15 ವರ್ಷ ಮೇಲ್ಪಟ್ಟ ವಾಹನಕ್ಕೆ FC ಇಲ್ಲದಿದ್ದರೆ ದಿನಕ್ಕೆ 50 ರೂಪಾಯಿ ದಂಡ ಫಿಕ್ಸ್!
ಬೆಂಗಳೂರು, ಏ. 05: ಇನ್ಮುಂದೆ ಆನೆ ಸಾಕಬಹುದು, ಆದ್ರೆ ಹದಿನೈದು ವರ್ಷ ಮೇಲ್ಪಟ್ಟ ವಾಹನ ನಿರ್ವಹಣೆ ಮಾಡೋಕೆ ಆಗಲ್ಲ! ಒಂದೆಡೆ ಪೆಟ್ರೋಲ್ ಡೀಸೆಲ್ ದರ ಏರಿಕೆ. ಇನ್ನೊಂದೆಡೆ ಗುಜರಿ ನೀತಿಯ ಶುಲ್ಕ ಮತ್ತು ದಂಡದ ಉಪಟಳ! ಹಳೇ ವಾಹನ ನಿರ್ವಹಣೆ ಬದಲಿಗೆ ಶೇಂಗಾ ಬೀಜಕ್ಕೆ ಮಾರಿಕೊಳ್ಳುವುದು ಒಳಿತು!
ಹಳೇ ವಾಹನಗಳನ್ನು ಗುಜರಿಗೆ ಮಾರಲು ಜನರನ್ನು ಪ್ರೇರಪಿಸಲು ಗುಜರಿ ನೀತಿಯ ಭಾಗವಾಗಿ ಹೊಸ ದಂಡ ಮತ್ತು ಶುಲ್ಕಗಳನ್ನು ವಿಧಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ಹದಿನೈದು ವರ್ಷ ಮೇಲ್ಪಟ್ಟ ವಾಹನಗಳ ಅರ್ಹತಾ ಪರೀಕ್ಷೆ ಪರಿಷ್ಕೃತ ಶುಲ್ಕ ಮತ್ತು ದಂಡದ ಮೊತ್ತ ಹದಿನಾರು ಪಟ್ಟು ಹೆಚ್ಚಳ ಮಾಡಲಾಗಿದೆ. ಏಪ್ರಿಲ್ ಒಂದರಿಂದಲೇ ಪರಿಷ್ಕೃತ ಶುಲ್ಕ ಮತ್ತು ದಂಡ ವಸೂಲಿಗೆ ಸಾರಿಗೆ ಇಲಾಖೆ ಚಾಲನೆ ನೀಡಿದೆ.
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ದಿನ ವಹಿ ವಿಧಿಸುವ ಬಡ್ಡಿ ಮಾದರಿಯಲ್ಲಿ ಹದಿನೈದು ವರ್ಷ ಅವಧಿ ಮುಗಿದ ವಾಹನಗಳ ಅರ್ಹತಾ ಪರೀಕ್ಷೆ (ಫಿಟ್ನೆಸ್ ಸರ್ಟಿಫಿಕೇಟ್ ) ಮಾಡಿಸದಿದ್ದರೆ ದಿನ ವಹಿ ದಂಡ ಬೀಳಲಿದೆ. ದಿನಕ್ಕೆ 50 ರೂ. ನಂತೆ ದಂಡ ಬೀಳಲಿದೆ. ಒಂದು ವೇಳೆ ವಾಹನ ಚಾಲನೆಗೆ ಅರ್ಹತೆ ಇಲ್ಲ ಎಂದು ಸಾರಿಗೆ ಅಧಿಕಾರಿಗಳು ಷರಾ ಬರೆದರೆ, ಹೈವೇ ಪಕ್ಕದಲ್ಲಿರುವ ಗುಜರಿ ಕೇಂದ್ರಗಳಿಗೆ ಹಳೇ ವಾಹನವನ್ನು ಮಾರಾಟ ಮಾಡದೇ ಮಾಲೀಕರಿಗೆ ಬೇರೆ ವಿಧಿಯಿಲ್ಲ.

ದ್ವಿಚಕ್ರ ವಾಹನ FC ದಂಡ:
ಈ ಮೊದಲು ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸದ ಹದಿನೈದು ವರ್ಷ ಮೇಲ್ಪಟ್ಟ ದ್ವಿಚಕ್ರ ವಾಹನಕ್ಕೆ 200 ಗ್ರೀನ್ ಸೆಸ್, ಉಳಿದ 500 ರೂ. ಶುಲ್ಕ ಸೇರಿ ಒಟ್ಟು 700 ರೂ. ವಿಧಿಸಲಾಗುತ್ತಿತ್ತು. ಅವಧಿ ಮುಗಿದರೂ ಎಫ್‌ಸಿ ಮಾಡಿಸದ ಕಾರಣಕ್ಕೆ ಗರಿಷ್ಠ 2000 ದಂಡ ವಿಧಿಲಾಗುತ್ತಿತ್ತು. ಗುಜರಿ ನೀತಿಯ ಭಾಗವಾಗಿ ಏಪ್ರಿಲ್ 1 ರಿಂದ ಜಾರಿಗೆ ಬಂದಿರುವ ನಿಯಮದ ಪ್ರಕಾರ ಹದಿನೈದು ವರ್ಷ ಮೇಲ್ಪಟ್ಟ ದ್ವಿಚಕ್ರ ವಾಹನಕ್ಕೆ ನೋಂದಣಿ ಶುಲ್ಕ 300 ರೂ. 1000 ಶುಲ್ಕ, ಜತೆಗೆ ಮ್ಯಾನುಯಲ್ , ಅಟೋಮೆಟೆಡ್ ಶುಲ್ಕ 400 ಪ್ಲಸ್ 500 ರೂ. ಇದರ ಜತೆಗೆ ದಿನಕ್ಕೆ 50 ರೂ. ದಂಡ ವಿಧಿಸಲಾಗುತ್ತದೆ. ಎರಡು ಸಾವಿರಕ್ಕೂ ಹೆಚ್ಚು ಶುಲ್ಕ ಬೀಳಲಿದೆ. ಇಷ್ಟಾಗಿಯೂ ಆಟೋ ಮೆಟೆಟ್ ಪರೀಕ್ಷೆಯಲ್ಲಿ ಈ ವಾಹನ ನಪಾಸು ಆದ್ರೆ, ಗುಜರಿಗೆ ಹಾಕದೇ ಬೇರೆ ವಿಧಿಯಿಲ್ಲ. ಒಂದು ವೇಳೆ ಒಂದು ವರ್ಷ ವಾಹನವನ್ನು ಎಫ್ ಸಿ ಮಾಡಿಸದೇ ಹೋದಲ್ಲಿ ದಂಡದ ಮೊತ್ತವೇ 17,500 ರೂ. ಆಗಲಿದೆ! ವಾಹನ ಮಾರಿದ್ರೂ ಅದರ ಅರ್ಧದಷ್ಟು ಹಣ ಕೈಗೆ ಸಿಗಲ್ಲ.

ತ್ರಿಚಕ್ರ ವಾಹನ ಎಫ್ ಸಿ ಶುಲ್ಕ ಮತ್ತು ದಂಡ:
ಅಟೋ , ಲಗೇಜ್ ಆಟೋ ಸೇರಿದಂತೆ ತ್ರಿಚಕ್ರ ವಾಹನಗಳ ಪರಿಸ್ಕೃತ ಎಫ್‌ಸಿ ನೋಂದಣಿ ಶುಲ್ಕ 600 ರೂ. ಎಫ್ ಸಿ ಶುಲ್ಕ, ಟೆಸ್ಟ್ ಶುಲ್ಕ, ಮ್ಯಾನುಯಲ್ ಆಟೋ ಮೆಟೆಡ್ 3500 ರೂ. + 800 /1000 ಒಂದು ದಿನ ತಡವಾದ್ರೆ 50 ರೂ. ದಂಡ ಬೀಳಲಿದೆ. ಈಗಾಗಲೇ ಹದಿನೈದು ವರ್ಷ ಮೇಲ್ಪಟ್ಟ ತ್ರಿಚಕ್ರ ವಾಹನಗಳು ವರ್ಷಗಳಿಂದ ಎಫ್‌ಸಿ ಮಾಡಿಸದೇ ಕದ್ದು ಮುಚ್ಚಿ ಮಾಡುತ್ತಿವೆ. ಹಿಂದಿನ ಅವಧಿಗೂ ಈ ದಂಡ ಅನ್ವಯ ಆಗುತ್ತದೆ ಎಂದರೆ ಹದಿನೈದು ವರ್ಷ ಮೇಲ್ಪಟ್ಟ ಅದೆಷ್ಟೋ ಗೂಡ್ಸ್ ವಾಹನಗಳು ದಂಡ ಭರಿಸಲಾಗದೇ ಗುಜರಿ ಮನೆ ಸೇರಲಿವೆ.

ಎಲ್ಎಮ್ ವಿ:
ಕಾರು/ ಜೀಪು ಇತರೆ ವಾಹನ: ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ನಾಲ್ಕು ಚಕ್ರದ ಎಲ್ಎಂವಿ ವಾಹನಗಳಿಗೆ ಪರಿಷ್ಕೃತ ಶುಲ್ಕದ ಪ್ರಕಾರ, ನೋಂದಣಿ ಗೆ 600 ರೂ. ಎಫ್ ಸಿ ಶುಲ್ಕ 3500 ರೂ. ಮ್ಯಾನುಯಲ್ ಶುಲ್ಕ 800 / ಆಟೋ ಮೆಟೆಡ್ 1000 , ದಂಡದ ಮೊತ್ತ ದಿನಕ್ಕೆ 50 ರೂ. ಬೀಳಲಿದೆ. ಈ ಹಿಂದೆ ದಂಡವೂ ಸೇರಿಂತೆ ಎಲ್ಲವೂ ಸೇರಿ 1500 ರೂ. ಒಳಗೆ ಎಫ್ ಸಿ ಕಾರ್ಯ ಮುಗಿದು ಹೋಗಿತ್ತಿತ್ತು.

ಪ್ಯಾಸೆಂಜರ್ ಗಾಡಿ:
ನೋಂದಣಿ ಶುಲ್ಕ 1000 ರೂ. ಎಫ್ ಸಿ ಶುಲ್ಕ 10,000 ರೂ. ಮ್ಯಾನುಯಲ್ /ಆಟೋಮೆಟೆಡ್ 800 ರೂ./1300 ರೂ. ಬೀಳಲಿದೆ. ಎಫ್ ಸಿ ಮಾಡಿಸದೇ ಹೋದಲ್ಲಿ ದಿನಕ್ಕೆ 50 ರೂ. ದಂಡ ಪಾವತಿ ಮಾಡಬೇಕು. ಇಲ್ಲದಿದ್ದರೆ ಗುಜರಿಗೆ ಹಾಕಬೇಕು.

ಎಚ್‌ಎಂವಿ:
ಲಾರಿ ಬಸ್ ಇತರೆ ವಾಹನ: ಇನ್ನು ವಾಣಿಜ್ಯ ಬಳಕೆಯಲ್ಲಿರುವ ಯಲ್ಲೋ ಬೋರ್ಡ್ ಲಾರಿ, ಬಸ್ ಇತರೆ ವಾಹನಗಳ ಎಫ್ ಸಿ ನೋಂದಣಿ ಶುಲ್ಕ 1500 ರೂ. ಎಫ್ ಸಿ ಶುಲ್ಕ 12,500 ರೂ. ಪರೀಕ್ಷಾ ಶುಲ್ಕ 1500 /1000 ರೂ. ದಿನವಹಿ ದಂಡ 50 ರೂ. ಬೀಳಲಿದೆ. ಈ ಹಿಂದೆ ಇದ್ದ ಎಫ್ ಸಿ ಶುಲ್ಕಕ್ಕೆ ಹೋಲಿಸಿದ್ರೆ ಹತ್ತು ಪಟ್ಟು ಹೆಚ್ಚಳ ಮಾಡಲಾಗಿದೆ. ಮಿಗಿಲಾಗಿ ಹೊಸದಾಗಿ ಪರಿಚಯಿಸಿರುವ ದಿನವಹಿ ದಂಡ ಹಳೇ ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಲಿದೆ. ಹದಿನೈದು ವರ್ಷ ಮೇಲ್ಪಟ್ಟ ವಾಹನಗಳ ಎಫ್ ಸಿ ಪ್ರತಿ ವರ್ಷ ಕಡ್ಡಾಯವಾಗಿ ಮಾಡಿಸಬೇಕು.

ವಾಹನ ನವೀಕರಣ ಶುಲ್ಕ ಹೆಚ್ಚಳ:
ಎಫ್ ಸಿ ಮಾತ್ರವಲ್ಲದೇ ವಾಹನಗಳ ನವೀಕರಣ ಶುಲ್ಕ (RC ) ಕೂಡ ಹೆಚ್ಚಳ ಮಾಡಲಾಗಿದೆ. ಪರಿಸರ ಸಂರಕ್ಷಣೆ, ಆಟೋ ಮೊಬೈಲ್ ಕ್ಷೇತ್ರಕ್ಕೆ ಬೂಸ್ಟರ್ ಡೊಸ್ ಕೊಡುವ ನೆಪದಲ್ಲಿ ದೇಶದಲ್ಲಿ ಪರಿಚಯಿಸಿರುವ ಗುಜರಿ ನೀತಿಯಿಂದಾಗಿ ವಾಹನ ಮಾಲೀಕರು ಬಿಕರಿಯಾಗಲಿದ್ದಾರೆ.

ವಾಹನ ನೋಂದಣಿ ನವೀಕರಣ ಪರಿಷ್ಕೃತ ಶುಲ್ಕದ ವಿವರ
ವಾಹನದ ಹೆಸರು ನೋಂದಣಿ ಶಲ್ಕ ರೂ. ಆರ್ ಸಿ ಶುಲ್ಕ + ಸ್ಮಾರ್ಟ್ ಕಾರ್ಡ್ ಶುಲ್ಕ ದಂಡ
ದ್ವಿಚಕ್ರ ವಾಹನ 50 ರೂ. 1000 + 200 ರೂ. 300 ರೂ. ಮಾಸಿಕ
ತ್ರಿಚಕ್ರ ವಾಹನ 600 ರೂ. 2500 + 200 ರೂ. 500 ರೂ. ಮಾಸಿಕ
ಎಲ್ಎಂವಿ 600 ರೂ. 5000 + 200 ರೂ. 500 ರೂ. ಮಾಸಿಕ
ಇಂಪೋರ್ಟೆಡ್ 2 /3 ವ್ಹೀಲರ್ 2500 ರೂ. 10,000 +200 ರೂ. 500 ರೂ. ಮಾಸಿಕ
ಇಂಪೋರ್ಟೆಡ್ ಕಾರು ಇತರೆ 5000 ರೂ. 40000+200 ರೂ. 500 ರೂ. ಮಾಸಿಕ
ಉಳಿದ ಇತರೆ ವಾಹನ 3000 ರೂ. 6000 + 200 ರೂ. 500 ರೂ. ಮಾಸಿಕdh












Click it and Unblock the Notifications