ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... School Holiday

ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೌದು ಇದೀಗ ಇಂತಹ ಒಂದು ಸುದ್ದಿ ಹೊರ ಬಿದ್ದಿದೆ. ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮುಂಗಾರು ಮಳೆ ಮೋಡಗಳು ದಾಳಿ ಮಾಡುತ್ತಿವೆ. ಅದರಲ್ಲೂ ಕೆಲವು ಜಿಲ್ಲೆಗಳ ಜನರು ಹೊರಗೆ ಬರುವುದಕ್ಕೆ ಕೂಡ ಆಗದ ಪರಿಸ್ಥಿತಿ ಎದುರಾಗಿದ್ದು, ಭಾರಿ ಭರ್ಜರಿ ಮಳೆ ಶುರುವಾಗಿದೆ. ಇದೇ ಕಾರಣಕ್ಕೆ ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ...

ಮಳೆ.. ಮಳೆ.. ಎಲ್ಲೆಲ್ಲೂ ಮಳೆ ಸದ್ದು ಜೋರಾಗಿದ್ದು ಹೊಸ ಹೊಸ ಅವಾಂತರಗಳು ಈಗ ಸೃಷ್ಟಿಯಾಗಿವೆ. ಮಳೆಗಾಲ ಆರಂಭವಾಗಿ ಇನ್ನೂ 2 ತಿಂಗಳು ಕಳೆದಿಲ್ಲ, ಆಗಲೇ ಎಲ್ಲಾ ಜಲಾಶಯಗಳು ತುಂಬಿ ಹೋಗಿವೆ. ಮಳೆ ಈ ರೀತಿಯಾಗಿ ಅಬ್ಬರಿಸುತ್ತಿರುವುದು ನೋಡಿದ ಜನ ಗೊಣಗುತ್ತಿದ್ದಾರೆ, ಅಲ್ಲದೆ ಹೀಗೆ ಸುರಿಯುತ್ತಿರುವ ಮಳೆ ನಿಂತು ಹೋಗಲಿ ದೇವರೆ ಅಂತಾ ಬೇಡುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಹೀಗಿದ್ದಾಗಲೇ ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ರಜೆ ಘೋಷಣೆ ಆಗಿದೆ? ಮುಂದೆ ಓದಿ...

School Holiday Announced In These Parts Of Karnataka On July 26 Of 2025

ಜುಲೈ 26 ಶನಿವಾರ ಶಾಲಾ & ಕಾಲೇಜುಗಳಿಗೆ ರಜೆ!

ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆ ಸುರಿಯುತ್ತಿದೆ. ಹೌದು, ಜುಲೈ 25 ಶುಕ್ರವಾರ ಕೂಡ ಭಾರಿ ಘೋರವಾಗಿ ಮಳೆ ಬರುತ್ತಿರುವ ಕಾರಣಕ್ಕೆ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಮತ್ತೊಂದು ಕಡೆ ಉತ್ತರ ಕರ್ನಾಟಕ ಭಾಗದಲ್ಲಿ ಕೂಡ ಮಳೆ ತನ್ನ ಅಸಲಿ ರೂಪ ತೋರಿಸುತ್ತಿದ್ದು ಈಗಾಗಲೇ ಬೀದರ್, ವಿಜಯಪುರ, ಬಾಗಲಕೋಟೆ & ರಾಯಚೂರು, ಬಳ್ಳಾರಿ ಸೇರಿದಂತೆ ಬೆಳಗಾವಿ, ಹುಬ್ಬಳ್ಳಿ & ಧಾರವಾಡ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ? ಮುಂದೆ ಓದಿ.

ಇನ್ನೂ ಹಲವು ದಿನಗಳ ಕಾಲ ಇದೇ ರೀತಿಯಾಗಿ ಕರ್ನಾಟಕದ ಬಹುತೇಕ ಎಲ್ಲಾ ಭಾಗಕ್ಕೆ ಮಳೆ ಮೋಡಗಳು ಅಪ್ಪಳಿಸುವುದು ಕನ್ಫರ್ಮ್ ಆಗಿದೆ. ಈ ಕಾರಣಕ್ಕೆ ಜುಲೈ 26 ಶನಿವಾರ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂಗಾರು ಮಳೆ ಅಬ್ಬರ ಹಿನ್ನೆಲೆ ಜುಲೈ 26 ಉತ್ತರ ಕನ್ನಡ, ಹಾಸನ ಸೇರಿ ಚಿಕ್ಕಮಗಳೂರು ಜಿಲ್ಲೆಗಳ ಹಲವು ತಾಲೂಕುಗಳ ಶಾಲೆಗಳಿಗೆ ಈ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ & ಭಟ್ಕಳ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಶೃಂಗೇರಿ, ಎನ್‌ಆರ್‌ ಪುರ, ಕೊಪ್ಪ ತಾಲೂಕು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಹಲವು ಜಿಲ್ಲೆಗಳ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಮಳೆ ಕಾರಣ ದಿಢೀರ್ ರಜೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ...

ಭಾರಿ ಮಳೆ ಹಿನ್ನೆಲೆ ಕಟ್ಟೆಚ್ಚರ

ಎಲ್ಲಾ ಕಡೆ ಮಳೆ ಅಬ್ಬರ ಜೋರಾಗಿದ್ದು, ಇದೀಗ ಭಾರಿ ಮಳೆ ಕಾರಣಕ್ಕೆ ಹಲವು ಅವಾಂತರ ಎದುರಾಗಿದೆ. ಭಾರಿ ಮಳೆಯ ಅಬ್ಬರಕ್ಕೆ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿದ್ದು, ಇದೀಗ ಸುರಿಯುತ್ತಿರುವ ಮಳೆ ಅಬ್ಬರ ಕಂಡು ಕರ್ನಾಟಕದ ರೈತರು & ಸಾಮಾನ್ಯ ಜನರು ಭಯ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ, ಅಷ್ಟು ಜೋರಾಗಿ ಮಳೆ ಅಬ್ಬರಿಸುತ್ತಿರುವ ಕಾರಣಕ್ಕೆ ಯಾವ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತೋ? ಅನ್ನೋ ಆತಂಕ ಎದುರಾಗಿದೆ. ಇಂತಹ ಸಮಯದಲ್ಲೇ ಮತ್ತಷ್ಟು ಮಳೆ ಸುರಿಯುವ ಬಗ್ಗೆ ಈಗ ವಾರ್ನಿಂಗ್ ಕೊಡಲಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜೊತೆಗೆ ಭಾರಿ ಘೋರವಾಗಿ, ನಿರಂತರವಾಗಿ ಮಳೆ ಸುರಿಯುತ್ತಿರುವ ಜಿಲ್ಲೆಗಳಲ್ಲಿ ಇದೀಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆಯನ್ನ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+