ಆನ್‌ನಲ್ಲಿ ಡಿಎಲ್‌ ಪಡೆಯಲು ಸಾರಥಿ-4: ಯೋಜನೆ ಯಶಸ್ವಿ

ಬೆಂಗಳೂರು, ಮೇ 24: ಇನ್ನುಮುಂದೆ ಕಲಿಕಾ ಚಾಲನಾ ಪರವಾನಗಿ ಅಥವಾ ಚಾಲನಾ ಪರವಾನಗಿ ಪಡೆಯುವುದು ಸುಲಭವಾಗಲಿದೆ. ಜೂನ್ ಮೊದಲ ವಾರದಿಂದ ಎಲ್ಲ ಆರ್‌ಟಿಒದಲ್ಲಿ ಸಾರಥಿ 4 ಸಾಫ್ಟ್‌ವೇರ್‌ ಬಳಕೆ ಮಾಡಲಾಗುತ್ತದೆ. ಇದರಿಂದ ಚಾಲನಾ ಪರವಾನಗಿಯನ್ನು ಆನ್‌ಲೈನ್‌ ಮೂಲಕ ಪಡೆಯಬಹುದಾಗಿದೆ.

ಕಳೆದ ಮಾರ್ಚ್ 27ರಿಂದ ಬೆಂಗಳೂರಿನ 6 ಆರ್‌ಟಿಒಗಳಲ್ಲಿ ಸಾರಥಿ 4ರ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿತ್ತು. ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಬಿಸಲಾಗಿದ್ದ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಾರಿಗೆ ಇಲಾಖೆ ಸಿದ್ಧವಾಗಿದೆ. ಮೇ 23ರಿಂದ ಬೆಂಗಳೂರು ಗ್ರಾಮಾಂತರ ವಿಭಾಗ, ಮೇ 25ರಿಂದ ಮೈಸೂರು, ಜೂ,1ರಿಂದ ಬೆಳಗಾವಿ ವಿಭಾಗದ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರಥಿ 4 ಅನುಷ್ಠಾನಗೊಳ್ಳಲಿದೆ.

Sarathi-4 service will resume in June across the state

ಈಗಿರುವ ಸಾರಥಿ-3 ಸಾಫ್ಟ್‌ವೇರ್‌ನಲ್ಲಿ ಎಲ್‌ಎಲ್‌ಆರ್‌ ಮತ್ತು ಡಿಎಲ್‌ ಪಡೆಯಲು ಅಭ್ಯರ್ಥಿಗಳು ಎಲ್ಲ ವಿವರಗಳನ್ನು ಆನ್‌ಲೈನ್‌ ಅರ್ಜಿಯಲ್ಲಿಯೇ ಸಲ್ಲಿಸಬೇಕಾಗಿತ್ತು. ನಂತರದಲ್ಲಿ ಆರ್‌ಟಿಒ ಕಚೇರಿಗೆ ತೆರಳಿ ಆನ್‌ಲೈನ್‌ನಲ್ಲಿ ನೀಡಿದ್ದ ದಾಖಲೆಗಳ ಪ್ರತಿ ಸಲ್ಲಿಸಬೇಕಿತ್ತು. ಜತೆಯಲ್ಲಿಸಹಿಯನ್ನು ಕಚೇರಿಗೆ ತೆರಳಿಯೇ ಹಾಕಬೇಕಿತ್ತು. ಸಾರಥಿ 4 ರಲ್ಲಿ ಆನ್‌ಲೈನ್‌ನಲ್ಲೇ ಎಲ್ಲ ಸೌಲಭ್ಯ ಸಿಗಲಿದೆ. ಆನ್‌ಲೈನ್‌ ಅರ್ಜಿಯಲ್ಲಿಯೇ ಸಾಖಲೆಗಳ ಪ್ರತಿ ಸ್ಕ್ಯಾನ್‌ ಮಾಡಿ ಹಾಕಬೇಕಾಗುತ್ತದೆ. ಸಹಿಯನ್ನೂ ಕೂಡ ಸ್ಕ್ಯಾನ್‌ ಮಾಡಿ ಹಾಕಿದರೆ ಸಾಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+