ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಟ್ಟ ಆರ್ ಟಿಐ ಕಾರ್ಯಕರ್ತ ರಾಜಶೇಖರ್ ಸಂದರ್ಶನ

By ಜಿಎಂ ರೋಹಿಣಿ, ಬಳ್ಳಾರಿ
|
Google Oneindia Kannada News

ರಾಜಶೇಖರ ಮುಲಾಲಿ. ಆರ್‍ಟಿಐ ಕಾರ್ಯಕರ್ತನಾಗಿ, ಅಣ್ಣಾ ಹಜಾರೆ ಅವರ ಆಪ್ತನಾಗಿ ನಾಡಿನಾದ್ಯಂತ ಪರಿಚಿತ. ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡಿದ್ದ ಎಚ್.ವೈ. ಮೇಟಿ ಪ್ರಕರಣದಲ್ಲಿ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದ ಮುಲಾಲಿ, ಮಾತನಾಡಿದ್ದೆಲ್ಲಾ 'ಸುದ್ದಿ', ಹೇಳಿದ್ದೆಲ್ಲಾ ಮಾಧ್ಯಮಗಳಿಗೆ 'ಆಹಾರ' ಎನ್ನುವಂತಾಗಿತ್ತು.

1999 - 2000ರ ಸಂದರ್ಭದಲ್ಲಿ ಜಿ. ಜನಾರ್ದನ ರೆಡ್ಡಿ ವಿಧಾನ ಪರಿಷತ್ತಿನ ಸದಸ್ಯರಾಗಿ ಸದನದಲ್ಲಿ ಏಕಾಏಕಿ 150 ಕೋಟಿ ರೂಪಾಯಿ ಗಣಿ ಲಂಚ ಹಗರಣವನ್ನು ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಪ್ರಸ್ತಾಪಿಸಿದ ನಂತರ, ಅದರಷ್ಟೇ ತೀವ್ರತೆಯನ್ನು ಪಡೆದಿದ್ದ ಮತ್ತೊಂದು ಸಿಡಿ ಬಿಡುಗಡೆ ಪ್ರಕರಣ ಎಚ್.ವೈ. ಮೇಟಿ ಅವರದ್ದು, ಅದೂ ಬಳ್ಳಾರಿಯಿಂದ.

ಕೂಡ್ಲಿಗಿಯ 'ಹಳೆ ಹುಲಿ' ಬೊಮ್ಮಣ್ಣ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ
ಆಗ, ಜಿ. ಜನಾರ್ದನ ರೆಡ್ಡಿ ಸಿಡಿ ಬಿಡುಗಡೆಗೆ ಪಡೆದಿದ್ದ ಪ್ರಚಾರ ರಾಷ್ಟ್ರಮಟ್ಟದ್ದಾಗಿತ್ತು. ಮುಲಾಲಿ ಸಿಡಿ ಬಿಡುಗಡೆ ಪ್ರಕರಣವೂ ಅಷ್ಟೇ ತೀವ್ರತೆಯನ್ನು ಪಡೆದಿತ್ತು ಎನ್ನುವುದು ವಿಶೇಷ.

ಆದರ್ಶ, ಮಾದರಿ - ಸರಳ ಬದುಕು ನಡೆಸಬೇಕು ಎನ್ನುವ ಹಂಬಲದಿಂದ ಅಣ್ಣಾ ಹಜಾರೆ ಅವರ ಅನುಯಾಯಿಯಾಗಿ ಅವರಿಂದ 'ಭ್ರಷ್ಟಾಚಾರ ಮುಕ್ತ' ಆಡಳಿತ ನಡೆಸುವ ದೀಕ್ಷೆಯನ್ನು ತೊಟ್ಟಿರುವ ರಾಜಶೇಖರ ಮುಲಾಲಿ, ಬೆಳೆದು ಬಂದ ಪರಿಸರವೂ ಮಧ್ಯಮವರ್ಗದ್ದು. ಆದರೆ, ಅವರಿಂದು ಬೆಳೆದು ನಿಂತಿರುವ ಪರಿ ವಿಶೇಷ. ಈ ಹಿನ್ನಲೆಯಲ್ಲಿ ಒನ್ಇಂಡಿಯಾ ಕನ್ನಡದ ಜೊತೆ ಮಾತನಾಡಿದರು.

ಬೆನ್ನೆಲುಬಾಗಿ ನಿಂತಿರುವ ರಾಜಶೇಖರ ಮುಲಾಲಿ

ಬೆನ್ನೆಲುಬಾಗಿ ನಿಂತಿರುವ ರಾಜಶೇಖರ ಮುಲಾಲಿ

ಒಂದು ಹಂತದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಅನುಪಮ ಶೆಣೈ ಅವರು ಮುಲಾಲಿಯೊಂದಿಗೆ ಗುರುತಿಸಿಕೊಂಡು, ಶೆಣೈ ಸ್ವಂತ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಹೋರಾಟಗಳನ್ನು ನಡೆಸುವಲ್ಲಿ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಬೆನ್ನೆಲುಬಾಗಿ ನಿಂತಿರುವ ರಾಜಶೇಖರ ಮುಲಾಲಿ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 23ರಂದು, ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡು 'ಭ್ರಷ್ಟಾಚಾರ ಮುಕ್ತ ಕರ್ನಾಟಕ್ಕಾಗಿ, ನಿಮ್ಮ ಮತ' ಎನ್ನುವ ಘೋಷವಾಕ್ಯದೊಂದಿಗೆ ಜನರನ್ನು ಸಂಪರ್ಕ ಮಾಡಲಿದ್ದಾರೆ.

ನಿಮ್ಮ ಪಾದಯಾತ್ರೆ ಯಾವ ಉದ್ದೇಶಕ್ಕಾಗಿ?

ನಿಮ್ಮ ಪಾದಯಾತ್ರೆ ಯಾವ ಉದ್ದೇಶಕ್ಕಾಗಿ?

ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕಾಗಿ ಅನಾಚಾರಮುಕ್ತ, ಜಾತಿ, ಧರ್ಮ, ಪಂಥ, ಲಿಂಗ ತಾರತಮ್ಯ ರಹಿತ ಪ್ರಜಾಪ್ರತಿನಿಧಿಗಳ ಆಯ್ಕೆಗಾಗಿ ಪಾದಯಾತ್ರೆ. ನನ್ನ ಪಾದಯಾತ್ರೆಯಿಂದ ಸಾರ್ವಜನಿಕರು, ರೈತಬಾಂಧವರು, ಯುವಶಕ್ತಿ ಪ್ರೇರಣೆ ಪಡೆದು ತಮಗೆ ಬೇಕಾದ ಸಮರ್ಥ ಆಡಳಿತಗಾರರನ್ನು ತಮ್ಮ ಶಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿರುವೆ'.

ಈ ವ್ಯವಸ್ಥೆಯಲ್ಲಿ ಗುರಿ ತಲುಪುವ ವಿಶ್ವಾಸವಿದೆಯೇ?

ಈ ವ್ಯವಸ್ಥೆಯಲ್ಲಿ ಗುರಿ ತಲುಪುವ ವಿಶ್ವಾಸವಿದೆಯೇ?

ಖಂಡಿತ ಗುರಿ ತಲುಪುವೆ. ನನ್ನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಮೂಲತಃ ಭ್ರಷ್ಠಾಚಾರ ವಿರೋಧಿ ಹೋರಾಟಗಾರ. ನಿಷ್ಠೆ - ಪ್ರಾಮಾಣಿಕತೆ, ಬದ್ಧತೆ - ಸತತ ಪ್ರಯತ್ನಗಳೇ ನನ್ನ ಯಶಸ್ಸಿನ ಮಂತ್ರಗಳು. ಛಲವಿದೆ. ಹೋರಾಟದ ಕಿಚ್ಚಿದೆ. ಪ್ರಯತ್ನ ನನ್ನದು. ಗುರಿ ತಲುಪುವೆ.

ಮಾರ್ಚ್ 23ರ ಶನಿವಾರ ಬಳ್ಳಾರಿಯ ಮೋತಿ ಸರ್ಕಲ್ ನ ಬಸವೇಶ್ವರ ಪುತ್ಥಳಿಗೆ ಹೂವಿನಹಾರ ಹಾಕುವ ಮೂಲಕ ಹೆಜ್ಜೆ ಹಾಕುವೆ. ಅನೇಕರು ನನ್ನೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಬೆಂಬಲಿಗರ ಪಡೆಯಿದೆ. ಪಾದಯಾತ್ರೆ ಹೋಗುವವರು ಬಳ್ಳಾರಿಯವರೇ ಆಗಿರುವುದರಿಂದ ಬಿರುಬಿಸಿಲಿಗೆ ಅಂಜುವ ಪ್ರಮೇಯವೇ ಇಲ್ಲ. ನನ್ನೊಂದಿಗೆ ವೀರಯೋಧರು, ಪರಿಸರ ಪ್ರೇಮಿಗಳು, ಸಮಾಜಮುಖಿ ಕಾಳಜಿಯುಳ್ಳವರು, ಸಮಾನ ಮನಸ್ಕರು, ವಿವಿಧ ಸಂಘಟನೆಗಳವರು,

ಸಾಮಾಜಿಕ ಕಾರ್ಯಕರ್ತರು, ಪ್ರಜ್ಞಾವಂತ ಮತದಾರರು, ಹೋರಾಟಗಾರರು, ನಿವೃತ್ತ ಅಧಿಕಾರಿಗಳು, ನೌಕರರು, ವಿದ್ಯಾರ್ಥಿಗಳು, ಸ್ವಸ್ಥಸಮಾಜದ ಹಿತೈಷಿಗಳು ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗೆ, ಭಾರತ ಸಂವಿಧಾನಕ್ಕೆ ಗೌರವಿಸುವವರು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.

ಪೂರ್ವಭಾವಿ ಸಿದ್ಧತೆ ಏನಾಗಿದೆ?

ಪೂರ್ವಭಾವಿ ಸಿದ್ಧತೆ ಏನಾಗಿದೆ?

ಹದಿನೈದು ದಿನಗಳ ಪಾದಯಾತ್ರೆಗೆ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದೇನೆ. ಬಿರುಬಿಸಿಲು. ಬಸವಳಿಯುವ ತಾಪ. ದಾರಿಯುದ್ಧಕ್ಕೂ ಜನಪರ ಸಂಘಟನೆಗಳು, ಅಭಿಮಾನಿಗಳು ಕೈಜೋಡಿಸುವ ಸಾಧ್ಯತೆಗಳಿವೆ. ತುಮಕೂರುವರೆಗೂ ಪ್ರವಾಸ ಮಾಡಿ, ವಸತಿ ವ್ಯವಸ್ಥೆ, ಊಟ - ತಿಂಡಿ, ಔಷಧಿ, ಚಿಕಿತ್ಸೆ ವ್ಯವಸ್ಥೆ ಮಾಡಿಕೊಂಡಿರುವೆ. ಪೊಲೀಸ್ ಭದ್ರತೆ ಕೋರಿ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗಿದೆ. ಇದೊಂದು ರೀತಿಂiÀiಲ್ಲಿ ಸಾಮಾಜಿಕ ಹೋರಾಟವಾಗಿ ರೂಪುಗೊಳ್ಳಲಿದೆ.

ನಿಮ್ಮ ಪಾದಯಾತ್ರೆಗೆ ಮಹತ್ವ ಬರಲಿದೆಯೇ?

ನಿಮ್ಮ ಪಾದಯಾತ್ರೆಗೆ ಮಹತ್ವ ಬರಲಿದೆಯೇ?

ವಿಧಾನಸಭಾ ಚುನಾವಣೆಗೂ ನನ್ನ ಪಾದಯಾತ್ರೆಗೂ ಸಂಬಂಧವೇ ಇಲ್ಲ. ಭ್ರಷ್ಟಾಚಾರಮುಕ್ತ ಸಮಾಜಕ್ಕಾಗಿ' ಘೋಷವಾಕ್ಯ ನಮ್ಮದು. ಇದು ಪ್ರತಿ ಚುನಾವಣೆಯಲ್ಲೂ, ಪ್ರತಿ ಹಂತದಲ್ಲೂ ಜಾರಿಯಲ್ಲಿ ಇರುತ್ತದೆ. ನನ್ನ ಈ ಅಭಿಯಾನ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಯಾವುದೇ ರಾಜಕೀಯ ಪಕ್ಷದಪರ ಅಥವಾ ವಿರೊಧ ಅಲ್ಲ. ಸಾರ್ವಜನಿಕ ಹಿತವೇ ನನ್ನ ಮತ್ತು ನಮ್ಮವರ ಗುರಿ. ಕಾರಣ ಮುಂಬರುವ ಚುನಾವಣೆ ಪಾದಯಾತ್ರೆ ಅಭಿಯಾನಕ್ಕೆ ಸಂಬಂಧಿಸಿದ್ದಲ್ಲ.

ಸಮಾರೋಪ ಎಲ್ಲಿ? ಹೇಗೆ?

ಸಮಾರೋಪ ಎಲ್ಲಿ? ಹೇಗೆ?

ಹದಿನೈದು ದಿನಗಳ ಪಾದಯಾತ್ರೆಯನ್ನು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸಮಾರೋಪಗೊಳಿಸಲಾಗುತ್ತದೆ. ಸಮಾರೋಪದ ದಿನದಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ನಂತರ ರಾಜ್ಯಪಾಲರನ್ನು ಭೇಟಿ ಮಾಡಿ, ಪಾದಯಾತ್ರೆಯ ಕುರಿತು ಮಾತನಾಡಲು ಪ್ರಯತ್ನಿಸುವೆ. ಈ ಸಮಾರಂಭದಲ್ಲಿ ನಾಡಿನ ಗಣ್ಯರು ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.

ಚುನಾವಣಾ ಕಣಕ್ಕಿಳಿಯುವ ಗುರಿ ಇದೆಯೇ?

ಚುನಾವಣಾ ಕಣಕ್ಕಿಳಿಯುವ ಗುರಿ ಇದೆಯೇ?

ಖರ್ಚು - ವೆಚ್ಚಗಳು? : ನಾನು ಕಳೆದ 14 ವರ್ಷಗಳಿಂದ ಯಶಸ್ವೀ ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ನಡೆಸಿದ್ದೇನೆ. ಇಲ್ಲಿಯವರೆಗೂ ಯಾರ ಬಳಿಯೂ ಆರ್ಥಿಕ ಸಹಾಯ ಪಡೆದಿಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ. ಮೂಲತಃ ನಾನೊಬ್ಬ ಪ್ರಗತಿಪರ ರೈತ. ಈ ವರ್ಷ ಸುಮಾರು 20 ಲಕ್ಷ ರೂಪಾಯಿ ಬೆಳೆ ಬೆಳೆದು ಕೃಷಿ ಆದಾಯ ಹೊಂದಿದ್ದೇನೆ. ಇದೇ ಹಣವನ್ನು ಪಾದಯಾತ್ರೆಗೆ ವಿನಿಯೋಗಿಸುತ್ತಿರುವೆ.

ಚುನಾವಣಾ ಕಣಕ್ಕಿಳಿಯುವ ಗುರಿ ಇದೆಯೇ? : ಖಂಡಿತವಾಗಿಯೂ ಪ್ರಸ್ತುತ ಆ ವಿಚಾರವಿಲ್ಲ. ಚುನಾವಣೆಗೆ ಸ್ಪರ್ಧಿಸಿದಲ್ಲಿ ಭ್ರಷ್ಟಾಚಾರ ನನ್ನನ್ನೂ ಆವರಿಸಿಕೊಳ್ಳುವ ಭಯ - ಆತಂಕವಿದೆ. ಕಾರಣ ಎಲೆಕ್ಷನ್ ಪಾಲಿಟಿಕ್ಸ್‍ನಿಂದ ನಾನು ಬಹುದೂರವೇ ಇರುತ್ತೇನೆ. ಹೋರಾಟವೇ ಸಾಕು. ಸಮಾಧಾನ ನೀಡಿದೆ. ತೃಪ್ತಿ ಹೊಂದಿದ್ದೇನೆ. ನಿಷ್ಕಳಂಕ, ಭ್ರಷ್ಟಾಚಾರ ಮುಕ್ತ, ಆರೋಪಮುಕ್ತ ನೇತಾರರು ರೂಪುಗೊಂಡಲ್ಲಿ ನಾನು ಸಾರ್ಥಕತೆ ಪಡೆಯುವೆ.

ಎಚ್.ವೈ ಮೇಟಿ ರಾಸಲೀಲೆ ಸಿಡಿ ನಾನು ನೋಡಿಲ್ಲ: ಅನುಪಮಾಎಚ್.ವೈ ಮೇಟಿ ರಾಸಲೀಲೆ ಸಿಡಿ ನಾನು ನೋಡಿಲ್ಲ: ಅನುಪಮಾ

ಬಳ್ಳಾರಿ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಸಂದರ್ಶನಬಳ್ಳಾರಿ: ಜೆಡಿಯು ಅಭ್ಯರ್ಥಿ ಟಪಾಲ್ ಗಣೇಶ್ ಸಂದರ್ಶನ

English summary
RTI activist, anti-corruption crusader Rajashekar Mulali interview. The daring RTI activist from Ballari had bared H Y Meti, who was allegedly involved in scandal with a woman. Now, Rajashekar is on Padayatra Ballari to Bengaluru to create awareness. In an interview he said he has no plan to join political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X