ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದ ಕಾರ್ಯಸೂಚಿ ತಯಾರಿಟ್ಟುಕೊಂಡಿದ್ದಾರೆ ಸದಾನಂದಗೌಡ!

|
Google Oneindia Kannada News

ಬೆಂಗಳೂರು, ಮೇ 01: ಎರಡನೇ ಅವಧಿಗೆ ಕೇಂದ್ರ ಮಂತ್ರಿ ಆಗಿರುವ ಸದಾನಂದಗೌಡ ಅವರು ಕಳೆದ ಬಾರಿಗಿಂತಲೂ ಭಿನ್ನವಾಗಿ, ಉತ್ತಮವಾಗಿ ಸೇವೆ ಮಾಡಲು ಕಾರ್ಯಸೂಚಿ ತಯಾರಿಟ್ಟುಕೊಂಡಿರುವುದಾಗಿ ಹೇಳಿದ್ದಾರೆ.

ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯ ಮಂತ್ರಿ ಆಗಿರುವ ಸದಾನಂದಗೌಡ ಅವರು ಐದು ವರ್ಷದ ಅವಧಿಯಲ್ಲಿ ಹೇಗೆ ಕೆಲಸ ಮಾಡಬೇಕು ಮತ್ತು ಏನೇನು ಕೆಲಸ ಮಾಡಬೇಕು ಎಂಬುದರ ಬಗ್ಗೆ ನೀಲನಕ್ಷೆಯೊಂದನ್ನು ಮಾಡಿಕೊಟ್ಟಿರುವುದಾಗಿ ಹೇಳಿದ್ದಾರೆ.

ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ ಅನಂತ್ ಕುಮಾರ್ ಬಿಟ್ಟುಹೋದ ಎರಡೂ ಖಾತೆಗಳು ಕನ್ನಡಿಗರಿಗೆ

ಈ ಹಿಂದೆ ರೈಲ್ವೆ ಖಾತೆ ರಾಜ್ಯ ಮಂತ್ರಿ, ಕಾನೂನು ಮಂತ್ರಿ ಮತ್ತು ಸಾಂಖಿಕ ಮತ್ತು ಯೋಜನಾ ಮಂತ್ರಿ ಆಗಿ ಕೇಂದ್ರದಲ್ಲಿ ಸೇವೆ ಸಲ್ಲಿಸಿರುವ ಅವರಿಗೆ, ದೆಹಲಿಯ ರಾಜಕೀಯದ ಹಾಗೂ ಮೋದಿ ಸಂಪುಟದಲ್ಲಿ ಕೆಲಸ ನಿರ್ವಹಿಸಬೇಕಾದ ನೈಪುಣ್ಯತೆಯ ಅನುಭವ ಇದೆ.

ಅನಂತ್‌ಕುಮಾರ್‌ ಅವರು ಇಲ್ಲದ ಈ ಸಮಯದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಹೆಚ್ಚಿನ ಸಹಾಯ ತರಬಲ್ಲ ಏಕೈಕ ಆಡಳಿತ ಪಕ್ಷದ ಸದಸ್ಯರೆಂಬ ನಂಬಿಕೆ ಸದಾನಂದಗೌಡ ಅವರ ಬೆನ್ನಮೇಲಿದೆ. ಅನಂತ್‌ಕುಮಾರ್ ಅವರು ನಿರ್ವಹಿಸುತ್ತಿದ್ದ 'ಕರ್ನಾಟಕ-ಕೇಂದ್ರ' ನಡುವಿನ ಸೇತುವೆಯ ಕಾರ್ಯವನ್ನು ಸದಾನಂದಗೌಡ ಅವರು ನಿರ್ವಹಿಸಬೇಕಿದೆ.

ಕಾವೇರಿ, ತುಂಗಾ ಮೇಲ್ದಂಡೆ ವಿಷಯದಲ್ಲಿ ಸಹಾಯ

ಕಾವೇರಿ, ತುಂಗಾ ಮೇಲ್ದಂಡೆ ವಿಷಯದಲ್ಲಿ ಸಹಾಯ

ಸದಾನಂದಗೌಡ ಅವರು ಈ ಹಿಂದೆ ಮಂತ್ರಿಗಳಾಗಿದ್ದಾಗ ಕರ್ನಾಟಕಕ್ಕೆ ಅಗತ್ಯ ಬಿದ್ದಾಗೆಲ್ಲಾ ಸಹಾಯ ಮಾಡಿರುವುದನ್ನು ಮರೆಯುವಂತಿಲ್ಲ. ಕಾನೂನು ಮಂತ್ರಿಗಳಾಗಿದ್ದಾಗ ಕಾವೇರಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗಳ ವಿಷಯದಲ್ಲಿ ಅಗತ್ಯ ಸಹಾಯವನ್ನು ಅವರು ಮಾಡಿದ್ದರು.

ಸದಾನಂದ ಗೌಡರಿಗೆ ಷರತ್ತು ವಿಧಿಸಿದ ಬಿ.ಎಸ್.ಯಡಿಯೂರಪ್ಪ!

ರೈಲ್ವೆ ರಾಜ್ಯ ಖಾತೆ ಮಂತ್ರಿ ಆಗಿದ್ದಾಗ ಸಹಾಯ

ರೈಲ್ವೆ ರಾಜ್ಯ ಖಾತೆ ಮಂತ್ರಿ ಆಗಿದ್ದಾಗ ಸಹಾಯ

ರೈಲ್ವೆ ಖಾತೆ ರಾಜ್ಯ ಮಂತ್ರಿಯಾಗಿದ್ದಾಗ, ಬೆಂಗಳೂರು ಸಬ್ ಅರ್ಬನ್ ರೈಲು ಸೇರಿದಂತೆ ರಾಜ್ಯದಲ್ಲಿ ರೈಲು ಮಾರ್ಗ ವಿಸ್ತರಣೆ ಕಾರ್ಯವನ್ನು ಸದಾನಂದಗೌಡ ಅವರು ಮಾಡಿದ್ದನ್ನು ಮರೆಯುವಂತಿಲ್ಲ. ಸದಾನಂದಗೌಡ ಅವರು ಮಾಡಿರುವ ಹಳೆಯ ಕಾರ್ಯಗಳೇ ಅವರ ಮೇಲೆ ಈಗ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

ಅನಂತ್‌ಕುಮಾರ್‌ ಅತ್ಯುತ್ತಮ ಕಾರ್ಯ ಮಾಡಿದ್ದರು

ಅನಂತ್‌ಕುಮಾರ್‌ ಅತ್ಯುತ್ತಮ ಕಾರ್ಯ ಮಾಡಿದ್ದರು

ಈ ಮುಂಚೆ ಅನಂತ್‌ಕುಮಾರ್‌ ಅವರ ಬಳಿ ಇದ್ದ ರಸಗೊಬ್ಬ ಮತ್ತು ರಸಾಯನಿಕ ಖಾತೆಯನ್ನು ಈ ಬಾರಿ ಸದಾನಂದಗೌಡ ಅವರಿಗೆ ನೀಡಲಾಗಿದೆ. ಕಳೆದ ಬಾರಿ ಅನಂತಕುಮಾರ್ ಅವರು ಜನೌಷಧಿ ಕೇಂದ್ರಗಳನ್ನು ತೆರೆದು ದೇಶದಾದ್ಯಂತ ಅತ್ಯಂತ ಕಡಿಮೆ ಬೆಲೆಗೆ ಔಷಧ ಸಿಗುವಂತೆ ಮಾಡಿ ಹೊಸ ಕ್ರಾಂತಿಯನ್ನೇ ಮಾಡಿದ್ದರು. ಹಾಗಾಗಿ ಈ ಬಾರಿ ಸದಾನಂದಗೌಡ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಮೂರು ಸಂಸದರನ್ನು ಕೊಟ್ಟು ಗಮನ ಸೆಳೆದ ಸುಳ್ಯ ಮೂರು ಸಂಸದರನ್ನು ಕೊಟ್ಟು ಗಮನ ಸೆಳೆದ ಸುಳ್ಯ

ನಿಂತಿರುವ ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನ

ನಿಂತಿರುವ ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನ

ಇದಕ್ಕೆ ಈಗಾಗಲೆ ಸಿದ್ದವಾಗಿರುವ ಸದಾನಂದಗೌಡ ಅವರು, ರಾಮಗುಂಡನ್, ಬರುನಿ, ತಲಚೇರ್, ಸಿಂಡ್ರಿ ಮತ್ತು ಗೋರಖ್‌ಪುರ್‌ನಲ್ಲಿನ ಪ್ರಮುಖ ರಸಗೊಬ್ಬರ ತಯಾರಿಕಾ ಘಟಕಗಳು ಮುಚ್ಚಿವೆ ಇವನ್ನು 15,000 ಕೋಟಿ ವೆಚ್ಚದಲ್ಲಿ ಪುನರ್‌ ತೆರೆದು ರಸಗೊಬ್ಬರುಗಳು ಇನ್ನಷ್ಟು ಕಡಿಮೆ ವೆಚ್ಚದಲ್ಲಿ ಜನರಿಗೆ ದೊರೆಯುವಂತೆ ಮಾಡುವ ಯೋಜನೆ ಸದಾನಂದಗೌಡರಿಗಿದೆ.

ಕ್ಯಾನ್ಸರ್‌ ಔಷಧ ಬೆಲೆ ಕಡಿಮೆ ಮಾಡುವ ಇರಾದೆ

ಕ್ಯಾನ್ಸರ್‌ ಔಷಧ ಬೆಲೆ ಕಡಿಮೆ ಮಾಡುವ ಇರಾದೆ

ಅದು ಮಾತ್ರವಲ್ಲದೆ, ಅನಂತ್‌ಕುಮಾರ್ ಅವರ ಹಾದಿಯಲ್ಲೇ ಸಾಗಿ, ಜನರಿಗೆ ಕಡಿಮೆ ಹಣಕ್ಕೆ ಔಷಧಗಳು ಸಿಗುವಂತೆ ಮಾಡುವ ಯೋಚನೆಯೂ ಅವರಿಗಿದೆ. ವಿಶೇಷವಾಗಿ ಕ್ಯಾನ್ಸರ್‌ ಔಷಧಗಳು, ಜೀವನಿರೋಧಕಗಳನ್ನು ಕಡಿಮೆ ಬೆಲೆಗೆ ಸಿಗುವಂತೆ ಮಾಡುವ ಯೋಜನೆ ಸದಾನಂದಗೌಡ ಅವರಿಗಿದೆ.

ಕರ್ನಾಟಕ-ಕೇಂದ್ರಕ್ಕೆ ಸೇತುವೆಯಾಗಿ ಮಾಡಬೇಕು ಕಾರ್ಯ

ಕರ್ನಾಟಕ-ಕೇಂದ್ರಕ್ಕೆ ಸೇತುವೆಯಾಗಿ ಮಾಡಬೇಕು ಕಾರ್ಯ

ಆಡಳಿತ ಪಕ್ಷದವರೇ 24 ಜನ ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆಲ್ಲ ಮಖಂಡರಾಗಿ ಸದಾನಂದಗೌಡ ಅವರು ಇರಲಿದ್ದಾರೆ. ಮಂತ್ರಿಯಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಕರ್ನಾಟಕದ ಪ್ರತಿನಿಧಿಯಾಗಿಯೂ ಅವರು ಕಾರ್ಯ ನಿರ್ವಹಿಸಬೇಕಿದೆ.

English summary
Sadananda Gowd had plans already for next five years of his service as minister. He should replace the Ananthkumar who was worked as bridge between Karnataka and central government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X