SM Krishna: ಬೆಂಗಳೂರು ಐಟಿ ಪಿತಾಮಹ, ಕನ್ನಡಿಗರ ಪಾಲಿನ ಉದ್ಯೋಗದಾತ ಎಸ್.ಎಂ. ಕೃಷ್ಣ ಸಾಧಿಸಿದ್ದು ಏನು?
ಕನ್ನಡ ನಾಡು ವೈವಿದ್ಯತೆಯ ಬೀಡು, ಕನ್ನಡ ನಾಡು ಸಂಸ್ಕೃತಿಯ ತವರು.... ಹೀಗೆ ಕನ್ನಡ ನಾಡಿನ ಬಗ್ಗೆ ಹೊಗಳುತ್ತಾ ಹೋದರೆ ಅದಕ್ಕೆ ಸಮಯ ಸಾಲುವುದಿಲ್ಲ. ಯಾಕಂದ್ರೆ ನಾವು ಕನ್ನಡಿಗರು ಪ್ರತಿಕ್ಷಣ ಹೆಮ್ಮೆ ಪಡುವಷ್ಟು ವಿಚಾರಗಳು ನಮ್ಮ ಕನ್ನಡ ನಾಡಿನಲ್ಲಿ ಅಂದರೆ ಕರ್ನಾಟಕದಲ್ಲಿ ಇದೆ. ಅದರಲ್ಲೂ 'ಐಟಿ & ಬಿಟಿ' ತವರು ಎಂಬ ಹೆಮ್ಮೆಯನ್ನು ಗಳಿಸಿದ್ದ, ಪ್ರಪಂಚದ ಮೂಲೆ ಮೂಲೆಗೂ ನಮ್ಮ ಬೆಂಗಳೂರು ತನ್ನ ಕೀರ್ತಿ ಪತಾಕೆ ಹಬ್ಬಿಸಿದ್ದ ಸಾಧನೆ ಹಿಂದಿನ ಕಾರಣ ಎಸ್.ಎಂ. ಕೃಷ್ಣ ಅವರು, ಅದು ಹೇಗೆ ಗೊತ್ತಾ?
ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದು 1999 ರಲ್ಲಿ. ಹೀಗೆ ಆಗಿನ ಕಾಲಘಟ್ಟದಲ್ಲಿ, ಬೆಂಗಳೂರು ನಗರ ಹೊಸ ಅಭಿವದ್ಧಿ ಹಾದಿಯತ್ತ ಹೆಜ್ಜೆ ಹಾಕುತ್ತಾ ಇತ್ತು. ಕರ್ನಾಟಕದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣ ಎಸ್.ಎಂ. ಕೃಷ್ಣ ಅವರು ಹಲವಾರು ಬದಲಾವಣೆಗಳಿಗೆ ಮುಂದಾದರು. 2000ರ ಹೊತ್ತಿಗೆ ಎಸ್.ಎಂ. ಕೃಷ್ಣ ಅವರ ಸರ್ಕಾರ ಜಾರಿಗೆ ತಂದ ಹಲವು ಬದಲಾವಣೆಗಳ ಪರಿಣಾಮ ದೊಡ್ಡ ಕ್ರಾಂತಿ ಕನ್ನಡ ನಾಡಲ್ಲಿ ಮೂಡಿತ್ತು. ಅದರಲ್ಲೂ ಐಟಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ಆರಂಭ ಆಗಿತ್ತು.

ಬೆಂಗಳೂರಿಗೆ 'ಐಟಿ' ತವರು ಎಂಬ ಬಿರುದು!
ನಮ್ಮ ಬೆಂಗಳೂರಿಗೆ 'ಐಟಿ' ತವರು ಎಂಬ ಬಿರುದು ಸಿಗುವಲ್ಲಿ ಎಸ್.ಎಂ. ಕೃಷ್ಣ ಅವರ ಪಾತ್ರ ಕೂಡ ದೊಡ್ಡದು. ಯಾಕಂದ್ರೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಅಭಿವೃದ್ಧಿ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಐಟಿ ಕಂಪನಿಗಳಿಗೆ ಬೇಕಾದ ವ್ಯವಸ್ಥೆಗಳ ಮಾಡಿದ್ದರು. ಹಾಗೇ ಕರ್ನಾಟಕ ರಾಜ್ಯದಲ್ಲಿ ಐಟಿ ಕಂಪನಿಗಳು ನೆಲೆಯೂರಲು ಬೇಕಿದ್ದ, ಎಲ್ಲಾ ರೀತಿಯ ವ್ಯವಸ್ಥೆಗಳನ್ನ ಮಾಡಲಾಗಿತ್ತು. ಈ ಮೂಲಕ ಕೋಟ್ಯಂತರ ಉದ್ಯೋಗದ ಸೃಷ್ಟಿಗು ಎಸ್.ಎಂ. ಕೃಷ್ಣ ಅವರು ಕಾರಣವಾಗಿದ್ದರು.
ಎಸ್‌ಎಂಕೆ ಸರ್ಕಾರ ಕೂಡ ಐಟಿ ಕಂಪನಿಗಳಿಗೆ ಬೇಕಾದ ರೀತಿಯಲ್ಲಿ ನಿಮಯಗಳ ರೂಪಿಸಿ ಕನ್ನಡ ನಾಡಲ್ಲಿ ಐಟಿ & ಬಿಟಿ ಕಂಪನಿಗಳು ಬಂದು ನೆಲೆಯೂರುವಂತೆ ಮಾಡಿದ್ದರು. ಹೀಗೆ ಬೆಂಗಳೂರಿನ & ಕರ್ನಾಟಕದ ಐಟಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಎಸ್.ಎಂ. ಕೃಷ್ಣ ಅವರ ಈ ಸಾಧನೆಗಳು ಸಾಕಷ್ಟು ಸಹಾಯ ಮಾಡಿದ್ದವು.
ಗಣ್ಯರಿಂದ SMK ಅವರ ಸಾವಿಗೆ ಸಂತಾಪ
ಕರ್ನಾಟಕದ ಸಿಎಂ ಆಗಿ, ಕರ್ನಾಟಕ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜಾಗತಿಕ ಮಟ್ಟದಲ್ಲಿ, ಕನ್ನಡ ನಾಡು ಗುರುತಿಸಿಕೊಳ್ಳಲು ಕೊಡುಗೆ ನೀಡಿದ್ರು ಎಸ್.ಎಂ. ಕೃಷ್ಣ ಅವರು. ಹೀಗಿದ್ದಾಗಲೇ, 92ರ ಇಳಿ ವಯಸ್ಸಿನಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆ ಎಸ್.ಎಂ. ಕೃಷ್ಣ ಅವರನ್ನು ಕಾಡಿದವು. ಅದರಲ್ಲೂ, ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ, ತುರ್ತು ನಿಗಾ ಘಟಕ ಅಂದ್ರೆ ಐಸಿಯು ಸೇರಿ ಚಿಕಿತ್ಸೆ ಪಡೆದರು.
ಹೀಗೆ ಎಸ್.ಎಂ. ಕೃಷ್ಣ ಅವರು ಚಿಕಿತ್ಸೆ ಫಲಿಸದೆ ಇದೀಗ ಇಹಲೋಕ ತ್ಯಜಿಸಿದ್ದು, ಕನ್ನಡ ನಾಡಿನ ಕೋಟಿ ಕೋಟಿ ಅಭಿಮಾನಿಗಳನ್ನ ಕೂಡ ಅಗಲಿ ಹೋಗಿದ್ದಾರೆ. ಹೀಗಿದ್ದಾಗ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಾವಿನ ಸುದ್ದಿ ಸೋಷಿಯಲ್ ಮೀಡಿಯಾ ಸೇರಿ, ಇಡೀ ಇಂಟರ್‌ನೆಟ್ ಪೂರ್ತಿ ಸಂಚಲನ ಸೃಷ್ಟಿ ಮಾಡಿದೆ.












Click it and Unblock the Notifications