ಕೊಂಚಾಡಿಯ ವೆಂಕಟರಮಣ ದೇವರಿಗೆ ಸಹಸ್ರ ಕುಂಭಾಭಿಷೇಕ
ಮಂಗಳೂರು, ನ 5: ಕೊಂಚಾಡಿಯ ವೆಂಕಟರಮಣ ದೇವರಿಗೆ 50ನೆಯ ಪ್ರತಿಷ್ಠಾ ಸುವರ್ಣ ಮಹೋತ್ಸವದ ಸಲುವಾಗಿ, ಸುಧೀಂಧ್ರತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಕಾಶೀ ಮಠಾಧೀಶರಾದ ಸಂಯಮೀಂದ್ರತೀರ್ಥ ಶ್ರೀಗಳು ಗುರುವಾರ (ನ 9) ರಂದು ಬೆಳಗ್ಗೆ 9.30ನಿಮಿಷಕ್ಕೆ ವೆಂಕಟರಮಣನಿಗೆ ಸಹಸ್ರ ಕುಂಭಾಭಿಷೇಕ ನಡೆಸಲಿದ್ದಾರೆ.
ಆಸೇತು ಹಿಮಾಲಯದಿಂದ ರಾಮೇಶ್ವರದವರೆಗಿನ ಸಮಸ್ತ ಪವಿತ್ರ ನದಿ, ತೀರ್ಥಕ್ಷೇತ್ರ ಹಾಗೂ ಸರೋವರಗಳಿಂದ ತೀರ್ಥ ಹಾಗೂ ಮೃತ್ತಿಕೆಗಳನ್ನು ಸಂಗ್ರಹಿಸಿ ಅತ್ಯಮೂಲ್ಯ ಗಿಡಮೂಲಿಕಾಯುಕ್ತ ಮೃತ್ತಿಕೆ ಹಾಗೂ ತೀರ್ಥಾದಿಗಳು ಸಂಗ್ರಹವಾದ ಪ್ರಮಾಣ ಹಾಗೂ ವೈವಿಧ್ಯವನ್ನು ಗಮನಿಸಿ ಶ್ರೀಗಳು ಅತಿವಿರಳವಾಗಿ ನಡೆಯುವ ಪದ್ಮಸಂಹಿತಾ ಪ್ರಕಾರ ಏಕೋತ್ತರ ಸಹಸ್ರ ದ್ರವ್ಯ ಕಲಶಾಭಿಷೇಕವು ಅಂದು ದೇವರಿಗೆ ನಡೆಯಲಿದೆ.

ರವಿವಾರ (ನ 5) ಬೆಳಿಗ್ಗೆ ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ, ಯಜ್ಞ ಮಂಟಪದಲ್ಲಿ ಗುರುವರ್ಯರನ್ನು ಬರಮಾಡಿಕೊಂಡು ಶ್ರೀಗಳವರಿಂದ ದೀಪ ಪ್ರಜ್ವಲನೆ. ಗುರುವರ್ಯರ ಅಗ್ರಪೂಜೆ ನಡೆಯಿತು.
ಜೊತೆಗೆ, ಬ್ರಹ್ಮಋತ್ವಿಜಾವರಣ, ಯಜ್ಞ ಮಂಟಪದಲ್ಲಿ ಗುರುಗಣಪತಿ ಪೂಜೆ, ಗೌರಿಮಾತೃಕಾ ಪೂಜೆ ನಾಂದಿ ಸಮಾರಾಧನೆ, ಕೌತುಕ ಬಂಧನ, ಅಂಕುರಾರೋಪಣ, ಮಂಟಪ ಪ್ರತಿಷ್ಠೆ, ಪ್ರಧಾನದೇವತಾ ಆವಾಹನ ಪೂಜನ ಅಗ್ನಿ ಪ್ರತಿಷ್ಠಾಪನೆ, ಶ್ರೀದೇವಳದಲ್ಲಿ ದೇವರಿಗೆ ವಿಶೇಷ ಕಲಾವೃದ್ಧಿ ಹವನ, ಮಹಾ ಮಂಗಳಾರತಿ, ನಡೆಯಿತು.
ಬಳಿಕ ಮಹಾಪೂಜೆ, ಗೋಪೂಜೆ ಮಧ್ವಗುರುಪೂಜೆ, ಗುರುಭಿಕ್ಷೆ ಸುವಾಸಿನಿ ಬ್ರಾಹ್ಮಣ ಆರಾಧನೆ ಸಮಾರಾಧನೆ ನೆರವೇರಿತು. (ಚಿತ್ರ: ಮಂಜು ನೀರೇಶ್ವಾಲ್ಯ)












Click it and Unblock the Notifications