Santosh Lad: ಕಾರ್ಮಿಕರ ಕಲ್ಯಾಣಕ್ಕಾಗಿ ಸಚಿವ ಸಂತೋಷ್ ಲಾಡ್ ಅವರ ಕ್ರಾಂತಿಕಾರಿ ಹೆಜ್ಜೆಗಳು

Santosh Lad: ಸಂತೋಷ್ ಲಾಡ್ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ಕಾರ್ಮಿಕ ಸಚಿವರಾಗಿ ಶ್ರಮಿಕರ ಕಲ್ಯಾಣಕ್ಕಾಗಿ ಹಲವಾರು ಪ್ರಮುಖ ಯೋಜನೆಗಳು ಹಾಗೂ ಅನೇಕ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಕೇವಲ ಭರವಸೆಗಳನ್ನಷ್ಟೆ ನೀಡದೆ ಸಮಾಜ ಎಲ್ಲಾ ರೀತಿಯ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸುತ್ತಿರುವ ಅವರ ಪ್ರಮುಖ ಸಾಧನೆಗಳ ಒಂದು ಇಣಕು ನೋಟ ಇಲ್ಲಿದೆ ನೋಡಿ.

ಜಾರಿಗೊಳಿಸಿದ ಪ್ರಮುಖ ಯೋಜನೆಗಳು

ಸ್ವಿಗ್ಗಿ ಜೊಮ್ಯಾಟೊದಂತಹ ಪ್ಲಾಟಪಾರ್ಮ್‌ಗಳಲ್ಲಿ ಹಗಲಿರುಳು ದುಡಿಯವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭಧ್ರತೆಯನ್ನು ನೀಡಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದಕ್ಕಾಗಿ ಪ್ರತ್ಯೇಕ ಮಂಡಳಿಯನ್ನು ಸ್ಥಾಪನೆಗೆ ಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣವೇ ಸಂತೋಷ್‌ ಲಾಡ್‌

Santosh S Lad

ಖಾಸಗಿ ಸಾರಿಗೆ ಕಾರ್ಮಿಕರ ಭದ್ರತೆ

ರಾಜ್ಯದ ಸುಮಾರು 35 ಲಕ್ಷ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ಜೀವನದ ಭದ್ರತೆ ಒದಗಿಸುವ ಮೂಲಕ ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ಗ್ರಾಚ್ಯುಟಿ ಕಾಯ್ದೆ ಕಡ್ಡಾಯ

ದೇಶದಲ್ಲೇ ಮೊದಲ ಬಾರಿಗೆ ಗ್ರಾಚ್ಯುಟಿಯನ್ನು ಕಡ್ಡಾಯವಾಗಿ ಜಾರಿಗೆ ತರುವ ಮೂಲಕ 65 ಲಕ್ಷಕ್ಕೂ ಅಧಿಕ ಕಾರ್ಮಿಕರ ಭವಿಷ್ಯಕ್ಕೆ ಭದ್ರತೆ ಒದಗಿಸಿದ್ದಾರೆ.

ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರಿಗೆ ನೆರವು

ಕರ್ನಾಟಕ ಸರ್ಕಾರವು ಚಲನಚಿತ್ರ ಮತ್ತು ಸಾಂಸ್ಕೃತಿಕ ವಲಯದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಲು "ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆಯನ್ನು ಜಾರಿಗೊಳಿಸಿದೆ.

ಯಾರಿಗೆಲ್ಲಾ ಮೀಸಲಾತಿ?

ಸಚಿವ ಸಂತೋಷ್ ಲಾಡ್ ಅವರ ದೂರದೃಷ್ಟಿಯ ಯೋಜನೆಗಳು ಇಲ್ಲಿಗೆ ನಿಂತಿಲ್ಲ. ಮುಂದಿನ ದಿನಗಳಲ್ಲಿ ಜಾರಿಯಾಗಲಿರುವ ಪ್ರಮುಖ ಮಸೂದೆಗಳು ಕೂಡ ಜಾರಿಯಾಗುವ ಭರವಸೆ ನೀಡಿದ್ದಾರೆ. ಖಾಸಗಿ ಉದ್ಯೋಗದಲ್ಲಿ ವಿಕಲಚೇತನರಿಗೆ 5% ಮೀಸಲಾತಿ ಮತ್ತು ಶಿಕ್ಷಣದಲ್ಲಿ 10% ಮೀಸಲಾತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಗುರಿ ಇದೆ.

ಮನೆ ಕೆಲಸದ ಕಾರ್ಮಿಕರ ಭದ್ರತೆ

ನಗರ ಪ್ರದೇಶಗಳಲ್ಲಿ ಮನೆ ಕೆಲಸ ಮಾಡುವ ಮಹಿಳೆರು ಮತ್ತು ಪುರುಷರಿಗೆ ಸಾಮಾಜಿಕ ಭದ್ರತೆ ನೀಡಲು ಹೊಸ ಕರಡು ಸಿದ್ಧವಾಗಿದೆ.

ನಿರಾಶ್ರಿತ ವಿಧವೆಯರ ಕಲ್ಯಾಣ

ಅಸಂಘಟಿತ ವಲಯದ ನಿರಾಶ್ರಿತ ವಿಧವೆಯರಿಗೆ ಗುರುತಿನ ಚೀಟಿ ಮತ್ತು ಪ್ರತ್ಯೇಕ ಮಂಡಳಿ ಮೂಲಕ ಭದ್ರತೆ ನೀಡಲಾಗುವುದು.

ಕಲ್ಯಾಣ ನಿಧಿ ಸ್ಥಾಪನೆ

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಲ್ಪ ಪ್ರಮಾಣದ ಸೆಸ್ ಸಂಗ್ರಹಿಸಿ ಆ ಹಣವನ್ನು ಅಸಂಘಟಿತ ಕಾರ್ಮಿಕರ ಏಳಿಗೆಗೆ ಬಳಸುವ ವಿಶಿಷ್ಟ ಪ್ರಸ್ತಾಪವನ್ನು ಮುಂದಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+