ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರಕ್ಕೆ ಅಣ್ಣಾಮಲೈ ವರ್ಗ, ಈಗಲ್ಟನ್ ರೆಸಾರ್ಟ್ ಭದ್ರತೆ ಹಿಂತೆಗೆತ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 17: ಕಾಂಗ್ರೆಸ್ 'ರೆಸಾರ್ಟ್ ರಾಜಕಾರಣ'ಕ್ಕೆ ಆಯ್ಕೆ ಮಾಡಿಕೊಂಡಿರುವ, ಕೈ ಶಾಸಕರು ವಾಸ್ತವ್ಯ ಹೂಡಿರುವ ಬಿಡದಿಯ 'ಈಗಲ್ಟನ್ - ದಿ ಗಾಲ್ಫ್ ವಿಲೇಜ್ ರೆಸಾರ್ಟ್'ನ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ.

ಮುಖ್ಯಮಂತ್ರಿಯಾಗಿ ಬಿಜೆಪಿಯ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಈಗಲ್‌ಟನ್‌ ರೆಸಾರ್ಟ್‌ನ ಪೊಲೀಸ್‌ ಭದ್ರತೆ ವಾಪಸ್‌, ಬಿಎಸ್‌ವೈ ತಂತ್ರ? ಈಗಲ್‌ಟನ್‌ ರೆಸಾರ್ಟ್‌ನ ಪೊಲೀಸ್‌ ಭದ್ರತೆ ವಾಪಸ್‌, ಬಿಎಸ್‌ವೈ ತಂತ್ರ?

ಈ ಬೆಳವಣಿಗೆಯಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ. "ಇದು ಸರಿಯಲ್ಲ. ಯಾರದ್ದೇ ಸರಕಾರ ಆಗಿರಲಿ, ಚುನಾಯಿತ ಜನಪ್ರತಿನಿಧಿಗಳಿಗೆ ಭದ್ರತೆ, ಸುರಕ್ಷತೆ ನೀಡುವುದು ಸರಕಾರದ ಆದ್ಯ ಕರ್ತವ್ಯ," ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Security withdrawn from Eagleton Resort, where Congress MLAs are lodged

ರಾಮನಗರಕ್ಕೆ ಅಣ್ಣಾಮಲೈ
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಖಡಕ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿದೆ.

ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್ ಮೇಲೆ ಕಣ್ಣಿಡಲೆಂದೇ ಅವರನ್ನು ವರ್ಗ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

English summary
"This is not the system. Irrespective of whose govt it is, it is their duty to provide protection, provide security to the elected representatives," said seniour congress leader KH Muniyappa on security withdrawn from outside Eagleton Resort near Bengaluru where Congress MLAs are lodged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X