ಮುಂದಿನ 7 ದಿನಗಳ ಕಾಲ ಭಾರಿ ಮಳೆ, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Heavy Rain
ಶ್ರಾವಣ ಸಂಭ್ರಮದ ನಡುವೆ ಮಳೆ.. ಮಳೆ.. ಎಲ್ಲೆಲ್ಲೂ ಮುಂಗಾರು ಮಳೆ ಅಬ್ಬರ ಶುರುವಾಗಿ ಜನರು ಕೂಡ ಮಳೆ ಯಾವಾಗ ನಿಲ್ಲುತ್ತೆ? ಅಂತಾ ಪ್ರಶ್ನೆ ಕೇಳುವಂತೆ ಆಗಿದೆ. ಯಾಕಂದ್ರೆ ಕರ್ನಾಟಕದ ಮೂಲೆ, ಮೂಲೆಯಲ್ಲೂ ಇದೀಗ ಭಾರಿ ಭರ್ಜರಿ ಮಳೆ ಸುರಿಯುತ್ತಾ ಇದ್ದು ಹಲವು ಕಡೆ ರಣಮಳೆ ಭಯ ಶುರು ಆಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಘಿದೆ. ಇಂತಹ ಸಮಯದಲ್ಲೇ, ಮುಂದಿನ 7 ದಿನಗಳ ಕಾಲ ಭಾರಿ ಮಳೆ, ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಅಂದಹಾಗೆ ಮುಂದಿನ 4 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಸುರಿದು ಹಲವು ಸಮಸ್ಯೆ ಎದುರಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಜಿಲ್ಲೆ ಉತ್ತರ ಕನ್ನಡ & ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ ಅಬ್ಬರಿಸುವುದು ಗ್ಯಾರಂಟಿ ಆಗುತ್ತಿದೆ. ಈ ಹಿನ್ನೆಲೆ ಭಾರಿ ಕಟ್ಟೆಚ್ಚರ ಕೈಗೊಳ್ಳಲಾಗಿದ್ದು, ಕರಾವಳಿ ಮಾತ್ರವಲ್ಲದೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಕೂಡ ಮಳೆಯ ಕಾಟ ಇರಲಿದೆ ಎಂದು ಇದೀಗ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ & ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೀಗ ಭಾರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಸಿಕ್ಕಿದೆ.

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ?
ಇನ್ನೊಂದು ಕಡೆ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೂ ಭಾರಿ ಮಳೆಯ ಕಾಟ ಇರಲಿದೆ ಎಂದು ಇದೀಗ ಮುನ್ನೆಚ್ಚರಿಕೆ ನೀಡಿರುವುದು ಭಾರಿ ಆತಂಕ ಮೂಡಿಸಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ ಜಿಲ್ಲೆ, ಬೆಳಗಾವಿ ಜಿಲ್ಲೆ, ಬೀದರ್ ಜಿಲ್ಲೆ ಸೇರಿ ಧಾರವಾಡ ಹಾಗೂ ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಜಿಲ್ಲೆಯಲ್ಲೂ ಭಾರಿ ಮಳೆ ಸುರಿಯುವ ಬಗ್ಗೆ ಮುನ್ಸೂಚನೆ ಇದೆ.
ಇದರ ಜೊತೆಗೆ ರಾಯಚೂರು, ವಿಜಯಪುರ & ಯಾದಗಿರಿ ಜಿಲ್ಲೆಗಳಲ್ಲೂ ಭಾರಿ ಮಳೆ ಕುರಿತು ಮುನ್ನೆಚ್ಚರಿಕೆ ಇದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಗಸ್ಟ್ 5 ಮಂಗಳವಾರ ನಂತರದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿಯೇ ಕಾದು ನೋಡಬೇಕಿದ್ದು, ಮುಂಗಾರು ಮಳೆ ಕಡಿಮೆ ಆಗುವ ಬದಲು ಮತ್ತಷ್ಟು ಹೆಚ್ಚಾಗುತ್ತಿರುವುದು ನೆರೆ ಹಾವಳಿ ಬಗ್ಗೆ ಭಯ ಮೂಡುವಂತೆ ಮಾಡಿದೆ.












Click it and Unblock the Notifications