ಶಾಲಾ, ಕಾಲೇಜಿನಲ್ಲಿ 'ಸಸ್ಯ ಶ್ಯಾಮಲ' ಕಾರ್ಯಕ್ರಮ; ಮಾರ್ಗಸೂಚಿಗಳು
ಬೆಂಗಳೂರು, ಸೆಪ್ಟೆಂಬರ್ 10; ಕರ್ನಾಟಕದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ 'ಸಸ್ಯ ಶ್ಯಾಮಲ' ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕುರಿತು ಮಾರ್ಗಸೂಚಿ ಹೊರಡಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡಾವಳಿಗಳು ಹಾಗೂ ಈ ಕಾರ್ಯಕ್ರಮ ಅನುಷ್ಠಾನ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಜಂಟಿ ವಿಡಿಯೋ ಸಂವಾದ ಸಭೆಯಲ್ಲಿ ನೀಡಿದ ಸೂಚನೆ ಅನ್ವಯ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ.

2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನವಾದ ಕಾರ್ಯಕ್ರಮ ಇದಾಗಿದೆ. ಇದಕ್ಕೆ 'ಸಸ್ಯ ಶ್ಯಾಮಲ' ಎಂದು ಹೆಸರಿಡಲಾಗಿದೆ.
ಮಾರ್ಗಸೂಚಿಗಳು; ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರುಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮಾರ್ಗಸೂಚಿ ಮೂಲಕ ಸೂಚಿಸಲಾಗಿದೆ.
* ಸಸ್ಯ ಶ್ಯಾಮಲ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಇಲಾಖೆ ವತಿಯಿಂದ ಪರಿಸರಕ್ಕೆ ಉಪಯುಕ್ತವಾಗುವಂತ ಸಸಿಗಳನ್ನು ಉಚಿತವಾಗಿ ಒದಗಿಸಲಾಗುವುದು.
* ಅರಣ್ಯ ಇಲಾಖೆಯ ವಿಭಾಗದ ಕಛೇರಿಗಳಿಂದ ಒದಗಿಸಲಾಗುವ ವಿವಿಧ ಬಗೆಯ ಸಸಿಗಳನ್ನು, ಆಯಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಹಾಗೂ ಸದರಿ ಶಾಲಾ ಕಾಲೇಜುಗಳಿಗೆ ಸೇರಿದ ಜಾಗಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶ್ರಮದಾನದ ಮೂಲಕ ನಟ್ಟು, ಪೋಷಿಸಿ ಆರೈಕ ಮಾಡಲು ಸೂಕ್ತ ಕ್ರಮಗಳನ್ನು ವಹಿಸತಕ್ಕದ್ದು.
* ಸರ್ಕಾರಿ ಶಾಲಾ/ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸದರಿ ಸಸಿಗಳನ್ನು ನೆಡುವ ಮತ್ತು ಪೋಷಿಸುವ ಕಾರ್ಯನಿರ್ವಹಿಸಬೇಕಿದೆ ಹಾಗೂ ಇವರ ಜೊತೆ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು/ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯ ಗ್ರಾಮ ಅರಣ್ಯ ಸಮಿತಿ ಸಹಕಾರ ಪಡೆಯುವುದು.
* ಶಾಲೆಗಳಲ್ಲಿ ಸಸಿ ನೆಡುವ ಈ ಕಾರ್ಯಕ್ರಮದಡಿ ಜಿಲ್ಲಾ ಹಂತದಲ್ಲಿ ಶಿಕ್ಷಣ ರವರು ವತಿಯಿಂದ ಉಪನಿರ್ದೇಶಕರು (ಆಡಳಿತ) ಸದರಿ ಕಾರ್ಯಕ್ರಮದ ಉಸ್ತುವಾರಿ ವಹಿಸುವುದು. ಅರಣ್ಯ ಇಲಾಖೆ ವತಿಯಿಂದ ಜಿಲ್ಲಾ ಹಂತದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇವರು ಸದರಿ ಕಾರ್ಯಕ್ರಮದ ಉಸ್ತುವಾರಿ ವಹಿಸುವುದು. ತಾಲ್ಲೂಕು ಹಂತದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ)ಗಳು ನೋಡಲ್ ಅಧಿಕಾರಿಗಳಾಗಿ ಮತ್ತು ಅರಣ್ಯ ಇಲಾಖೆಯ ವತಿಯಿಂದ ಸಾಮಾಜಿಕ ಅರಣ್ಯ ವಿಭಾಗಗಳ ತಾಲ್ಲೂಕು ಮಟ್ಟದ ವಲಯ ಅರಣ್ಯಾಧಿಕಾರಿಗಳು ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.
* ಅರಣ್ಯ ಇಲಾಖೆಯ ಸಲಹೆಯಂತೆ ಸಸಿಗಳನ್ನು ನೆಡಲು ಎರಡು ಸಸಿಗಳ ನಡುವೆ ಕನಿಷ್ಠ 5 ಮೀಟರ್ ಗಳಷ್ಟು ಅಂತರ ಇರಬೇಕೆಂದು ತಿಳಿಸಲಾಗಿದೆ. ಅಲ್ಲದೇ ಸಸಿಯನ್ನು ನೆಡುವ ಪೂರ್ವದಲ್ಲಿ, ಅದು ನಂತರ ಮುಂದಿನ ದಿನಗಳಲ್ಲಿ ಮರವಾಗಿ ಬೆಳೆದಾಗ ಯಾವುದೇ ಕಟ್ಟಡ/ ಆವರಣ ಗೋಡೆಗೆ ಹಾನಿ ಮಾಡದೇ ಇರದ ಹಾಗೆ ಸದರಿ ಕಟ್ಟಡ ಮತ್ತು ಆವರಣ ಗೋಡೆಯ ನಡುವೆ 5 ಮೀಟರ್ ಅಂತರ ಇರುವುದನ್ನು ಖಚಿತಪಡಿಸಿಕೊಳ್ಳುವುದು. ಈ ಯೋಜನೆಯಡಿಯಲ್ಲಿ ಸಸಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ನಾಟಿ ಮಾಡುವುದುನ್ನು ತಪ್ಪಿಸಲು ಶಾಲಾ ಆವರಣದಲ್ಲಿ ಕಟ್ಟಡ ಕಾಮಗಾರಿಗಾಗಿ ಗುರುತಿಸಲ್ಪಟ್ಟ ಸ್ಥಳದಲ್ಲಿ ಸಸಿಗಳನ್ನು ನೆಡದಿರುವಂತೆ ಕ್ರಮವಹಿಸುವುದು.
* ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅರಣ್ಯಾಧಿಕಾರಿಗಳು ನಿರ್ಧರಿಸುವ ನರ್ಸರಿಗಳಿಂದ ಸಸಿಗಳನ್ನು ಪಡೆದುಕೊಂಡು ಸ್ವೀಕೃತಿ ನೀಡಿ ಸಂಬಂಧಪಟ್ಟ, ಶಾಲೆಗಳಿಗೆ ಸಾಗಾಣಿಕೆ ಮಾಡುವುದು. ಸದರಿ ಸಾಗಾಣಿಕೆಗೆ ತಗಲುವ ವೆಚ್ಚದ ಮೊತ್ತಕ್ಕೆ ಆರ್ಥಿಕ ಇಲಾಖೆಯಿಂದ ಬಿಡುಗಡೆ ಮಾಡಲು ಶಾಲಾ ಶಿಕ್ಷಣ ಇಲಾಖೆಯಿಂದ ಕೋರಿಕೆ ಸಲ್ಲಿಸಿ ನಂತರ ಸಂಬಂಧಿಸಿದವರಿಗೆ ಬಿಡುಗಡೆ ಮಾಡಲಾಗುವುದು.
* ಸದರಿ ಕಾರ್ಯಕ್ರಮದಲ್ಲಿ ಸರ್ಕಾರಿ ಕಿರಿಯ/ ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ/ ಪದವಿ ಪೂರ್ವ ಕಾಲೇಜುಗಳಲ್ಲಿನ 1 ರಿಂದ 12ನೇ ತರಗತಿಗಳ ಮಕ್ಕಳು ಭಾಗವಹಿಸಬೇಕಾಗಿದೆ. ಸದರಿ 'ಸಸ್ಯ ಶ್ಯಾಮಲ' ಕಾರ್ಯಕ್ರಮದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ, ಪರಿಸರ ಜಾಗೃತಿ ಮತ್ತು ಅರಣ್ಯ ಸಂರಕ್ಷಣೆಯ ಕುರಿತು ಕಾಳಜಿಯನ್ನು ಉಂಟುಮಾಡುತ್ತದೆ. ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸ್ಥಳಾವಕಾಶದ ಲಭ್ಯತೆಯ ಮೇಲೆ ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳಬೇಕಾಗಿದೆ.
* ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 'ಸಸ್ಯ ಶ್ಯಾಮಲ' ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು (ಗುಂಡಿಗಳನ್ನು ತೋಡಲು) ಮುಖ್ಯ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರ/ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ/ ಸ್ವಯಂ ಸೇವಾ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತಿಯ ಗ್ರಾಮ ಅರಣ್ಯ ಸಮಿತಿಯವರ ಸಹಕಾರ ಪಡೆಯುವುದು. ಸದರಿ ಶಾಲೆಯ ಮಕ್ಕಳಿಗೆ ಕೇವಲ ಸಸಿಗಳನ್ನು ನಡುವ ಮತ್ತು ನೀರುಣಿಸುವ ಕಾರ್ಯವನ್ನು ಮಾತ್ರ ವಹಿಸುವುದು.
* ಹಿರಿಯ ಪ್ರಾಥಮಿಕ/ ಪ್ರೌಢ ಶಾಲೆ/ ಪದವಿ ಪೂರ್ವ ಕಾಲೇಜುಗಳಲ್ಲಿ 'ಸಸ್ಯ ಶ್ಯಾಮಲ' ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಗುಂಡಿಗಳನ್ನು ತೋಡಲು 6-12 ನೇ ತರಗತಿ ಮಕ್ಕಳಿಗೆ ಶ್ರಮದಾನದ ಮೂಲಕ ಕೈಗೊಳ್ಳಲು ವಹಿಸಬಹುದು. ಜೊತೆಗೆ ಮುಖ್ಯ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು/ ಸ್ಥಳೀಯ ಸಂಸ್ಥೆ ಜನಪತ್ರಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯ ಗ್ರಾಮ ಅರಣ್ಯ ಸಮಿತಿಯವರ ಸಹಕಾರ ಪಡೆಯುವುದು.
* ಸಸಿಗಳನ್ನು ನೆಟ್ಟ ನಂತರ 20 ಲೀಟರ್ ನೀರುಣಿಸುವುದು. ಮಳೆಯಾಗದಿದ್ದರೆ ಪ್ರತಿ ವಾರ ಸುಮಾರು 10 ಲೀಟರ್ ನೀರು ನೀಡಬಹುದು. ನೆಟ್ಟ ಸಸಿಗಳು ವಾಲುತ್ತಿದ್ದರೆ ಅದಕ್ಕೆ ಒಂದು ಆಧಾರಕಡ್ಡಿ ಜೋಡಿಸಿ ಸಸಿ ಬೀಳದಂತೆ . ಕಟ್ಟಬೇಕು. ಸಸಿಗಳನ್ನು ರಕ್ಷಿಸಲು ಸ್ಥಳೀಯ ದಾನಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳವರ ಸಹಾಯದಿಂದ Tree Guardಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಸಸಿಗಳನ್ನು ರಕ್ಷಿಸಲು ಸ್ಥಳೀಯವಾಗಿ ಲಭ್ಯವಿರುವ ಪರಿಹಾರಗಳನ್ನು ಬಳಸಬಹುದಾಗಿದೆ. ಈ ಸಂದರ್ಭದಲ್ಲಿ ಯಾವುದೇ ಆಹಿತಕರ ಘಟನೆ ನಡೆಯದ ಹಾಗೆ ಕಾಳಜಿವಹಿಸುವುದು ಅವಶ್ಯವಿದೆ.
* ಶಾಲೆಯ/ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ಶಿಕ್ಷಕರು/ ಪ್ರಾಂಶುಪಾಲರು ಸೂಕ್ತ ಪ್ರದೇಶವನ್ನು/ ಪರಿಸರವನ್ನು ಗುರುತಿಸಿ, ಸಸಿಗಳನ್ನು ನೆಟ್ಟು ಪ್ರಾಣಿ, ಪಕ್ಷಿ ಹಾಗೂ ಇನ್ನಿತರ ಮೂಲಗಳಿಂದ ಸಸಿಗಳನ್ನು ಸಂರಕ್ಷಿಸಲು ಸೂಕ್ತ ಮುಂಜಾಗೃತ ಕ್ರಮವನ್ನು ಕೈಗೊಂಡು ಪ್ರತಿ ವಿದ್ಯಾರ್ಥಿಯು/ ವಿದ್ಯಾರ್ಥಿಗಳ ತಂಡ ಕನಿಷ್ಟ 2 ವರ್ಷ ಸತತವಾಗಿ ಸಸಿಯನ್ನು ಆರೈಕೆ ಮಾಡಲು ಒತ್ತು ನೀಡುವುದು. ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಅಥವಾ ರಜಾ ದಿನಗಳಲ್ಲಿ ಸಸಿಗಳನ್ನು ನೀರುಣಿಸುವ ಸಂರಕ್ಷಿಸುವ ಮತ್ತು ಶಾಲೆಯ ಜವಾಬ್ದಾರಿಯು ಮುಖ್ಯಸ್ಥರಾಗಿರುತ್ತದೆ.
* ಈ ವಿಚಾರವಾಗಿ ಪ್ರತಿಯೊಂದು ಸಸಿಯನ್ನು ಮಕ್ಕಳಿಗೆ ದತ್ತು ನೀಡಬಹುದಾಗಿರುತ್ತದೆ ಬೇಸಿಗೆ ರಜಾ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸರದಿಯ ಮೇರೆಗೆ ಅಗತ್ಯಕ್ಕೆ ತಕ್ಕಂತ 7 ರಿಂದ 10 ದಿನಗಳಿಗೊಮ್ಮೆ ಸಸಿಗಳಿಗೆ ನೀರುಣಿಸುವ ಹಾಗೂ ಸಂರಕ್ಷಿಸುವ ಕಾರ್ಯವನ್ನು ಕೈಗೊಳ್ಳಬಹುದಾಗಿದೆ ಎಂದು ಸುತ್ತೋಲೆ ಹೇಳಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications