ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಸಾಹುಕಾರ್ ಸತೀಶ್ ಜಾರಕಿಹೊಳಿ ಸವಾಲ್! 2028ಕ್ಕೆ ಸಿಎಂ ಕುರ್ಚಿಯತ್ತ ಚಿತ್ತ?
Satish Jarkiholi : ಬೆಳಗಾವಿಯಿಂದ ಬೆಂಗಳೂರಿನವರೆಗೆ ಸತೀಶ್ ಜಾರಕಿಹೊಳಿ ಅವರ ರಾಜಕೀಯ ಪ್ರಭಾವದ ಚರ್ಚೆ! ಕಾಂಗ್ರೆಸ್‌ನ ಸಂಘಟನಾ ಶಕ್ತಿ, ಹಿಂದುಳಿದ ವರ್ಗಗಳ ನಾಯಕತ್ವ ಮತ್ತು ಇ.ಡಿ. ದಾಳಿ ವಿವಾದದ ನಡುವೆ ಮುಖ್ಯಮಂತ್ರಿ ಸ್ಥಾನದ ಕನಸಿಗೆ ಹೊಸ ಆಯಾಮ?

ಕರ್ನಾಟಕ ರಾಜಕಾರಣದಲ್ಲಿ ( karnataka politics) ಅಧಿಕಾರದ ಲೆಕ್ಕಾಚಾರ ನಡೆಯುವಾಗ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದರೆ ಅಷ್ಟೇ. ಅದರಲ್ ಮಹಾರಾಷ್ಟ್ರಕ್ಕೆ ಅಂಟಿ ಕೊಂಡಿರುವ ಬೆಳಗಾವಿ ಜಿಲ್ಲೆ ಚುನಾವಣಾ ಫಲಿತಾಂಶಗಳನ್ನು ಬದಲಿಸಬಲ್ಲ ಮುಖ್ಯ ಮತ ಕ್ಷೇತ್ರ. ಈ ನೆಲದಲ್ಲಿ ಕಾಂಗ್ರೆಸ್‌ಗೆ ಬಲ ತುಂಬಿದ್ದು ಸತೀಶ್ ಜಾರಕಿಹೊಳಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗ ಅವರ ರಾಜಕೀಯ ಪ್ರಭಾವದ ಜೊತೆಗೆ, 2028ರ ವಿಧಾನಸಭಾ ಚುನಾವಣೆಯಲ್ಲಿ ಅವರು ವಹಿಸಬಹುದಾದ ಪಾತ್ರದ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಇದೇ ಹಿನ್ನೆಲೆಯಲ್ಲಿ ಬಿಜೆಪಿ ಅವರ ವಿರುದ್ಧ ಇಡಿ ದಾಳಿಯಾಗುವಂತೆ ಮಾಡಿದ್ದೆಂದು ಅವರ ನಿಕಟವರ್ತಿಗಳು ಆರೋಪ
ಬೆಳಗಾವಿಯಲ್ಲಿ ಕಾಂಗ್ರೆಸ್‌ಗೆ ಜಾರಕಿಹೊಳಿ ಬಲ!
2023ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಫಲಿತಾಂಶವು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸುವಲ್ಲಿ ಸಫಲವಾಯಿತು. ಉತ್ತರ ಕರ್ನಾಟಕದ 91 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 59 ಸ್ಥಾನಗಳನ್ನು ಗೆದ್ದುಕೊಂಡಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಮರಳುವಲ್ಲಿ ಈ ಭಾಗದ ಹಾಗೂ ಸಾಹುಕಾರಿ ಸತೀಶ್ ಜಾರಕಿಹೊಳಿ ಕೊಡುಗೆ ಮಹತ್ವದ್ದು.
ಈ ಯಶಸ್ಸಿನ ಹಿಂದೆ ಹಲವು ನಾಯಕರ ಶ್ರಮವಿದ್ದರೂ, ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಸಂಘಟನಾ ಶಕ್ತಿ ಹಾಗೂ ಸ್ಥಳೀಯ ರಾಜಕೀಯ ಪ್ರಭಾವ ವಿಶೇಷ ಪಾತ್ರ ವಹಿಸಿದವು ಎಂಬುದನ್ನು ಅವರ ಶತ್ರುಗಳೂ ಒಪ್ಪಬೇಕಾಗುತ್ತದೆ. ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ, ಕ್ಷೇತ್ರಮಟ್ಟದ ರಾಜಕೀಯ ಸಮೀಕರಣಗಳ ನಿರ್ವಹಣೆ ಮತ್ತು ಪಕ್ಷದ ನೆಲೆಯನ್ನು ಬಲಪಡಿಸುವಲ್ಲಿ ಅವರ ತಂತ್ರಗಾರಿಕೆ ನೀಡಿದ ಕೊಡುಗೆ ಅಪಾರ. ಕಾಂಗ್ರೆಸ್‌ನ ಪ್ರಮುಖ ಪ್ರಾದೇಶಿಕ ನಾಯಕರ ಸಾಲಿನಲ್ಲಿ ಅವರನ್ನು ನಿಲ್ಲಿಸಿದ್ದೂ ಇದೇ ಕಾರಣಕ್ಕೆ.
ಬಿಜೆಪಿಗೆ ಹಿನ್ನಡೆಗೆ Satish Jarkiholi ಯೇ ಕಾರಣ
2023ರಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಬಿಜೆಪಿ ಅಧಿಕಾರದ ಗದ್ದುಗೆ ಏರಲು ಅಗತ್ಯ ಕ್ಷೇತ್ರಗಳನ್ನು ವಿಫಲವಾಯಿತು. ನಿಚ್ಛಳ ಬಹುಮತದೊಂದಿಗೆ ಕಾಂಗ್ರೆಸ ಪ್ರಭಾವಿ ಹಿಂದುಳಿದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದಲ್ಲದೇ, ಸತೀಶ್ ಜಾರಿಹೊಳಿಯವರು ಸರಕಾರದ ಪ್ರಮುಖ ಖಾತೆ ಪಡೆಯುವಲ್ಲಿ ಸಫಲರಾದರು. ಕಾಂಗ್ರೆಸ್‌ನ ಸಂಘಟಿತ ಪ್ರಯತ್ನಗಳು, ಸ್ಥಳೀಯ ಅಭ್ಯರ್ಥಿಗಳು, ಆಡಳಿತ ವಿರೋಧಿ ಮನೋಭಾವ ಮತ್ತು ಇತರ ರಾಜಕೀಯ ಅಂಶಗಳೊಂದಿಗೆ ಸತೀಶ್ ಜಾರಿಕಿಹೊಳಿ ಪ್ರಭಾವದಿಂದ ಕೇವಲ ಬೆಳಗಾವಿಯಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ತೋರಿಸುವಲ್ಲಿ ಯಶಸ್ವಿಯಾಗಿದ್ದು.
ಆದರೂ, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಪ್ರಭಾವವನ್ನು ಉಳಿಸಿಕೊಳ್ಳಬೇಕಾದರೆ ಜಾರಕಿಹೊಳಿ ಅವರಂತಹ ಪ್ರಾದೇಶಿಕ ನಾಯಕರ ಸಂಘಟನಾ ಸಾಮರ್ಥ್ಯ ಮಹತ್ವ ಪಡೆಯುತ್ತದೆ. 2028ರ ಚುನಾವಣೆಯಲ್ಲಿ ಈ ಪ್ರಭಾವ ಎಷ್ಟು ವಿಸ್ತರಿಸಲಿದೆ ಎಂಬುದು ರಾಜ್ಯ ರಾಜಕಾರಣದ ಕುತೂಹಲಕಾರಿ ಪ್ರಶ್ನೆ.
ED ದಾಳಿ: ರಾಜಕೀಯ ವಿವಾದಕ್ಕೆ ಹೊಸ ತಿರುವು!
2026ರ ಸೆಪ್ಟೆಂಬರ್‌ನಲ್ಲಿ ಸತೀಶ್ ಜಾರಕಿಹೊಳಿ, ಅವರ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಸಂಬಂಧಿಕರಿಗೆ ಸೇರಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಶೋಧ ನಡೆದಿವೆ. ಈ ಕ್ರಮದ ರಾಜಕೀಯ ಉದ್ದೇಶವಿದೆ ಎಂಬ ಆರೋಪ ಕೇಳಿ ಬಂದಿದ್ದು, ಉತ್ತರ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವ ಬಿಜೆಪಿ ನಡೆಸಿದ ಕುತಂತ್ರವೆಂದೇ ಕಾಂಗ್ರೆಸ್ ನೇರವಾಗಿ ಆರೋಪಿಸಿದೆ. ಆದರೆ, ಎಲ್ಲವನ್ನೂ ಮೀರಿ ತಾವು ಶುದ್ಧ ಹಸ್ತರು ಎಂಬುದನ್ನು ಸಾಕ್ಷಿ ಸಮೇತ ಪ್ರೂವ್ ಮಾಡುವ ವಿಶ್ವಾಸದಲ್ಲಿ ಸತೀಶ್ ಜಾರಿಕೊಳಿಯವರು ಇರುವುದಲ್ಲದೇ, ಮುಂದಿನ ಚುನಾವಣೆಯಲ್ಲಿ ತಮ್ಮ ಪ್ರಭಾವ ಏನೆಂಬುದನ್ನು ತೋರಿಸುವ ವಿಶ್ವಾಸದಲ್ಲಿದ್ದಾರೆ.
ಸತೀಶ್ ಜಾರಕಿಹೊಳಿ ಚಿತ್ತ ಮುಖ್ಯಮಂತ್ರಿ ಆಗುವತ್ತ
ಹಿಂದುಳಿದ ವರ್ಗಗಳ ನಾಯಕತ್ವ, ಬೆಳಗಾವಿಯಲ್ಲಿನ ರಾಜಕೀಯ ನೆಲೆ ಮತ್ತು ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನೀಡಬಹುದಾದ ಸಂಘಟನಾ ಬಲ-ಇವೆಲ್ಲವೂ ಸತೀಶ್ ಜಾರಕಿಹೊಳಿ ಅವರ ರಾಜಕೀಯ ದಾರಿಯನ್ನು ಸುಗಮಗೊಳಿಸುವ ವಿಚಾರಗಳು. ಜೊತೆ ಜೊತೆಗೆ ಕಾಂಗ್ರೆಸ್ ಅಗತ್ಯ ಕ್ಷೇತ್ರಗಳನ್ನು ಗೆದ್ದು, ತಮಗೆ ಸಿಗಬೇಕಾದ ಮುಖ್ಯಮಂತ್ರಿ ಸ್ಥಾನವನ್ನು ಅವರು ಅಲಂಕರಿಸುತ್ತಾರೆಂಬ ವಿಶ್ವಾಸ ಅವರ ಬೆಂಬಲಿಗರಿಗಿದೆ.
ಬೆಳಗಾವಿಯ ರಾಜಕೀಯ ಶಕ್ತಿಯನ್ನು ರಾಜ್ಯಮಟ್ಟದ ನಾಯಕತ್ವವಾಗಿ ಪರಿವರ್ತಿಸುವ ಸವಾಲು ಈಗ ಜಾರಕಿಹೊಳಿ ಅವರ ಮುಂದಿದೆ. 2028ರ ಚುನಾವಣೆಯೇ ಈ ರಾಜಕೀಯ ಪಯಣದ ಮುಂದಿನ ಮಹತ್ವದ ಪರೀಕ್ಷೆಯಾಗಲಿದೆ. ಒಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಕಳದೆ ಚುನಾವಣೆಗಿಂತಲೂ ಅತ್ಯಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲವು ಸಾಧಿಸುವ ಮೂಲಕ ತಮ್ಮ ಪ್ರಭಾವ ಏನೆಂಬುದನ್ನು ತೋರಿಸುವಲ್ಲಿ ಸತೀಶ್ ಜಾರಕಿಹೊಳಿ ಯಶಸ್ವಿಯಾಗುತ್ತೆರೆಂಬುವುದು ಅವರ ಬೆಂಬಲಿಗರ ನಂಬಿಕೆ. ಆ ಮೂಲಕ ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಸತೀಶ್ ಜಾರಿಕಹೊಳಿ ಅವರೇ ಎಂಬುದಾಗಿ ಅವರು ಹೇಳುತ್ತಾರೆ.


Click it and Unblock the Notifications
