ಎಸ್‌ಪಿಬಿ ಹಾಡು-ಮಾತು-ವ್ಯವಹಾರ ಎಲ್ಲವೂ ಶ್ರೇಷ್ಠ: ದತ್ತಾತ್ರೇಯ ಹೊಸಬಾಳೆ
ಬೆಂಗಳೂರು, ಸೆ. 25: ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನ ಭರಿಸಲಾಗದ ದುಃಖ ತಂದಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಮಾನವೀಯ ಗುಣ ಮತ್ತು ಮೌಲ್ಯಗಳ ನಿಧಿಯಾಗಿದ್ದರು. ಕರ್ನಾಟಕ ಸಂಗೀತ ಸಾಮ್ರಾಟರಾಗಿದ್ದ ಅವರು, ಹಾಡಿನ ಲೋಕದ ಕಣ್ಮಣಿಯೂ ಆಗಿದ್ದರು ಎಂದು ಅವರ ಕಲಾ ಸೇವೆಯನ್ನು ನೆನಪಿಸಿಕೊಂಡಿದ್ದಾರೆ.
ಅವರ ಹಾಡು-ಮಾತು-ವ್ಯವಹಾರ ಎಲ್ಲವೂ ಶ್ರೇಷ್ಠ ಹಾಗೂ ಉದಾತ್ತವಾಗಿತ್ತು. ಬದುಕಿರುವಾಗಲೇ ದಂತಕತೆಯಾದ ಈ ಅಮರ ಗಾಯಕರನ್ನು ನಾಡು ಸದಾ ನೆನಪಿಡುತ್ತದೆ. ದಿವಂಗತ ಆತ್ಮಕ್ಕೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಎಂದು ದತ್ತಾತ್ರೆಯ ಹೊಸಬಾಳೆ ಅವರು ತಮ್ಮ ಶೋಖ ಸಂದೇಶದಲ್ಲಿ ತಿಳಿಸಿದ್ದಾರೆ.

ಗಾನ ಗಂಧರ್ವ ಬಾಲಸುಬ್ರಹ್ಮಣ್ಯಂ ನಿಧನ: ಎಸ್‌ಪಿಬಿ ಕಳೆದ ಒಂದು ತಿಂಗಳಿನಿಂದ ಚೆನೈನ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದರು. ಕೊರೊನಾ ವೈರಸ್ ಸೋಂಕು ನೆಗಟಿವ್ ಆಗ ಬಳಿಕವೂ ಬಾಲಸುಬ್ರಹ್ಮಣ್ಯಂ ಅವರು ಚೇತರಿಸಿ ಕೊಂಡಿದ್ದರು. ಆದರೂ ಅವರ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಲೇ ಇಲ್ಲ. ಇಂದು ಮಧ್ಯಾಹ್ನ ಅವರು ನಿಧನರಾದರು ಎಂದು ಘೋಷಣೆ ಮಾಡಲಾಯಿತು.












Click it and Unblock the Notifications