್ಲಿ ಪಬ್: ರಾಜಕಾರಣಿಯಿಂದ ಗಂಭೀರ ಆರೋಪ
ಸಿಎಂ ಸಿದ್ದರಾಮಯ್ಯ ಅವರ ಸೊಸೆ ಹೆಸರಿನಲ್ಲಿ ಪಬ್ ಇದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಈ ರೀತಿ ಸಿದ್ದರಾಮಯ್ಯ ಅವರ ಬಗ್ಗೆ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮ್ಮ ಸೊಸೆಯ ಹೆಸರಲ್ಲಿ ಪಬ್ ಇಲ್ವಾ? ಅದಕ್ಕೆ ಕೋಟ್ಯಂತರ ಬಾಡಿಗೆ ಬರಲ್ವಾ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಬೈರತಿ ಸುರೇಶ್ ಅವರ ಬಗ್ಗೆಯೂ ಹರಿಹಾಯ್ದಿರುವ ಅವರು, ಬೈರತಿ ಸುರೇಶ್ ಅವರನ್ನ ಮೊದಲು ಒದ್ದು ಒಳಗೆ ಹಾಕಬೇಕು. ಆಗ ಮುಡಾದ ಎಲ್ಲ ಹಗರಣ ಬಯಲಿಗೆ ಬರುತ್ತೆ ಎಂದು ಗುಡುಗಿದ್ದಾರೆ.

ಮೊದಲೆಲ್ಲ ಒಳ್ಳೆಯ ಕೆಲಸಕ್ಕೆ ಕುರುಬರನ್ನು ಕರೆಸುತ್ತಿದ್ದರು. ಈಗ ಅದಕ್ಕೂ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ಅಂತಹ ನಾಯಕರು ಕುರುಬ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಅಂಟಿಕೊಂಡಿರುವ ಕೊಳಕು ತೊಳೆಯಲು ಆಗೋದಿಲ್ಲ ಎಂದಿದ್ದಾರೆ.
ಮುಡಾ ಹಗರಣ ಹಾಗೂ ವಾಲ್ಮೀಕಿ ವಂಚನೆ ಕೇಸ್‌ಗಳಿಂದಲೇ ಕಾಂಗ್ರೆಸ್ ಮುಳುಗಿ ಹೋಗಿದೆ. ಇದೀಗ ಯೋಗೇಶ್ವರ್ ಎನ್ನುವ ಮತ್ತೊಬ್ಬ ಫ್ರಾಡ್ ಕೂಡ ಕಾಂಗ್ರೆಸ್ ಮನೆ ಸೇರಿಕೊಂಡಿದ್ದಾನೆ. ನಮ್ಮ ರಾಜ್ಯ ಸದ್ಯ ಫ್ರಾಡ್‌ಗಳ ಸಂತೆಯಾಗಿಬಿಟ್ಟಿದೆ. ಇದಕ್ಕೆ ಸಿದ್ದರಾಮಯ್ಯನೇ ಕಾರಣ ಎಂದು ದೂರಿದ್ದಾರೆ.
ಸಿದ್ದರಾಮಯ್ಯ ಒಂದು ರೀತಿ 16ನೇ ಲೂಯಿ ದೊರೆ ಇದ್ದಂತೆ. ಲೂಯಿ ತನ್ನ ಅವಧಿ ಬಳಿಕ ಜಲಪ್ರಳಯ ಆಗಬೇಕು ಎಂದು ಬಯಸಿದ್ದ. ಸಿದ್ದರಾಮಯ್ಯ ಕೂಡ ತನ್ನ ನಂತರ ಯಾರೂ ಇರಬಾರದು ಎನ್ನುವ ದುರಾಸೆ ಇದೆ.

ಸಿಎಂ ಯಾಕೆ ಹಿಂದುಳಿದ ವರ್ಗದವರನ್ನು ಹೆಚ್ಚಾಗಿ ಓಲೈಕೆ ಮಾಡುತ್ತಿದ್ದಾರೆ? ಒಕ್ಕಲಿಗರು, ಲಿಂಗಾಯತರು ಸಿದ್ದರಾಮಯ್ಯ ಅವರಿಗೆ ವೋಟ್ ಹಾಕಿಲ್ವಾ? ಅತ್ತ ಹಿಂದುಳಿದವರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡಿದ್ದಾರೆ. ಕುರುಬರ ಸಂಘವನ್ನು ಕೆಡವಿದ್ದು ಯಾರು? ನಾನೇ ಕಟ್ಟಿದ ಕುರುಬರ ಮಠವನ್ನು ನಾಶ ಮಾಡಿದ್ದು ಇದೇ ಸಿದ್ದರಾಮಯ್ಯ ತಾನೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೈಎಲೆಕ್ಷನ್‌ನಿಂದ ರಾಜ್ಯ ಸರ್ಕಾರಕ್ಕೆ ಏನೂ ಆಗೋದಿಲ್ಲ. ಆದರೂ ಯಾಕೆ ಇಷ್ಟು ತಲೆಕೆಡಿಸಿಕೊಂಡಿದ್ದಾರೆ?. ಕಾಂಗ್ರೆಸ್ ಅನ್ನು ಹಾಳು ಮಾಡಿದ್ದೇ ಸಿದ್ದರಾಮಯ್ಯ. ರಾಜ್ಯದ ಜನರು ಮಂಗಗಳಲ್ಲ. ಸಿದ್ದರಾಮಯ್ಯ ಅವರ ಸುಳ್ಳು ಜನರಿಗೂ ತಿಳಿಯುತ್ತೆ. ಸಿದ್ದರಾಮಯ್ಯ ಒಬ್ಬ ಭ್ರಷ್ಟ ಎಂಬುದು ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸೈನಿಕ ಅನ್ನಬೇಡಿ: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾದ ಬಗ್ಗೆ ಮಾತನಾಡಿದ ವಿಶ್ವನಾಥ್ ಅವರು, ಯೋಗೇಶ್ವರ್ ಅವರನ್ನು ಸೈನಿಕ ಎಂದು ಕರೆಯಬೇಡಿ. ಅದು ಇಡೀ ಸೈನಿಕರಿಗೆ ಮಾಡುವ ದೊಡ್ಡ ಅವಮಾನ. ಹುಣಸೂರು ಬೈಎಲೆಕ್ಷನ್ ವೇಳೆ ಪಾರ್ಟಿ ಕೊಟ್ಟಿದ್ದ ಹಣ ತಗೊಂಡು ಓಡಿ ಹೋಗಿದ್ದ. ಇಂದು ಕಾಂಗ್ರೆಸ್‌ಗೆ ಅಂತಹ ಫ್ರಾಡ್ ಯೋಗೇಶ್ವರ್ ಅನಿವಾರ್ಯ ಆಗಿಬಿಟ್ಟಿದ್ದಾನಾ? ಎಂದು ದೂರಿದ್ದಾರೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
ಸರ್ಕಾರ ಸಾಲದ ಮೇಲೆ ನಡೆಯುತ್ತಿದೆ ಎಂಬುದು ಸುಳ್ಳು: ವಿರೋಧ ಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications