''ಹಾಸನದಲ್ಲಿ ಸರಣಿ ಹೃದಯಾಘಾತ: ಜಿಲ್ಲಾ ಉಸ್ತುವಾರಿ ಸಚಿವ KN ರಾಜಣ್ಣ ನಾಪತ್ತೆ!''
ಬೆಂಗಳೂರು, ಜುಲೈ 06: ಕರ್ನಾಟಕದ ವಿವಿಧ ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯು ಒಂದು. ತನ್ನದೇ ಆದ ವಿಶೇಷತೆಗಳಿಂದ ಕೂಡಿಸಿರುವ ಹಾಸನ ಜಿಲ್ಲೆ ಕಳೆದ ಒಂದು ತಿಂಗಳಿನಿಂದ ಹೃದಯಾಘಾತ ವಿಚಾರವಾಗಿ ಮುನ್ನೆಲೆಗೆ ಬರುವಂತಾಗಿದೆ. ಕಳೆದ ಕೇವಲ 50 ದಿನಗಳಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ತಜ್ಞ ವೈದ್ಯರ ನಿದ್ದೆಗಡೆಸಿದೆ. ಇದರ ನಡುವೆ ಹಾಸನ ಜಿಲ್ಲೆ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ...
ಹೌದು, ಸಮೃದ್ಧ ಜಿಲ್ಲೆ ಹಾಸನದಲ್ಲಿ ಇಷ್ಟೊಂದು ಸಾವು ನೋವು ಆಗುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ಪತ್ತೆನೇ ಇಲ್ಲ. ಜಿಲ್ಲೆಯಾದ್ಯಂತ ವಿಪರೀತ ಮಳೆ ಆಗುತ್ತಿದೆ. ಕಳೆದೊಂದು ತಿಂಗಳಿನಿಂದ ಮುಂಗಾರು ಸಕ್ರಿಯವಾಗಿದೆ. ಮಳೆ ಹಾನಿ, ಅವಾಂತರಗಳು ಸೃಷ್ಟಿಯಾಗಿದೆ. ಈ ಮಧ್ಯೆ ಕಾಡಾನೆ ದಾಳಿ ಸಹ ನಡೆದಿದೆ. ಹೀಗಿದ್ದರು ಜನರ ಸಂಕಷ್ಟ, ಸಮಸ್ಯೆ ಆಲಿಸಬೇಕಾದ ಉಸ್ತುವಾರಿ ಸಚಿವರು ಈಕಡೆ ಸುಳಿದೇ ಇಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ಹೌದು, ಮೂರು ತಿಂಗಳಿಂದ ಹಾಸನಕ್ಕೆ ಬಾರದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರು ನಾಪತ್ತೆ ಆಗಿದ್ದಾರೆ. ಎಂದು ಗಂಭೀರ ಆರೋಪ ಮಾಡಿರುವ ಕರ್ನಾಟಕ ಬಿಜೆಪಿಯು ನೆಪ ಮಾತ್ರಕ್ಕೆ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿದ್ದಾರಾ ಸಚಿವ ಕೆ. ಎನ್. ರಾಜಣ್ಣ? ಎಂದು ಕಟುವಾಗಿ ಪ್ರಶ್ನಿಸಿದೆ.
ಹಾಸನದಲ್ಲಿ ಸರಣಿ ಸಾವುಗಳಾಗಿವೆ. ಹೃದಯಾಘಾತಕ್ಕೆ ಯುವಕರೇ ಹೆಚ್ಚು ಬಲಿಯಾಗಿದ್ದಾರೆ. ಈ ದುರಂತಕ್ಕೆ ಇಡೀ ಜಿಲ್ಲೆ ಬೆಚ್ಚಿ ಬಿದ್ದಿದೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ಕಳೆದ ಮೂರು ತಿಂಗಳಿನಿಂದ ಜಿಲ್ಲೆಗೆ ಕಾಲಿಟ್ಟಿಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಜಿಲ್ಲೆಯ ಜನರ ಜೊತೆಗೆ ಇರಬೇಕಿದ್ದ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರ ಕುರಿತಾದ ನಿರ್ಲಕ್ಷ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ದೂರಿದೆ.
ಜಿಲ್ಲೆಯಲ್ಲಿ 35+3 ಸಾವು: ಸಚಿವರ ಸುಳಿವೇ ಇಲ್ಲ?
ರಾಜ್ಯಾದ್ಯಂತ ಹಾಸನ ಸಾವುಗಳು ಸಂಚಲನ ಮೂಡಿಸಿವೆ. ಕೇವಲ 50 ದಿನಗಳಲ್ಲಿ ಜಿಲ್ಲೆಯಲ್ಲಿ ಹೃದಯಾಘಾತದಿಂದ ಜಿಲ್ಲೆಯಲ್ಲಿ 35 ಜನರು ಸಾವನ್ನಪ್ಪಿದ್ದಾರೆ. ಕಾಡಾನೆ ದಾಳಿಯಿಂದ 3 ಜನರು ಸಾವನ್ನಪ್ಪಿದ್ದಾರೆ. ವಿಪರೀತ ಮಳೆ ಆಗಿದ್ದು, ಮಳೆ ಅವಾಂತರಗಳು ಸೃಷ್ಟಿಯಾಗಿವೆ. ಸಣ್ಣ ವಯಸ್ಸಿವರು, ಯುವ ಸಮೂಹ ಬಲಿಯಾಗಿದೆ. ಹೀಗಿದ್ದರು ಸಚಿವರು ಬಂದು ಭೇಟಿ ನೀಡಿಲ್ಲ. ಸಮಸ್ಯೆ ಪರಿಹಸುವ ಪ್ರಯತ್ನ ಮಾಡಿಲ್ಲ. ಹಾಸನದಲ್ಲಿ ಈ ಸಮಸ್ಯೆಗಳು, ದರುಂತಗಳು ಕುರಿತಂತೆ ಒಂದೇ ಒಂದು ಸಭೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯ ರಾಜಕಾರಣದಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರು ಬ್ಯೂಸಿಯಾಗಿದ್ದಾರೆ. ಹೇಳಿಕೆ ಮೇಲೆ ಹೇಳಿಕೆ ಕೊಡುತ್ತಿದ್ದಾರೆ. ಇವರಿಗೆ ಅಧಿಕಾರ ಬೇಕು. ಆದರೆ ಜನರು ಬೇಡ. ಸರ್ಕಾರ ಜಿಲ್ಲೆಗಳ ಉಸ್ತುವಾರಿ ನೋಡಿಕೊಳ್ಳಲಿ. ಜನರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ನೇಮಕ ಮಾಡಿದರೆ, ಇವರು ಮಾತ್ರ ಇಂತಹ ಕಷ್ಟದ ಸಂದರ್ಭದಲ್ಲೂ ಜಿಲ್ಲೆಯತ್ತ ಸುಳಿದೇ ಇಲ್ಲ ಎಂದು ಗಂಭೀರ ಆರೋಪ ಕೆ.ಎನ್. ರಾಜಣ್ಣ ಅವರು ಎದರಿಸುತ್ತಿದ್ದಾರೆ.












Click it and Unblock the Notifications