School Holiday: ಜುಲೈ 18 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಕರ್ನಾಟಕದಲ್ಲಿ ಸಾಲು, ಸಾಲು ರಜೆ ಶಾಲಾ & ಕಾಲೇಜುಗಳಿಗೆ ಘೋಷಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಶಾಲಾ & ಕಾಲೇಜುಗಳಿಗೆ ರಜೆ ಕೊಟ್ಟರೆ ವಿದ್ಯಾರ್ಥಿಗಳು ಸಿಕ್ಕಾಪಟ್ಟೆ ಖುಷಿಯಲ್ಲಿ ಕುಣಿದಾಡುತ್ತಾ, ಎಂಜಾಯ್ ಮಾಡ್ತಾರೆ. ಆದರೆ ರಜೆ ಕೊಟ್ಟರೆ ಶಾಲಾ & ಕಾಲೇಜುಗಳಲ್ಲಿ ಪಾಠ ಮತ್ತೆ ಹೇಗೆ ಮಾಡೋದು? ಅನ್ನೋ ಚಿಂತೆ ಶುರುವಾಗುತ್ತದೆ. ಈ ಮೂಲಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕಾ? ಮಾಡಬಾರದಾ? ಅನ್ನೋ ಚರ್ಚೆ ಕೂಡ ಇದೀಗ ಜೋರಾಗಿದೆ. ಹೀಗಿದ್ದಾಗಲೇ, ಜುಲೈ 18 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಪದೇ ಪದೇ ರಜೆ ಸಿಗುತ್ತಿದೆ. ರಜೆ.. ರಜೆ.. ರಜೆ... ಹಿಂಗೆ ಶಾಲಾ & ಕಾಲೇಜುಗಳಿಗೆ ರಜೆ ಸಿಕ್ಕರೆ ಮಕ್ಕಳಿಗೆ ಫುಲ್ ಖುಷಿ, ಆದರೆ ಹೀಗೆ ಶಾಲಾ & ಕಾಲೇಜಿಗೆ ರಜೆ ಕೊಟ್ಟರೆ, ಮಕ್ಕಳ ಪೋಷಕರಿಗೆ ಸಿಕ್ಕಾಪಟ್ಟೆ ತಲೆನೋವು ಎದುರಾಗಲಿದೆ. ಈ ಮಾತು ಯಾಕಪ್ಪಾ ಅಂದ್ರೆ ಶಾಲಾ & ಕಾಲೇಜುಗಳಿಗೆ ರಜೆ ಕೊಟ್ಟ ನಂತರ ಮಕ್ಕಳು ಮನೆಯಲ್ಲೇ ಇದ್ದರೆ, ಅಪ್ಪ & ಅಮ್ಮನಿಗೆ ಚಿಂತೆ ಶುರುವಾಗುತ್ತೆ ಅನ್ನೋ ಮಾತು ಇದೆ. ಇದರ ಜೊತೆಗೆ ಶಿಕ್ಷಕರು ಕೂಡ ಪಾಠ ಮುಗಿಸಲು ಒದ್ದಾಡಬೇಕು. ಇಷ್ಟೆಲ್ಲದರ ನಡುವೆಯೂ ಇದೀಗ ಮಳೆಯ ಕಾರಣಕ್ಕೆ ರಜೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಶುಕ್ರವಾರ ರಜೆ ಘೋಷಣೆ ಆಗುತ್ತಾ?
ಹೌದು, ಜುಲೈ 18 ಶುಕ್ರವಾರ ಬೆಂಗಳೂರು ಸೇರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಮಲೆನಾಡು ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆ ಸುರಿಯಲಿದೆ ಎನ್ನಲಾಗಿದೆ. ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಜುಲೈ 18 ಶುಕ್ರವಾರ ನಂತರ ಭಾರಿ ಮಳೆ ಆಗುವ ಮುನ್ಸೂಚನೆ ಇದೆ. ಅದರಲ್ಲೂ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೂಡ ಈಗ ಘೋಷಣೆ ಮಾಡಲಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲೂ ಇದೀಗ ಮಳೆಯ ಅಬ್ಬರ ಜೋರಾಗುವ ಮುನ್ಸೂಚನೆ ಸಿಕ್ಕಿದೆ...
ಮಳೆ.. ಮಳೆ.. ಮಳೆ.. ಮಳೆ..
ಹೀಗೆ ಮಳೆಯ ಅಬ್ಬರ ಭಾರಿ ಹೆಚ್ಚಾಗುತ್ತಿರುವ ಕಾರಣಕ್ಕೆ ಇದೀಗ ಎಲ್ಲವೂ ಅಯೋಮಯ ಆಗಿ ಹೋಗಿ ಜನ ಪರದಾಡುವಂತೆ ಆಗಿದೆ. ಅದರಲ್ಲೂ ಮಳೆಯ ಅಬ್ಬರ ಕಾರಣಕ್ಕೆ ಜನರು ಇದೀಗ ಹೊರ ಬರುವ ಆಲೋಚನೆ ಬಿಟ್ಟು ಬಿಡಬೇಕು. ಯಾಕಂದ್ರೆ ಅಷ್ಟು ಜೋರಾಗಿ ಮಳೆ ಸುರಿಯುವ ಮುನ್ಸೂಚನೆ ಇದೀಗ ಸಿಗುತ್ತಿದೆ. ಹೀಗಾಗಿ ಶುಕ್ರವಾರ & ಶನಿವಾರ ಮಳೆರಾಯ ತನ್ನ ಅಸಲಿ ರೂಪವನ್ನ ತೋರಿಸಲಿದ್ದಾನೆ ಅಂತಾ ಹೇಳಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಜುಲೈ 18 ಶುಕ್ರವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆಯು ಇದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಗುರುವಾರ ಸಂಜೆಯ ಒಳಗಾಗಿ ಅಧಿಕೃತ ಮಾಹಿತಿ ಸಿಗುವ ನಿರೀಕ್ಷೆ ಇದೆ.












Click it and Unblock the Notifications