School Holiday: ಇಂದಿನಿಂದ ಶಾಲಾ & ಕಾಲೇಜುಗಳು ಮತ್ತೆ ಆರಂಭ, ದಸರಾ ರಜೆ ಮುಕ್ತಾಯ...
ಶಾಲಾ & ಕಾಲೇಜುಗಳ ರಜೆ ಮುಕ್ತಾಯವಾಗಿದೆ, ಇಂದಿನಿಂದ ಶಾಲಾ & ಕಾಲೇಜುಗಳು ಮತ್ತೆ ಆರಂಭ ಆಗಲಿವೆ. ಈ ಸುದ್ದಿ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೇಸರ ತರಿಸಿದ್ದರೂ, ಇವತ್ತಿನಿಂದಲೇ ಅವರೆಲ್ಲಾ ಪಾಠ ಕೇಳಲು ಹೋಗಬೇಕಿದೆ. ಅಂದಹಾಗೆ ಶಾಲಾ & ಕಾಲೇಜುಗಳ ದಸರಾ ರಜೆ ಮುಕ್ತಾಯ ಆಗಿದ್ದು, ವಿದ್ಯಾರ್ಥಿಗಳು ವಾಪಸ್ ಬರಲು ಸೂಚನೆ ನೀಡಲಾಗಿದೆ. ಈಗಾಗಲೇ ಸುಮಾರು 18 ದಿನಗಳ ಕಾಲ ದಸರಾ ಹಬ್ಬದ ರಜೆ ಪಡೆದಿದ್ದ ವಿದ್ಯಾರ್ಥಿಗಳಿಗೆ ಇದು ಒಂದಷ್ಟು ಬೇಸರ ತರಿಸಿದೆ!
ಶಾಲಾ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಕರ್ನಾಟಕದಲ್ಲಿ 2025 ಆರಂಭದಲ್ಲೇ ಶಾಲಾ & ಕಾಲೇಜುಗಳಿಗೆ ಭಾರಿ ರಜೆ ಘೋಷಣೆ ಮಾಡಿದ್ದರು. ನಂತರ ಶ್ರಾವಣ ಮಾಸ ಶುರುವಾಗಿ ಸಾಲು, ಸಾಲಾಗಿ ಹಬ್ಬಗಳು ಬಂದಿದ್ದ ಕಾರಣಕ್ಕೆ ಮತ್ತೆ ಶಾಲಾ & ಕಾಲೇಜುಗಳಿಗೆ ಸಾಲು & ಸಾಲು ರಜೆ ಸಿಕ್ಕಿವೆ. ಅದರಲ್ಲೂ ದಸರಾ ರಜೆ ಅಂತಾ ಸುದೀರ್ಘ ಬರೋಬ್ಬರಿ 18 ದಿನಗಳ ಕಾಲ ರಜೆಯನ್ನ ಎಂಜಾಯ್ ಮಾಡಿದ್ದಾರೆ ಲಕ್ಷ ಲಕ್ಷ ವಿದ್ಯಾರ್ಥಿಗಳು. ಹೀಗಿದ್ದಾಗ ದಿಢೀರ್ ಇಂದಿನಿಂದ ಮತ್ತೆ ಶಾಲಾ & ಕಾಲೇಜುಗಳಿಗೆ ವಿದ್ಯಾರ್ಥಿಗಳು ವಾಪಸ್ ಆಗಬೇಕಿದೆ...

ಇಂದಿನಿಂದ ಶಾಲಾ & ಕಾಲೇಜುಗಳು ಶುರು...
ಹೌದು, ಖಾಸಗಿ ಶಾಲೆಗಳು & ಖಾಸಗಿ ಕಾಲೇಜುಗಳು ಇಂದಿನಿಂದ ಮತ್ತೆ ಶುರುವಾಗುತ್ತಿವೆ. ಹೀಗಾಗಿ, ಖಾಸಗಿ ಶಾಲೆಗಳು & ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಇದೀಗ ಮತ್ತೊಮ್ಮೆ ಪಾಠ ಕೇಳಲು ವಾಪಸ್ ಹೋಗುವ ಅನಿವಾರ್ಯತೆ ಇದೆ. ಬರೋಬ್ಬರಿ 18 ದಿನಗಳ ಕಾಲ ದಸರಾ ಹಬ್ಬದ ರಜೆಯನ್ನ ಪಡೆದಿದ್ದ ವಿದ್ಯಾರ್ಥಿಗಳಿಗೆ ಈಗ ಮತ್ತೆ ಪರೀಕ್ಷೆ & ಪಾಠದ ಚಿಂತೆ ಶುರುವಾಗಿದೆ...
ಖಾಸಗಿ ಶಾಲೆಗಳಿಗೆ ರಜೆ ಇಲ್ಲ...
ಕರ್ನಾಟಕದ ಸರ್ಕಾರಿ ಶಾಲೆಗಳಿಗೆ ಮಾತ್ರ ದಸರಾ ರಜೆ ವಿಸ್ತರಣೆ ಮಾಡಿದೆ ಸರ್ಕಾರ, ಆದರೆ ಖಾಸಗಿ ಶಾಲಾ & ಕಾಲೇಜುಗಳು ಇಂದಿನಿಂದ ಆರಂಭ ಆಗಿವೆ. ಹೀಗೆ, ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ನಿನ್ನೆ ಅಂದ್ರೆ ಅಕ್ಟೋಬರ್ 7 ಬುಧವಾರದಂದು ದಿಢೀರ್ ಅಂತಾ ಕರ್ನಾಟಕದಲ್ಲಿ ಸರ್ಕಾರಿ ಶಾಲಾ & ಕಾಲೇಜುಗಳಿಗೆ ದಸರಾ ರಜೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದರು ಸಿಎಂ ಸಿದ್ದರಾಮಯ್ಯ ಅವರು. ಶಾಲಾ & ಕಾಲೇಜುಗಳಿಗೆ ದಸರಾ ರಜೆ ವಿಸ್ತರಣೆ ಆಗಬಹುದು ಎಂಬ ಬಗ್ಗೆ ಹಲವು ದಿನಗಳ ಕಾಲ ಚರ್ಚೆ ನಡೆಯುತ್ತಾ ಇತ್ತು, ಇಂತಹ ಸಮಯದಲ್ಲೇ ದಸರಾ ರಜೆ ದಿಢೀರ್ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 18 ಶನಿವಾರ ತನಕ ಸರ್ಕಾರಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಿ, ರಜೆ ವಿಸ್ತರಣೆ ಮಾಡುವ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರ. ಆದರೆ ಖಾಸಗಿ ವಿದ್ಯಾಸಂಸ್ಥೆಗಳು ಇದೀಗ ಆರಂಭವಾಗಿವೆ.
ಭಾರಿ ಮಳೆಯಿಂದ ನೆರೆ ಸಮಸ್ಯೆ
ಮಳೆ.. ಮಳೆ.. ಮಳೆ.. ಎಲ್ಲಾ ಕಡೆಯೂ ಮಳೆ ಸುರಿದು ನೆರೆ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ. ಮಳೆ ಆರ್ಭಟ ನೋಡುತ್ತಿದ್ದರೆ ಭಯದ ವಾತಾವರಣ ಸೃಷ್ಟಿಯಾಗಿದೆ, ಎಲ್ಲಿ ನೋಡಿದರೂ ಬರೀ ಈ ಮಳೆಯದ್ದೇ ಅಬ್ಬರ. ನೋಡ ನೋಡುತ್ತಲೇ ಯರ್ರಾಬಿರ್ರಿ ಸುರಿಯಲು ಶುರು ಮಾಡಿರುವ ವರಣದೇವ ಭರ್ಜರಿ ಆರ್ಭಟ ತೋರಿಸುತ್ತಿದ್ದಾನೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಈಗ ಭಾರಿ ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 12 ಗಂಟೆ ಸತತ ಸುರಿದ ಭರ್ಜರಿ ಮಳೆ ನೂರಾರು ಸಮಸ್ಯೆ ಸೃಷ್ಟಿ ಮಾಡಿದೆ. ಹಾಗೇ ಇನ್ನೂ 72 ಗಂಟೆಗಳ ಕಾಲ ಮತ್ತೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications