Munirathna : 'ಜಾತಿನಿಂದಕ ಮುನಿರತ್ನಂ ಕೂಡಲೇ ಬಂಧಿಸಿ'
ಬೆಂಗಳೂರು, ಸೆಪ್ಟೆಂಬರ್ 14: ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಪರಿಶಿಷ್ಟ ಜಾತಿಗೆ ಸೇರಿದ ಗುತ್ತಿಗೆದಾರನೊಬ್ಬನ ಬಳಿ ಅವಹೇಳನಕಾರಿಯಾಗಿ ಜಾತಿಯನ್ನು ನಿಂದಿಸಿ ಮಾತನಾಡಿದ ಪ್ರಕಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಶಾಸಕನನ್ನು ಬಂಧಿಸಬೇಕೆಂದು ಆ ಮಾತನ್ನು ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಡಾಕ್ಟರ್ ಸತೀಶ್ ಕುಮಾರ್ ಇಂದಿಲ್ಲಿ ಅವರು ಆಗ್ರಹಿಸಿದರು.
ಮುನಿರತ್ನಂ ನಾಯ್ಡು ಹಿನ್ನೆಲೆ ಗಮನಿಸಿದಾಗ ಈತ ಅನೇಕ ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿ ಅನೇಕ ಅವ್ಯವಹಾರಗಳಲ್ಲಿ ಪಾಲ್ಗೊಂಡು ಕಾರ್ಪೊರೇಟರ್ ನಂತರ ಶಾಸಕನಾಗಿರುವ ಕರಾಳ ಇತಿಹಾಸ ಈತನದಾಗಿದ್ದು, ಈಗ ಪರಿಶಿಷ್ಟ ಜಾತಿಗೆ ಅಪಮಾನವಾಗುವ ರೀತಿಯಲ್ಲಿ ಹಾಗೂ ಆ ಗುತ್ತಿಗೆದಾರನ ಕುಟುಂಬದವರ ಮೇಲೂ ಸಹ ಅಶ್ಲೀಲ ಪದಗಳಿಂದ ಮಾತನಾಡಿರುವುದು ಈತ ಯಾವುದೇ ನಾಗರಿಕ ಸಮಾಜಕ್ಕೆ ಅರ್ಹನಲ್ಲನೆಂಬುದು ಸಾಬೀತಾಗಿದೆ.

ಈತನ ವಿರುದ್ಧ ಕೇವಲ ಮೊಕದ್ದಮೆಲೆಯನ್ನು ದಾಖಲಿಸಿಕೊಂಡರೆ ಸಾಲದು ಕೂಡಲೇ ಬಂಧಿಸಿ ಈತನ ಕಾನೂನು ಬಾಹಿರ ಹಾಗೂ ಅನೈತಿಕ, ಅಕ್ರಮ ,ವ್ಯವಹಾರಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಸರ್ಕಾರ ಮುಂದಾಗಬೇಕೆಂದು ಎಎಪಿ ನಾಯಕ ಸತೀಶ್ ಅವರು ಆಗ್ರಹಿಸಿದರು.
ಹೆಚ್ ಡಿ ಕುಮಾರಸ್ವಾಮಿ ಅವರೇ ಎಲ್ಲಿ ಅಡಗಿದ್ದೀರಿ?: ಕಾಂಗ್ರೆಸ್
ಒಕ್ಕಲಿಗರ ಕುಲತಿಲಕ ನಾನೇ ಎಂದುಕೊಳ್ಳುವ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರೇ ಎಲ್ಲಿ ಅಡಗಿದ್ದೀರಿ? ಬಿಜೆಪಿಯ ಒಕ್ಕಲಿಗ ಹಾಗೂ ದಲಿತ ಸಮುದಾಯದ ನಾಯಕರೇ ಏಕೆ ಬಾಯಿ ಮುಚ್ಚಿಕೊಂಡಿದ್ದೀರಿ?ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಮಂಚಕ್ಕೆ ಕರೆಯುವ "ಮನಿ"ರತ್ನನ ವಿರೋಧಿಸಲಾಗದಷ್ಟು ಸ್ವಾಭಿಮಾನ ಕಳೆದುಕೊಂಡಿದ್ದೀರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸಮುದಾಯದ ಹೆಣ್ಣುಮಕ್ಕಳ ಘನತೆ, ಗೌರವಕ್ಕಿಂತ ರಾಜಕೀಯ ಅವಕಾಶವಾದಿತನವೇ ಮುಖ್ಯವಾಯ್ತೆ? ಬಿಜೆಪಿಯ ದಲಿತ ನಾಯಕರು ಧ್ವನಿ ಕಳೆದುಕೊಂಡಿದ್ದಾರಾ? ತಮ್ಮ ಸಮುದಾಯದ ಹಿತ ಕಾಯುವ ಕಿಂಚಿತ್ ಬದ್ಧತೆ ಇಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.












Click it and Unblock the Notifications