ಜನವರಿ 26ಕ್ಕೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಮಾವೇಶ

Posted By:
Subscribe to Oneindia Kannada

ಬಾಗಲಕೋಟೆ, ಸೆಪ್ಟೆಂಬರ್ 01 : ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಸಮಾವೇಶವನ್ನು ಜನವರಿ 26ರಂದು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಸುಮಾರು ಎರಡು ಲಕ್ಷ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಬಾಗಲಕೋಟೆಯಲ್ಲಿ ಬುಧವಾರ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ಕಲಬುರ್ಗಿ ವಿಭಾಗ ಹಾಗೂ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಹಿಂದುಳಿದ ವರ್ಗ ಹಾಗೂ ದಲಿತರ ಸಮಾವೇಶವನ್ನು ಬಾಗಲಕೋಟೆಯಲ್ಲಿ ಜನವರಿ 26 ರಂದು ಆಯೋಜಿಸಲಾಗುತ್ತದೆ' ಎಂದರು.[ಈಶ್ವರಪ್ಪಗೆ ತಿರುಗೇಟು, ಬಿಜೆಪಿಯಿಂದ ಮೂರು ಸಮಾವೇಶ!]

'ಸಂಗೊಳ್ಳಿ ರಾಯಣ್ಣನನ್ನು ಜನವರಿ 26ರಂದು ಬ್ರಿಟಿಷರು ಗಲ್ಲಿಗೇರಿಸಿದ್ದರು. ಅದೇ ದಿನ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಧ್ವನಿ ನೀಡಲು ಸಮಾವೇಶ ಆಯೋಜಿಸಲಾಗುತ್ತದೆ. ಸಮಾವೇಶದಲ್ಲಿ ಉತ್ತರ ಕರ್ನಾಟಕ ಭಾಗದ 9 ಜಿಲ್ಲೆಗಳ ಸುಮಾರು 2 ಲಕ್ಷ ಜನರು ಪಾಳ್ಗೊಳ್ಳುವ ನಿರೀಕ್ಷೆ ಇದೆ' ಎಂದು ಈಶ್ವರಪ್ಪ ಹೇಳಿದರು.['ಧೈರ್ಯವಿದ್ದರೆ ನಾನೇ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಲಿ']

'ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷದ ಹಿಂದುಳಿದ ವರ್ಗದ ಮೋರ್ಚಾದಿಂದ ಆಯೋಜಿಸುವ ಸಮಾವೇಶಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವೆ. ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳುವುದು ನನ್ನ ಕರ್ತವ್ಯ' ಎಂದು ಕೆ.ಎಸ್.ಈಶ್ವರಪ್ಪ ಅವರು ಸ್ಪಷ್ಟಪಡಿಸಿದರು....[ಸಂಗೊಳ್ಳಿ ರಾಯಣ್ಣ ಬ್ರಿಗೇಡಿಗೆ ಜೈ ಎಂದ ಎಚ್.ವಿಶ್ವನಾಥ್!]

ಪ್ರತಿಜ್ಞಾವಿಧಿ ಬೋಧನೆ

ಪ್ರತಿಜ್ಞಾವಿಧಿ ಬೋಧನೆ

ಜನವರಿ 26ರ ಸಮಾವೇಶಕ್ಕೂ ಮೊದಲು ಡಾ. ಬಿ.ಆರ್‌.ಅಂಬೇಡ್ಕರ್ ಪುಣ್ಯತಿಥಿ ದಿನವಾದ ಡಿಸೆಂಬರ್ 6ರಂದು ಬೆಳಗಾವಿಯಲ್ಲಿ ರಾಯಣ್ಣನ ಸಮಾಧಿ ಎದುರು ಬ್ರಿಗೇಡ್‌ನ ಸದಸ್ಯರನ್ನು ಸೇರಿಸಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಗುತ್ತದೆ.

ಬ್ರಿಗೇಡ್‌ಗೆ ಹಲವು ನಾಯಕರಿಂದ ಬೆಂಬಲ

ಬ್ರಿಗೇಡ್‌ಗೆ ಹಲವು ನಾಯಕರಿಂದ ಬೆಂಬಲ

'ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಹಲವು ನಾಯಕರು ಬೆಂಬಲ ನೀಡಿದ್ದಾರೆ. ಬ್ರಿಗೇಡ್‌ ಸಭೆಯಲ್ಲಿ ಪಾಲ್ಗೊಳ್ಳದಂತೆ ಪ್ರಮುಖರಿಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸೂಚನೆ ನೀಡಿದ್ದಾರೆ ಎಂಬ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಭೆಗೆ ಬಂದರೆ ಯಡಿಯೂರಪ್ಪ ಏನೆಂದುಕೊಳ್ಳುತ್ತಾರೋ ಎಂದು ಅನೇಕರು ಹೆದರಿದ್ದಾರೆ. ಆದರೆ ದೂರವಾಣಿ ಮೂಲಕ ನಮಗೆ ಬೆಂಬಲ ನೀಡಿದ್ದಾರೆ' ಎಂದು ಈಶ್ವರಪ್ಪ ಹೇಳಿದರು.

ಚುನಾವಣೆ ವೇಳೆಗೆ ಬೆಂಬಲಕ್ಕೆ ಬರುತ್ತಾರೆ

ಚುನಾವಣೆ ವೇಳೆಗೆ ಬೆಂಬಲಕ್ಕೆ ಬರುತ್ತಾರೆ

'ಹಲವು ನಾಯಕರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಹಣಕಾಸು ಸೇರಿದಂತೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಕೆಲವು ನಾಯಕರು ಚುನಾವಣೆ ವೇಳೆಗೆ ಬ್ರಿಗೇಡ್ ಸೇರಿಕೊಳ್ಳಲಿದ್ದಾರೆ' ಎಂದು ಈಶ್ವರಪ್ಪ ಹೇಳಿದರು.

ಶಕ್ತಿ ಪ್ರದರ್ಶನ ಅನಿವಾರ್ಯ

ಶಕ್ತಿ ಪ್ರದರ್ಶನ ಅನಿವಾರ್ಯ

ಮಾಜಿ ಸಂಸದದ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ರಾಜಕೀಯ ಪಕ್ಷಗಳ ಕಣ್ತೆರೆಸಲು ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಶಕ್ತಿ ಪ್ರದರ್ಶನ ಅನಿವಾರ್ಯ. ಸಮಾಜದಲ್ಲಿ ಜಾತಿ-ಧರ್ಮದ ಹೆಸರಿನಲ್ಲಿ ಮೇಲು-ಕೀಳು ಭಾವನೆ ಹೆಚ್ಚಾದಾಗ ಬಸವಣ್ಣನವರು ಕ್ರಾಂತಿ ಮಾಡಿದರು. ಅದೇ ನೆಲದಲ್ಲಿ ಬ್ರಿಗೇಡ್‌ನ ಸಭೆ ಆಯೋಜಿಸಿ ಈಶ್ವರಪ್ಪ ಸಾಮಾಜಿಕ ಹಾಗೂ ರಾಜಕೀಯ ಪರಿವರ್ತನೆಗೆ ಮುಂದಾಗಿದ್ದಾರೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP senior leader K.S.Eshwarappa said, Sangolli Rayanna Brigade rally will be held at Bagalkot on January 26, 2017. Brigade headed by K.S.Eshwarappa.
Please Wait while comments are loading...