2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ನಿಚ್ಚಳ ಬಹುಮತ!

ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ. ಕಾಪ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಉಲ್ಲೇಖ. ಕೆಲವಾರು ಸುದ್ದಿ ಸಂಸ್ಥೆಗಳ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ.

ಬೆಂಗಳೂರು, ಜುಲೈ 3: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಸಮೀಕ್ಷೆಯೊಂದು ತಿಳಿಸಿದೆ.

'ಕಾಪ್ಸ್' ಎಂಬ ಸಂಸ್ಥೆ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಈ ವಿಚಾರ ಉಲ್ಲೇಖವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಎರಡು ವಾರಗಳ ಹಿಂದೆಯೇ ಈ ವರದಿ ಬಿಡುಗಡೆಯಾಗಿತ್ತೆಂದು ಹೇಳಲಾಗಿದೆ.

Ruling Congress will get majority in next Assembly elections in Karnataka: Survey

ಸಮೀಕ್ಷಾ ವರದಿಯ ಪ್ರಕಾರ, ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ 127 ಸ್ಥಾನ, ಬಿಜೆಪಿಗೆ 70, ಜೆಡಿಎಸ್ ಗೆ 27 ಸಿಗಲಿವೆ ಎಂದು ಹೇಳಲಾಗಿದೆ.

ಕಳೆದ ವರ್ಷ, ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದೆಂದು ಸಂಸ್ಥೆ ಹೇಳಿತ್ತು. ಆಗಿನ ಲೆಕ್ಕಾಚಾರದ ಪ್ರಕಾರ, ಬಿಜೆಪಿಗೆ 143, ಕಾಂಗ್ರೆಸ್ ಗೆ 63 ಹಾಗೂ ಜೆಡಿಎಸ್ ಗೆ 18 ಸ್ಥಾನ ಸಿಗುತ್ತವೆ ಎಂದು ಹೇಳಲಾಗಿತ್ತು. ಆದರೆ, ಈ ವರ್ಷ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು ಹಾಗೂ ಇತ್ತೀಚಿನ ಕೆಲ ರಾಜಕೀಯ ವಿದ್ಯಮಾನಗಳು ಹಿಂದಿನ ಸಮೀಕ್ಷೆಯನ್ನು ಸುಳ್ಳಾಗಿಸಿವೆ ಎಂದೂ ಹೇಳಲಾಗಿದೆ.

ಆದರೆ, ಈ ಸಮೀಕ್ಷಾ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೆಲ ರಾಜಕೀಯ ಆಸಕ್ತರು, ಚುನಾವಣೆಗೆ ಇನ್ನೂ ಹೆಚ್ಚೂಕಮ್ಮಿ ಒಂದು ವರ್ಷ ಸಮಯವಿರುವುದರಿಂದ ಅಷ್ಟರಲ್ಲಿ ನಡೆಯುವ ಮುಂದಿನ ರಾಜಕೀಯ ವಿದ್ಯಮಾನಗಳೂ ಚುನಾವಣೆಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+