28,000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ: 12,500 ಉದ್ಯೋಗ ಸೃಷ್ಟಿ! ಕರ್ನಾಟಕದ ಈ ಜಿಲ್ಲೆಗೆ ಬಂಪರ್
ಬೆಂಗಳೂರು, ಮೇ 21: ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ಮಾತ್ರವಲ್ಲದೇ ಬೇರೆ ಬೆರೆ ಭಾಗಕ್ಕೆ ಸಣ್ಣ ಪ್ರಮಾಣದ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ. ಈ ಹಿಂದೆ ಹುಬ್ಬಳ್ಳಿ ಧಾರವಾಡದ ಅಭಿವೃದ್ಧಿಗೆ, ವಿಜಯಪುರ ಜಿಲ್ಲೆ ವ್ಯಾಪ್ತಿಗೆ ಕೆಲ ಕೈಗಾರಿಕೆ ಯೋಜನೆಗಳನ್ನು ತರಲಾಗಿದೆ. ಇದರ ಬೆನ್ನಲ್ಲೆ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಗೂ ಕೈಗಾರಿಕಾಭಿವೃದ್ಧಿಯ ಪರ್ವಕಾಲ ಶುರುವಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಮಾಹಿತಿ ನೀಡಿದರು.
ಬೆಳಗಾವಿಗೆ ಕೈಗಾರಿಕಾಭಿವೃದ್ಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವ ಎಂಬಿ ಪಾಟೀಲ್ ಅವರು, ಬೆಳಗಾವಿ ಕೈಗಾರಿಕಾಭಿವೃದ್ದಿಯ ಪರ್ವಕಾಲದಲ್ಲಿದೆ. ಇನ್ವೆಸ್ಟ್ ಕರ್ನಾಟಕದ ಫಲವಾಗಿ ಇತ್ತೀಚೆಗೆ ಬೆಳಗಾವಿ ಜಿಲ್ಲೆಯೊಂದಕ್ಕೆ 28,000 ಕೋಟಿಗೂ ರೂಪಾಯಿ ಅಧಿಕ ಬಂಡವಾಳ ಹರಿದು ಬಂದಿದೆ. ಒಟ್ಟು ಹತ್ತು ಕಂಪನಿಗಳು ವಿವಿಧ ರಂಗದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಮೂಲಕ ಭವಿಷ್ಯದಲ್ಲಿ ಬೆಳಗಾವಿ ದಕ್ಷಿಣ ಭಾರತದ ನೂತನ ಕೈಗಾರಿಕೆ ಹಬ್ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

12,500 ಉದ್ಯೋಗ ಸೃಷ್ಟಿ
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ರಕ್ಷಣೆ, ಕೃಷಿ, ಆಹಾರ ಸಂಸ್ಕರಣೆ, ಸುಸ್ಥಿರ ಇಂಧನ ಮುಂತಾದ ಕ್ಷೇತ್ರಗಳಲ್ಲಿ 10 ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ. ಇದರಿಂದ ನೇರವಾಗಿ 12,500ಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದರೆ ಸಾವಿರಾರು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಸಣ್ಣ ಸಣ್ಣ ಉದ್ಯಮಗಳಿಗೆ ಇದು ವರದಾನವಾಗಲಿದ್ದು ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಅವರು ಹೇಳಿದರು.
ನಮ್ಮ ಸರ್ಕಾರದ ಉದ್ಯಮಸ್ನೇಹಿ ನೀತಿ, ವಿಶ್ವದರ್ಜೆಯ ಮೂಲ ಸೌಕರ್ಯ ನೀಡಿಕೆ ಪರಿಣಾಮ ದಕ್ಷಿಣ ಭಾರತದ ಕೈಗಾರಿಕಾ ಹಬ್ ಆಗಿ ಬೆಳಗಾವಿ ರೂಪುಗೊಳ್ಳುತ್ತಿದೆ. ಇದರಿಂದ ಇಲ್ಲಿನ ಆರ್ಥಿಕತೆ, ಉದ್ಯೋಗ, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ. ಇದರ ಸಂಪೂರ್ಣ ಲಾಭ ಉತ್ತರ ಕರ್ನಾಟಕದ ಭಾಗದ ಜನತೆಗೆ ಲಭಿಸಲಿದೆ ಎಂದು ಅವರು ತಿಳಿಸಿದರು.
ಬೆಳಗಾವಿಗೆ ಕೈಗಾರಿಕಾಭಿವೃದ್ಧಿಯ ಪರ್ವಕಾಲ
— M B Patil (@MBPatil) May 20, 2025
ಬೆಳಗಾವಿ ಕೈಗಾರಿಕಾಭಿವೃದ್ದಿಯ ಪರ್ವಕಾಲದಲ್ಲಿದೆ. ಇನ್ವೆಸ್ಟ್ ಕರ್ನಾಟಕದ ಫಲವಾಗಿ ಇತ್ತೀಚೆಗೆ ಬೆಳಗಾವಿ ಜಿಲ್ಲೆಯೊಂದಕ್ಕೆ ₹ 28,000 ಕೋಟಿಗೂ ಅಧಿಕ ಬಂಡವಾಳ ಹರಿದು ಬಂದಿದೆ. ರಕ್ಷಣೆ, ಕೃಷಿ, ಆಹಾರ ಸಂಸ್ಕರಣೆ, ಸುಸ್ಥಿರ ಇಂಧನ ಮುಂತಾದ ಕ್ಷೇತ್ರಗಳ ಲ್ಲಿ 10 ಕಂಪನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ.… pic.twitter.com/FeHYdQtq6Y
ರಾಜಧಾನಿ ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶ ನಡೆಸಲಾಗುತ್ತಿದೆ. ಅನೇಕ ವಿದೇಶಿ ಕಂಪನಿಗಳು, ಬಂಡವಾಳ ಹೂಡಿಕೆದಾರರು ಪಾಲ್ಗೊಂಡಿದ್ದರು. ಪ್ರಮುಖ 21 ಹೂಡಿಕೆಗಳು, ಒಪ್ಪಂದಗಳು ನಡೆದಿವೆ. ಈ ಪೈಕಿ ಒಂದೊಂದೆ ಕಂಪನಿಗಳು ಒಪ್ಪಂದಂತೆ ಹೂಡಿಕೆಗೆ ಆರಂಭಿಸಿದ್ದು, ಇದರಲ್ಲಿ ಬೆಳಗಾವಿ ಜಿಲ್ಲೆಗೆ ಹರಿದು ಬಂದು ಬಂಡವಾಳ ಹೂಡಿಕೆಯೂ ಒಂದಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications