ಮೇ 15ರಂದು ಮತ ಎಣಿಕೆ:ರಾಜ್ಯಾದ್ಯಂತ ಬಿಗಿ ಬಂದೋಬಸ್ತ್
ಬೆಂಗಳೂರು, ಮೇ 14: ವಿಧಾನಸಭಾ ಚುನಾವಣೆ ಫಲಿತಾಂಶ ಮೇ 15ರಂದು ಹೊರ ಬೀಳಲಿದೆ. ಅಂದು ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಸೂಕ್ತ ಬಂದೋಬಸ್ತ್ ಕಲ್ಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ 222 ಕ್ಷೇತ್ರಗಳ ಒಟ್ಟು 2622 ಹುರಿಯಾಳುಗಳು ರಾಜಕೀಯ ಭವಿಷ್ಯ ಮಂಗಳವಾರ ಹೊರಬರಲಿದೆ. ಇದಕ್ಕಾಗಿ ರಾಜ್ಯದಲ್ಲಿ 38 ಮತೆಣಿಕೆ ಕೇಂದ್ರಗಳನ್ನು ಆಯೋಗವು ಸ್ಥಾಪಿಸಿದ್ದು 80 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಮತೆಣಿಕೆ ಕಾರ್ಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಮತ ಎಣಿಕೆ ಕೇಂದ್ರ ತೆರೆಯಲಾಗಿದೆ, ಬೆಂಗಳೂರು ನಗರದಲ್ಲಿ ಗ್ರಾಮಾಂತರ ಜಿಲ್ಲೆಗಳ ಕ್ಷೇತ್ರಗಳು ಸೇರಿ ಐದು ಕಡೆ ಮತ ಎಣಿಕೆ ನಡೆಯಲಿದೆ.

ಇನ್ನುಳಿದಂತೆ ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಎರಡು ಹಾಗೂ ತುಮಕೂರಿನಲ್ಲಿ ಮೂರು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕಾರ್ಯಕ್ಕೆ 11,160 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
ಮಂಗಳವಾರ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಸೂಕ್ತ ಭದ್ರತೆ ಕಲ್ಪಿಸಲಾಗಿದೆ. ಮತ ಎಣಿಕೆ ದಿನ 278 ಡಿವೈಎಸ್‌ಪಿ, 947 ಇನ್ಸ್‌ಪೆಕ್ಟರ್‌ಗಳು, 5,322 ಪಿಎಸ್ ಮತ್ತು ಎಎಸ್‌ಐಗಳು, 45,685 ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೇಬಲ್‌ಗಳು ಹಾಗೂ 26,672 ಗೃಹ ರಕ್ಷಕ ಸಿಬ್ಬಂದಿ ಭದ್ರತೆಯಲ್ಲಿ ತೊಡಗಲಿದ್ದಾರೆ ಎಂದು ಎಡಿಜಿಪಿ ಕಮಲ್ ಪಂತ್ ತಿಳಿಸಿದ್ದಾರೆ.












Click it and Unblock the Notifications