ಸಾಹಿತ್ಯಾಸಕ್ತರಿಗಾಗಿ ತಯಾರಾಗ್ತಿದೆ ವೈವಿಧ್ಯಮಯ ದೇಶಿ ಅಡುಗೆ

By: ರಾಮಲಿಂಗಪ್ಪ ಬಿ.ಕೆ
Subscribe to Oneindia Kannada

ರಾಯಚೂರು,ಡಿಸೆಂಬರ್,2: ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ (ಅಕ್ಷರ ಜಾತ್ರೆ)ಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ವೈವಿಧ್ಯಮಯ ದೇಶಿ ಅಡುಗೆಯನ್ನು ನುರಿತ ಬಾಣಸಿಗರ ತಂಡ ತಯಾರಿಸುತ್ತಿದೆ. ಸಮ್ಮೇಳನದ ಮೂರು ದಿನವೂ ವಿವಿಧ ರೀತಿಯ ದೇಶಿ ಅಡುಗೆ ಇಲ್ಲಿ ಉಂಟು; ಏನಿದೆ ಮತ್ತು ಏನಿಲ್ಲ ಭೂರಿ ಬೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುಬ್ಬಳ್ಳಿಯ ಬೈರು ಕೆಟರ್ಸ್ನ 400 ಬಾಣಸಿಗರ ತಂಡ ಅಡುಗೆ ತಯಾರಿಯಲ್ಲಿ ತೊಡಗಿದ್ದು, ಮೊದಲ ದಿನ ಹಳ್ಳಿ ಸೊಗಡಿನ ಗೋದಿ ಹುಗ್ಗಿ, ಚಟ್ನಿ, ಉಪ್ಪಿನಕಾಯಿ, ಸೋನಾಮಸೂರಿ ಅನ್ನ ಮತ್ತು ಸಾಂಬಾರು ಬಡಿಸಲಾಗುತ್ತಿದೆ.[ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಿದ ತನ್ವೀರ್ ಸೇಠ್]

Separate food-serving arrangements are made on sahitya sammelana

ಆರಂಭದಲ್ಲಿ 25 ಸಾವಿರ ಜನರ ನಿರೀಕ್ಷೆ ಇದ್ದು,ಇದೀಗ 50 ಸಾವಿರ ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ಅಷ್ಟು ಜನರಿಗೆ ವಿಶೇಷ ಭೋಜನ ಬಡಿಸಲು ತಯಾರಾಗಿದೆ. ಮೊದಲ ದಿನ ರಾತ್ರಿ ಚಿತ್ರಾನ್ನ, ರೈತ(ಪಚ್ಚಡಿ) ಉಪ್ಪಿನಕಾಯಿ ಅಂದಾಜು 20 ಸಾವಿರ ಜನರಿಗೆ ಉಣಬಡಿಸಲು ತಯಾರಿ ಮಾಡಿಕೊಳ್ಳಲಾಗಿದೆ.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

ಮೂರು ದಿನಗಳ ಊಟದಲ್ಲೂ ವಿಶೇಷವಾಗಿ ಜಿಲ್ಲೆಯ ಮೂಲೆಮೂಲೆಗಳಿಂದ ಸಂಗ್ರಹಿಸಲಾದ ಎರಡೂವರೆ ಲಕ್ಷ ರೊಟ್ಟಿ,ಎಣ್ಣೆ ಬದನಿಕಾಯಿ ಸೇರಿದಂತೆ ವಿವಿಧ ಬಗೆಯ ಪಲ್ಲೆ ಬಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ರೊಟ್ಟಿಯನ್ನು ಜಿಲ್ಲೆಯ ಪ್ರತಿಶಾಲೆಯ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವುದರಿಂದ ರಾಯಚೂರು ಕನ್ನಡ ಸಮ್ಮೇಳನಕ್ಕೆ ಪ್ರತಿ ಮನೆಯ ಸೇವೆ ಕನ್ನಡಮ್ಮನಿಗೆ ದೊರೆತಿದೆ ಎಂದು ಬಾಣಸಿಗ ಬಾಬುಲಾಲ್ ಹುಬ್ಬಳ್ಳಿ ತಿಳಿಸಿದರು.

ಮೊದಲ ದಿನ ಗೋದಿ ಹುಗ್ಗಿ, ಅನ್ನ ಸಾಂಬಾರು,ಚಟ್ನಿ ಉಪ್ಪಿನಕಾಯಿ,ರಾತ್ರಿ ಚಿತ್ರಾನ್ನ,ರೈತ(ಪಚ್ಚಡಿ) ಉಪ್ಪಿನಕಾಯಿ ಅಂದಾಜು 50 ಸಾವಿರ ಜನರಿಗೆ ಮತ್ತು ಎರಡನೇ ದಿನ ಸಿಹಿ ತಿನಿಸು ಮಾದ್ಲಿ ಜೊತೆ ತುಪ್ಪ, ಬಿಸಿಬೆಳೆಬಾತ್,ರೈತ(ಪಚ್ಚಡಿ),ಚಟ್ನಿ ಉಪ್ಪಿನಕಾಯಿ, ಇನ್ನೂ ರಾತ್ರಿ ಮೈಸೂರು ಪಾಕ್, ಪುಳಿಯೊಗರೆ,ರೈತ ಉಪ್ಪಿನಕಾಯಿಯನ್ನು ಅಂದಾಜು 20 ಸಾವಿರ ಜನರಿಗೆ ತಯಾರಿಸಲಾಗುತ್ತಿದೆ.

ಮೂರನೇ ದಿನ ಮೋತಿಚೂರು ಖುಲ್ಲಾ, ಫಲಾವುರೈಸ್, ವೆಜಿಟೇಬಲ್ ಗ್ರೇವಿ, ಮಸಾಲಾ ಮಜ್ಜಿಗೆ, ಉಪ್ಪಿನಕಾಯಿ ಇನ್ನೂ ರಾತ್ರಿ ಅನ್ನ ಸಾಂಬಾರು,ಉಪ್ಪಿನಕಾಯಿಯನ್ನು ಅಂದಾಜು 25 ಸಾವಿರ ಜನರಿಗೆ ತಯಾರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅಡುಗೆ ಸಂಚಾಲಕರು ತಿಳಿಸಿದರು.

ಕನ್ನಡಮ್ಮನ ಜಾತ್ರೆಗೆ ಆಗಮಿಸುವ ಪ್ರತಿಯೊಬ್ಬರು ಈ ತಿನಿಸುಗಳ ಸವಿ ಉಣಬಡಿಸಲು ಸ್ವಾಗತ ಸಮಿತಿ ಅಗತ್ಯವ್ಯವಸ್ಥೆ ಮಾಡಿದೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಮಿಸ್ ಮಾಡದೇ ದೇಶಿ ಅಡುಗೆಯ ಸವಿದು ಖುಷಿಯಿಂದ ಹೋಗಲಿ ಎನ್ನುವುದೇ ಭತ್ತದ ಕಣಜದ ಪ್ರದೇಶದವರ ಆಶಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Separate food-serving arrangements are made on 82nd sahitya sammelana which is held in Raichur. 400 chefs form Hubballi Bairu caterers are preparing delicious foods items.
Please Wait while comments are loading...