Daily Horoscope May 15: ಮನೆ ನಿರ್ಮಾಣ ಯೋಗ, ಮನೆಯಲ್ಲಿ ಸಂಭ್ರಮದ ವಾತಾವರಣ, 12 ರಾಶಿಗಳ ದಿನ ಭವಿಷ್ಯ

Horoscope May 15: ಶುಕ್ರವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶುಕ್ರವಾರ ಸಾಮಾನ್ಯವಾಗಿ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇರುತ್ತದೆ. ಮೇ 15 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ನಿಮ್ಮ ವ್ಯಕ್ತಿತ್ವದ ಪ್ರಭಾವದಿಂದ ಶತ್ರುಗಳನ್ನು ಗೆಲ್ಲುವಿರಿ. ವಿದೇಶಿ ಉದ್ಯೋಗಗಳಿಗೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಸಿಗುತ್ತದೆ. ಹಳೆಯ ಹೂಡಿಕೆಗಳಿಂದ ಲಾಭ ಸಿಗುತ್ತದೆ. ಖರ್ಚುಗಳು ಹೆಚ್ಚಾಗುವುದು. ಉಳಿತಾಯದತ್ತ ಗಮನ ಹರಿಸಿ.

Horoscope May 15

ವೃಷಭ ರಾಶಿ:

ಹೊಸ ವ್ಯವಹಾರವನ್ನು ಪ್ರಾರಂಭಿಸುವವರಿಗೆ ಇಂದು ವಿಶೇಷ. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸಾಧಿಸುತ್ತಾರೆ. ಇನ್ನೊಬ್ಬರ ಮಾತನ್ನು ಕೇಳಿ ನಿರ್ಧಾರ ತೆಗೆದುಕೊಳ್ಳಬೇಡಿ. ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಬುದ್ಧಿವಂತಿಕೆಯಿಂದ ಆರ್ಥಿಕ ಲಾಭವಾಗುವುದು.

ಮಿಥುನ ರಾಶಿ:

ಅನಗತ್ಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಹಣಕಾಸಿನ ತೊಂದರೆ ಎದುರಾಗುವುದಿಲ್ಲ. ಸಂಬಂಧಿಕರ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಇದು ಸರಿಯಾದ ಸಮಯವಲ್ಲ. ಖರ್ಚುಗಳನ್ನು ನಿಯಂತ್ರಿಸಬೇಕು.

ಕರ್ಕಾಟಕ ರಾಶಿ:

ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಪೋಷಕರ ಬೆಂಬಲದಿಂದ ಸಮಸ್ಯೆಗಳು ಬಗೆಹರಿಯುತ್ತವೆ. ಹೂಡಿಕೆ ಮಾಡಲು ಅನುಕೂಲಕರ ಸಮಯ. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ.

ಸಿಂಹ ರಾಶಿ:

ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ನೆರೆಹೊರೆಯವರೊಂದಿಗೆ ಯಾವುದೇ ವಿವಾದಗಳಿದ್ದರೆ, ಅವುಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ಆದಾಯ ಹೆಚ್ಚಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಉತ್ತಮ ಅವಕಾಶಗಳು ದೊರೆಯುತ್ತವೆ.

ಕನ್ಯಾ ರಾಶಿ:

ಕಚೇರಿಯಲ್ಲಿ ನಿಮ್ಮ ಸಲಹೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಬುದ್ಧಿಶಕ್ತಿಯಿಂದ ಶತ್ರುಗಳ ಕುತಂತ್ರಗಳನ್ನು ತಡೆಯುವಿರಿ. ಮಕ್ಕಳ ವಿವಾಹ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಖರ್ಚುಗಳು ಹೆಚ್ಚಾಗುವುದು. ಕುತ್ತಿಗೆ ಅಥವಾ ಭುಜದ ನೋವು ನಿಮ್ಮನ್ನು ಕಾಡಬಹುದು.

ತುಲಾ ರಾಶಿ:

ಮನೆ ಅಥವಾ ಅಂಗಡಿ ಕಟ್ಟಲು ಬಯಸುವವರಿಗೆ ಸಮಯ ಅನುಕೂಲಕರವಾಗಿದೆ. ಸರ್ಕಾರಿ ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಐಷಾರಾಮಿ ವಸ್ತುಗಳ ಖರೀದಿಗೆ ಖರ್ಚು ಮಾಡುವಿರಿ. ಆದಾಯ ಉತ್ತಮವಾಗಿರುತ್ತದೆ.

ವೃಶ್ಚಿಕ ರಾಶಿ:

ಸಂಗಾತಿಯಿಂದ ಉಡುಗೊರೆ ಸಿಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಪ್ರಯತ್ನಗಳು ಫಲ ನೀಡುತ್ತವೆ. ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭ ದೊರೆಯುತ್ತದೆ. ತಂದೆಗೆ ಆರೋಗ್ಯ ಸಮಸ್ಯೆ ಕಾಡಬಹುದು.

ಧನು ರಾಶಿ:

ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯ. ಆಕರ್ಷಕ ವ್ಯಕ್ತಿತ್ವದಿಂದ ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಆಸ್ತಿಯ ಮೂಲಕ ಲಾಭ ಗಳಿಸುವಿರಿ. ಹೊಸ ಆಸ್ತಿಯನ್ನು ಖರೀದಿಸಲು ಇದು ಒಳ್ಳೆಯ ಸಮಯ.

ಮಕರ ರಾಶಿ:

ವ್ಯವಹಾರಕ್ಕೆ ಸಂಬಂಧಿಸಿದ ಶುಭ ಸುದ್ದಿ ಕೇಳುವಿರಿ. ಆದಾಯದಲ್ಲಿ ಹೆಚ್ಚಳವಾಗುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಕುಟುಂಬದಲ್ಲಿನ ಹಳೆಯ ಜಗಳಗಳು ಬಗೆಹರಿಯುವುದು.

ಕುಂಭ ರಾಶಿ:

ಉದ್ಯಮಿಗಳು ನಿರೀಕ್ಷಿತ ಲಾಭಕ್ಕಾಗಿ ಶ್ರಮಿಸಬೇಕಾಗುತ್ತದೆ. ಭೂ ವಿವಾದಗಳು ಬಗೆಹರಿಯುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಕಚೇರಿಯಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಒತ್ತಡವನ್ನು ಉಂಟುಮಾಡುತ್ತವೆ. ಸಾಲ ನೀಡಿರುವ ಹಣ ಮತ್ತೆ ಕೈ ಸೇರುವುದು.

ಮೀನ ರಾಶಿ:

ಕೋಪವನ್ನು ನಿಯಂತ್ರಿಸಲೇಬೇಕು. ಇಲ್ಲವಾದರೆ ಶತ್ರುಗಳು ಲಾಭ ಪಡೆಯುವ ಸಾಧ್ಯತೆ ಹೆಚ್ಚು. ಆರ್ಥಿಕ ತೊಂದರೆಗಳು ಬಗೆಹರಿಯುತ್ತವೆ. ಯಾವುದೇ ಪ್ರಮುಖ ಹೂಡಿಕೆಗಳನ್ನು ಮಾಡುವ ಮೊದಲು ಮನೆ ಮಂದಿ ಜೊತೆ ಚರ್ಚಿಸಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+