ಆಂಜನೇಯ ಭವಿಷ್ಯ- ಸಿಎಂ, ಹೈಕಮಾಂಡ್ ಕೈಲಿದೆ: ಪರಂ
ಬೆಂಗಳೂರು, ನ.06: ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಆಂಜನೇಯ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ವಿಪಕ್ಷಗಳ ಆಗ್ರಹ ಹೆಚ್ಚಾಗಿದೆ. ಆಂಜನೇಯ ಅವರ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಘಟನೆ ಬಗ್ಗೆ ಸಚಿವ ಎಚ್ ಆಂಜನೇಯ ಅವರಿಂದ ವಿವರಣೆ ಪಡೆದು ನಂತರ ಹೈಕಮಾಂಡ್‌ಗೆ ವರದಿ ನೀಡಲಾಗುವುದು. ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.[ಸಚಿವ ಆಂಜನೇಯ ಪ್ರಕರಣ : ಯಾರು, ಏನು ಹೇಳಿದರು?]
ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಂಜನೇಯ ಪ್ರಕರಣದ ಬಗ್ಗೆ ಖಾಸಗಿ ಚಾನೆಲ್ ನಡೆಸಿರುವ ಕುಟುಕು ಕಾರ್ಯಾಚರಣೆ ಬಗ್ಗೆ ಖುದ್ದು ಕೇಳಿ ಬಂದಿರುವ ಆರೋಪದ ಬಗ್ಗೆ ವರದಿ ನೀಡುವಂತೆ ಆಂಜನೇಯ ಅವರಿಗೆ ಸೂಚಿಸಲಾಗಿದೆ.

ಆಂಜನೇಯ ಅವರಿಂದ ವಿವರಣೆ ಪಡೆದು ನಂತರ ಹೈಕಮಾಂಡ್‌ಗೆ ವರದಿ ನೀಡುತ್ತೇನೆ, ಉಳಿದಂತೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಹೈಕಮಾಂಡ್‌ಗೆ ಬಿಟ್ಟ ವಿಷಯ ಹಾಗೂ ಸಿಎಂ ಅವರೂ ಕೂಡ ತಮ್ಮ ವಿವೇಚನೆಯಾನುಸಾರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ಹೈಕಮಾಂಡ್ ಗೆ ರಿಪೋರ್ಟ್ : ಲಂಚ ಸ್ವೀಕಾರ ಆರೋಪಕ್ಕೆ ಗುರಿಯಾಗಿರುವ ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಅವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಮೌನಕ್ಕೆ ಶರಣಾಗಿದೆ.
ಸಚಿವ ಆಂಜನೇಯ ಅವರ ಪತ್ನಿ ವಿಜಯಾ ಅವರು ಲಂಚ ಸ್ವೀಕರಿಸಿದ ದೃಶ್ಯಗಳನ್ನು ಖಾಸಗಿ ಟಿವಿ ಚಾನಲ್‌ವೊಂದು ಕುಟುಕು ಕಾರ್ಯಾಚರಣೆ ಮುಖಾಂತರ ಬಯಲಾಗಿತ್ತು.
ಈ ಪ್ರಕರಣ ಕುರಿತು ವರದಿ ನೀಡುವಂತೆ ಆಂಜನೇಯ ಅವರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಪ್ರತಿಕ್ರಿಯಿಸಿದ್ದಾರೆ.ಹೈಕಮಾಂಡ್ ಯಾವ ಕ್ರಮ ಜರುಗಿಸಲಿದೆ ಎಂಬುದು ಕಾದು ನೋಡಬೇಕಿದೆ.












Click it and Unblock the Notifications