ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆ ಖಾಯಂ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 03: ವಿಕೃತಕಾಮಿ ಹಾಗೂ ಸರಣಿ ಹಂತಕ ಉಮೇಶ ರೆಡ್ಡಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಅಕ್ಟೋಬರ್ 03) ಎತ್ತಿ ಹಿಡಿದಿದೆ. ಸುಮಾರು 12 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ನಿಂದ ಮಂಗಳವಾರ ಮಹತ್ವದ ಆದೇಶ 2011ರಲ್ಲಿ ಹೊರಬಿದ್ದಿತ್ತು.

1998ರಲ್ಲಿ ಉಮೇಶ್ ರೆಡ್ಡಿ ಜಯಶ್ರೀ ಎಂಬ ಮಹಿಳೆಯ ಕೈಯನ್ನು ಕಟ್ಟಿ ಅತ್ಯಾಚಾರ ಎಸಗಿದ್ದ, ಆ ಬಳಿಕ ಆಕೆಯನ್ನು ಕೊಂದು ಹಾಕಿ ಮನೆಯಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಇನ್ನೊಂದು ಮನೆಯಲ್ಲೂ ಇದೇ ರೀತಿಯ ಅಪರಾಧ ಎಸಗಲು ಯತ್ನಿಸಿದಾಗ ಆತನನ್ನು ಬಂಧಿಸಲಾಗಿತ್ತು. [ಉಮೇಶ್ ರೆಡ್ಡಿ ಕ್ಷಮಾದಾನ ತಿರಸ್ಕರಿಸಿದ ಬಿಜೆಪಿ ಸಂಪುಟ]

SC upholds HC order on Rapist Umesh Reddy Death Penalty

ಎಂಟು ವರ್ಷಗಳ ದೀರ್ಘ ವಿಚಾರಣೆಯ ಬಳಿಕ ಸೆಷನ್ಸ್ ಕೋರ್ಟ್ 2006ರ ಅಕ್ಟೋಬರ್ 26ರಂದು ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು.[ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಮರಣದಂಡನೆ]

ಅತ್ಯಾಚಾರ, ಕೊಲೆ, ಚಿನ್ನಾಭರಣ ಕಳವು ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಮಾಜಿ ಕಾನ್ಸ್ ಟೇಬಲ್ ಉಮೇಶ್‌ ರೆಡ್ಡಿ ವಿರುದ್ಧ 23 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court on Monday(October 03) upheld the death sentence of former police constable Umesh Reddy, alias B A Umesh, and known as Jack the Ripper, who was convicted of the gruesome rape and murder of a widow in Bengaluru and followed by several rape and murder cases.
Please Wait while comments are loading...