ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ರಾಮಚಂದ್ರಾಪುರ ಮಠದ ಸಹಾಯಹಸ್ತ

Posted By:
Subscribe to Oneindia Kannada

ಬೆಂಗಳೂರು, ಮಾ 17: ಗಿರಿನಗರದ ರಾಮಾಶ್ರಮದಲ್ಲಿ ಭಾನುವಾರದಂದು (ಮಾ 20) ಮಧ್ಯಾಹ್ನ 12.30 ಗಂಟೆಗೆ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಟ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿ ವೇತನ' ನೀಡುವ ಕಾರ್ಯಕ್ರಮವನ್ನು ಮಠದ ವಿದ್ಯಾ ವಿಭಾಗ ಹಮ್ಮಿಕೊಂಡಿದೆ.

ಮುಕ್ರಿ ಸಮಾಜವು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ವಾಸವಾಗಿರುವ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಮುಕ್ರಿ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವ ಕೆಲಸವನ್ನು ಮಠದ ವಿದ್ಯಾ ವಿಭಾಗ ಕಳೆದ ಕೆಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. (ಶಿವನ ಪಾದ ಸೇರಿದ ಮಹಾಬಲೇಶ್ವರನ ರಾಜನಂದಿ)

Scholarship to Mukhri community students from Ramachandrapura Math

ಆ ಮೂಲಕ ಆ ವರ್ಗದ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ದಿಶೆಯಲ್ಲಿ ರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದಿಂದ ಈ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ.

ಈ ವರ್ಷ ಎಸ್.ಎಸ್.ಎಲ್.ಸಿ, ಪಿಯುಸಿ, ಬಿಎ, ಬಿಕಾಂ, ಐಟಿಐ, ನರ್ಸಿಂಗ್, ಎಂಕಾಂ, ಎಂಎ ವ್ಯಾಸಂಗ ಮಾಡುತ್ತಿರುವ ಮುಕ್ರಿ ಸಮಾಜದ 63 ವಿದ್ಯಾರ್ಥಿಗಳಿಗೆ ಒಟ್ಟು ರೂ. 2,75,000/- ರೂಗಳ ವಿದ್ಯಾರ್ಥಿ ವೇತನವನ್ನು ಮಾರ್ಚ್ 20ರಂದು ವಿತರಿಸಲಾಗುತ್ತಿದೆ.

ಮಠದ ಉಚಿತ ವೇದ ಪಾಠಶಾಲೆಗಳಲ್ಲಿ ಸಾವಿರಾರು ಜನ ಕಲಿತಿದ್ದು, ಹೊಸನಗರದ ಶ್ರೀಭಾರತೀ ಗುರುಕುಲದಲ್ಲಿ ಉಚಿತವಾಗಿ ವೇದ, ಸಂಸ್ಕೃತ ಮತ್ತು ಆಧುನಿಕ ವಿದ್ಯಾಭ್ಯಾಸವನ್ನು ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಡುತ್ತಿದೆ.

Scholarship to Mukhri community students from Ramachandrapura Math

ರಾಮಚಂದ್ರಾಪುರ ಮಠದ ವತಿಯಿಂದ ಇಮಾಮಿ ಫೌಂಡೇಷನ್ ಮುಂತಾದ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಯಾವುದೇ ಜಾತಿ ಧರ್ಮಗಳ ತಾರತಮ್ಯವಿಲ್ಲದೇ ಗೋಕರ್ಣ ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳಿಗೆ "ಸಾರ್ವಭೌಮ ವಿದ್ಯಾರ್ಥಿವೇತನ"ವನ್ನು ವಿತರಿಸಲಾಗುತ್ತಿದೆ. (ನಮ್ಮ ನೆಲವನ್ನು ಮರೆಯದಿದಿರಿ)

2014-15 ರಲ್ಲಿ ಗೋಕರ್ಣ ಸುತ್ತಮುತ್ತಲಿನ ಐದು ಹಳ್ಳಿಗಳ ಎಲ್ಲಾ ಸಮಾಜದ 247 ವಿದ್ಯಾರ್ಥಿಗಳಿಗೆ ರೂ. 14,50,000/- ಗಳನ್ನು, 2015-16 ಸಾಲಿನಲ್ಲಿ ಗೋಕರ್ಣ ಸುತ್ತಲಿನ 8 ಹಳ್ಳಿಗಳ ಎಲ್ಲಾ ಸಮಾಜದ 649 ವಿದ್ಯಾರ್ಥಿಗಳಿಗೆ ರೂ. 19,41,000/- ರೂಗಳ ಸಾರ್ವಭೌಮ ವಿದ್ಯಾರ್ಥಿ ವೇತನವನ್ನು ಮಠದ ವಿದ್ಯಾ ವಿಭಾಗ ವಿತರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ramachandrapura Math of Hosangar issuing Scholarship to students of Mukhri Community on March 20 at Bengaluru.
Please Wait while comments are loading...