ಟೋಯಿಂಗ್: ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 24.98 ಕೋಟಿ ರೂ. ವಸೂಲಿ!

ಬೆಂಗಳೂರು, ಮಾರ್ಚ್ 1: ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ ನಡೆದ ಖಾಸಗಿ ಮತ್ತು ಸರ್ಕಾರಿ ಟೋಯಿಂಗ್ ವ್ಯವಸ್ಥೆಯಿಂದ ಒಟ್ಟು 24,98,69,578 ರೂ. ವಸೂಲಾಗಿದೆ. ಈ ಪೈಕಿ ಸರ್ಕಾರಕ್ಕೆ 18,05,04,686 ರೂ. ಸಂದಾಯವಾಗಿದೆ. ಖಾಸಗಿ ಟೋಯಿಂಗ್ ಕಂಪನಿ ಮತ್ತು ವ್ಯಕ್ತಿಗಳಿಗೆ 6,93,64,892 ರೂ.ಗಳನ್ನು ಸಂದಾಯ ಮಾಡಿದೆ.

ಟೋಯಿಂಗ್ ವ್ಯವಸ್ಥೆ ಮೂಲಕ ವಸೂಲಾಗಿರುವ ಮೊತ್ತದ ಕುರಿತು ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ (41-221) ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 2022ರ ಜನವರಿ 17ರಂದು ಉತ್ತರಿಸಿದ್ದಾರೆ.

ರಾಜ್ಯದಲ್ಲಿ ಜಾರಿ ಇರುವ ಟೋಯಿಂಗ್ ವ್ಯವಸ್ಥೆ ಕುರಿತು ಟೋಯಿಂಗ್, ವಾಹನಗಳ ಕಾರ್ಯಾಚರಣೆ ವೇಳೆ ಅನುಸರಿಸಬೇಕಾದ ಗುಣಮಟ್ಟದ ನಿರ್ವಹಣಾ ವಿಧಾನಗಳ ಕುರಿತು ಪೊಲೀಸ್ ಇಲಾಖೆಯು ಹೊರಡಿಸಿದ್ದ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಟೋಯಿಂಗ್‌ನಿಂದ ವಸೂಲಾಗಿರುವ ಮೊತ್ತದ ಅಂಕಿ ಅಂಶಗಳು ಮುನ್ನೆಲೆಗೆ ಬಂದಿವೆ.

2021ರಲ್ಲಿ 8,69,60, 920 ರೂ. ವಸೂಲಿ

2021ರಲ್ಲಿ 8,69,60, 920 ರೂ. ವಸೂಲಿ

2019ರಲ್ಲಿ ವಸೂಲಾದ 10,21,93,301 ರೂ. ಪೈಕಿ ರಾಜ್ಯ ಸರ್ಕಾರಕ್ಕೆ 6,77,70,595 ರೂ. ಮತ್ತು ಖಾಸಗಿ ಟೋಯಿಂಗ್ ಕಂಪನಿ, ವ್ಯಕ್ತಿಗಳಿಗೆ 3,44,22,706 ರೂ. ಸಂದಾಯ ಮಾಡಲಾಗಿದೆ.

ಅದೇ ರೀತಿ 2020ರಲ್ಲಿ 5,56,51,250 ರೂ. ವಸೂಲಾಗಿರುವ ಪೈಕಿ 4,33,24,515 ರೂ.ಗಳನ್ನು ಸರ್ಕಾರಕ್ಕೆ, 123,26,635 ರೂ.ಗಳನ್ನು ಖಾಸಗಿ ವ್ಯಕ್ತಿ ಟೋಯಿಂಗ್ ಕಂಪನಿಗಳಿಗೆ ಸಂದಾಯ ಮಾಡಲಾಗಿದೆ. 2021ರಲ್ಲಿ 8,69,60, 920 ರೂ. ವಸೂಲಾಗಿರುವ ಪೈಕಿ ಸರ್ಕಾರಕ್ಕೆ 4,33,24,615 ರೂ. ಸರ್ಕಾರಕ್ಕೆ, 2,11,08,840 ರೂ.ಗಳನ್ನು ಖಾಸಗಿ ವ್ಯಕ್ತಿ ಕಂಪನಿಗೆ ನೀಡಲಾಗಿದೆ ಎಂಬ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

2022ರ ಜನವರಿ ಅಂತ್ಯಕ್ಕೆ 50,54,107 ರೂ. ವಸೂಲಾಗಿದ್ದು, ಈ ಪೈಕಿ 35,57,396 ರೂ. ಸರ್ಕಾರಕ್ಕೆ ಮತ್ತು15,06,711 ರೂ.ಗಳನ್ನು ಖಾಸಗಿ ಟೋಯಿಂಗ್ ಕಂಪನಿಗೆ ನೀಡಿರುವುದು ಉತ್ತರದಿಂದ ತಿಳಿದು ಬಂದಿದೆ.

 ಕಳೆದ ಮೂರು ವರ್ಷದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಟೋಯಿಂಗ್

ಕಳೆದ ಮೂರು ವರ್ಷದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಟೋಯಿಂಗ್

2019ರಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 7,43,45,750 ರೂ.ಗಳನ್ನು ಟೋಯಿಂಗ್ ವಾಹನದಿಂದ ವಸೂಲಾಗಿದ್ದು, ಈ ಪೈಕಿ 4,97,61,225 ರೂ.ಗಳನ್ನು ಸರ್ಕಾರಕ್ಕೆ ಜಮಾ ಮಾಡಿದ್ದರೆ, 2,45,84,525 ರೂ.ಗಳನ್ನು ಖಾಸಗಿ ಟೋಯಿಂಗ್ ಕಂಪನಿಗೆ ನೀಡಲಾಗಿದೆ.

ಇನ್ನು 2020ರಲ್ಲಿ 3,57,38,700 ರೂ. ವಸೂಲಾಗಿರುವ ಪೈಕಿ 2,83,54,350 ರೂ. ಸರ್ಕಾರಕ್ಕೆ, 73,84350 ರೂ. ಖಾಸಗಿ ಟೋಯಿಂಗ್ ಕಂಪನಿಗೆ ನೀಡಲಾಗಿದೆ. 2021ರಲ್ಲಿ 6,91,09,700 ರೂ. ವಸೂಲಾಗಿರುವ ಪೈಕಿ 5,27,69,600 ರೂ.ಗಳನ್ನು ಸರ್ಕಾರಕ್ಕೆ, 15340100 ರೂ.ಗಳನ್ನು ಖಾಸಗಿ ಕಂಪನಿಗೆ ಸಂದಾಯ ಮಾಡಲಾಗಿದೆ.

ಮೈಸೂರು ನಗರದಲ್ಲಿ 2019ರಲ್ಲಿ 6,43,200 ರೂ. ವಸೂಲಾಗಿರುವ ಪೈಕಿ 4,28,800 ರೂ. ಸರ್ಕಾರಕ್ಕೆ 2,14400 ರೂ. ಖಾಸಗಿ ಕಂಪನಿಗೆ ಸಂದಾಯ ಮಾಡಲಾಗಿದೆ. 2020, 2021 ಮತ್ತು 2022ರ ಜನವರಿ ಅಂತ್ಯಕ್ಕೆ ಮೈಸೂರು ನಗರದಲ್ಲಿ ಟೋಯಿಂಗ್ ವಾಹನದಿಂದ ವಸೂಲಾತಿ ಮಾಡಿದ ಮೊತ್ತವನ್ನು ಶೂನ್ಯವೆಂದು ತೋರಿಸಲಾಗಿದೆ.

ಹುಬ್ಬಳ್ಳಿ- ಧಾರವಾಡ ಟೋಯಿಂಗ್ ಸಂಗ್ರಹ

ಹುಬ್ಬಳ್ಳಿ- ಧಾರವಾಡ ಟೋಯಿಂಗ್ ಸಂಗ್ರಹ

ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡದಲ್ಲಿ 2019ರಲ್ಲಿ 1,08,13,950 ರೂ. ವಸೂಲಾಗಿರುವ ಪೈಕಿ ಸರ್ಕಾರಕ್ಕೆ, 63,03,625 ರೂ. ಖಾಸಗಿ ಕಂಪನಿಗೆ 45,10,325 ರೂ.ಗಳನ್ನು ಸಂದಾಯ ಮಾಡಲಾಗಿದೆ. 2020ರಲ್ಲಿ 68,90,700 ರೂ. ವಸೂಲಾಗಿದ್ದು ಈ ಪೈಕಿ 55,31,850 ರೂ. ಸರ್ಕಾರಕ್ಕೆ, 13,58,850 ರೂ. ಖಾಸಗಿ ಕಂಪನಿಗೆ ನೀಡಲಾಗಿದೆ.

2021ರಲ್ಲಿ 39,58,800 ರು. ವಸೂಲಾಗಿದ್ದರ ಪೈಕಿ 31,78,400 ರೂ. ಸರ್ಕಾರಕ್ಕೆ, ಖಾಸಗಿ ಕಂಪನಿಗೆ 7,80,400 ರೂ.ಗಳನ್ನು ನೀಡಲಾಗಿದೆ. 2022ರ ಜನವರಿ ಅಂತ್ಯದವರೆಗೆ ಶೂನ್ಯವೆಂದು ದಾಖಲಿಸಲಾಗಿದೆ.

 ಮಂಗಳೂರು- ಬೆಳಗಾವಿ ನಗರದಲ್ಲಿ ಟೋಯಿಂಗ್

ಮಂಗಳೂರು- ಬೆಳಗಾವಿ ನಗರದಲ್ಲಿ ಟೋಯಿಂಗ್

ಮಂಗಳೂರು ನಗರದಲ್ಲಿ 2019ರಲ್ಲಿ 1,01,91,150ರು. ವಸೂಲಾಗಿರುವ ಪೈಕಿ 73,07,225 ರು. ಸರ್ಕಾರಕ್ಕೆ 28,83,925 ರು.ಗಳನ್ನು ಖಾಸಗಿ ಕಂಪೆನಿಗೆ ನೀಡಲಾಗಿದೆ. 2020ರಲ್ಲಿ 74,20,150 ರು. ವಸೂಲಾಗಿದ್ದರ ಪೈಕಿ 58,81,075 ರೂ.ಗಳನ್ನು ಸರ್ಕಾರಕ್ಕೆ 15,39, 075 ರೂ.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. 2021ರಲ್ಲಿ 47,71,500 ರೂ.ಗಳನ್ನು ವಸೂಲು ಮಾಡಿದ್ದು ಈ ಪೈಕಿ 37,77,250 ರೂ.ಗಳು ಸರ್ಕಾರಕ್ಕೆ ಮತ್ತು 9,94,250 ರೂ. ಖಾಸಗಿ ಕಂಪನಿಗೆ ನೀಡಲಾಗಿದೆ. 2022ರ ಜನವರಿ ಅಂತ್ಯದವರೆಗೆ ಶೂನ್ಯವೆಂದು ಹೇಳಲಾಗಿದೆ.

ಬೆಳಗಾವಿ ನಗರದಲ್ಲಿ 2019ರಲ್ಲಿ 34,47,050 ರೂ. ವಸೂಲಾಗಿದ್ದರೆ ಪೈಕಿ 1757,020 ರೂ.ಗಳು ಸರ್ಕಾರಕ್ಕೆ, 16,95,030 ರೂ.ಗಳನ್ನು ಖಾಸಗಿ ಕಂಪನಿಗೆ ಸಂದಾಯ ಮಾಡಲಾಗಿದೆ. 2020ರಲ್ಲಿ 41,55,900 ರೂ. ವಸೂಲಾಗಿದ್ದರ ಪೈಕಿ 2,11,540 ರೂ. ಸರ್ಕಾರಕ್ಕೆ, 2044,360 ರೂ.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ.

2021ರಲ್ಲಿ 50,90,850 ರೂ.ಗಳನ್ನು ವಸೂಲು ಮಾಡಿದ್ದು, ಈ ಪೈಕಿ 25,84,830 ರೂ.ಗಳನ್ನು ಸರ್ಕಾರಕ್ಕೆ, 25,06,020 ರೂ.ಗಳನ್ನು ಖಾಸಗಿಕಂಪನಿಗೆ ನೀಡಲಾಗಿದೆ. 2022ರ ಜನವರಿ ಅಂತ್ಯಕ್ಕೆ 6,41,000 ರೂ. ಪೈಕಿ 3,25,440 ರೂ. ಸರ್ಕಾರಕ್ಕೆ, 315,560 ರೂ. ಖಾಸಗಿ ಕಂಪನಿಗೆ ನೀಡಲಾಗಿದೆ.

 ತುಮಕೂರು ಮತ್ತು ದಾವಣಗೆರೆ ಟೋಯಿಂಗ್ ಸಂಗ್ರಹ

ತುಮಕೂರು ಮತ್ತು ದಾವಣಗೆರೆ ಟೋಯಿಂಗ್ ಸಂಗ್ರಹ

ತುಮಕೂರು ಜಿಲ್ಲೆಯಲ್ಲಿ 2019ರಲ್ಲಿ 10,74,401 ರೂ. ವಸೂಲಾಗಿದ್ದರ ಪೈಕಿ 5,39,900 ರೂ. ಸರ್ಕಾರಕ್ಕೆ, 5,34,501 ರೂ. ಖಾಸಗಿ ಕಂಪನಿಗೆ ನೀಡಲಾಗಿದೆ. 2020ರಲ್ಲಿ ಈ ಜಿಲ್ಲೆಯಲ್ಲಿ ಟೋಯಿಂಗ್ ವಸೂಲಾತಿ ಶೂನ್ಯವೆಂದು ಹೇಳಲಾಗಿದೆ.

2021ರಲ್ಲಿ 205300 ರೂ. ವಸೂಲಾಗಿರುವ ಪೈಕಿ 2455,000 ರೂ. ಸರ್ಕಾರಕ್ಕೆ ನೀಡಿದ್ದರೆ, 4,88,070 ರೂ.ಗಳನ್ನು ಖಾಸಗಿ ಕಂಪನಿಗೆ ನೀಡಲಾಗಿದೆ. 2022ರ ಜನವರಿ ಅಂತ್ಯಕ್ಕೆ 355,207 ರೂ. ವಸೂಲಾಗಿದ್ದು, ಈ ಪೈಕಿ 295,906 ರೂ.ಗಳನ್ನು ಸರ್ಕಾರಕ್ಕೆ 59,301 ರೂ. ಖಾಸಗಿ ಕಂಪನಿಗೆ ನೀಡಲಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ 2019ರಲ್ಲಿ 2,60,700 ರೂ. ವಸೂಲಾಗಿದ್ದರ ಪೈಕಿ 2,60,700 ರೂ.ಗಳನ್ನು ಸರ್ಕಾರಕ್ಕೆ ಸಂದಾಯ ಮಾಡಿದ್ದರೆ, ಖಾಸಗಿ ಕಂಪನಿಗೆ ಶೂನ್ಯವೆಂದು ತೋರಿಸಲಾಗಿದೆ. 2020ರಲ್ಲಿ 3,69,100 ರೂ. ವಸೂಲಾಗಿದ್ದರೆ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗಿದೆ. ಖಾಸಗಿ ಕಂಪನಿಗೆ ಶೂನ್ಯ ಪಾವತಿಯಾಗಿದೆ.

2021ರಲ್ಲಿ 6,17,700 ರೂ. ವಸೂಲಾಗಿದ್ದರ ಪೈಕಿ ಎಲ್ಲ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗಿದೆಯಲ್ಲದೆ, ಖಾಸಗಿ ಕಂಪನಿಗೆ ಶೂನ್ಯ ಪಾವತಿಯಾಗಿದೆ. 2022ರ ಜನವರಿ ಅಂತ್ಯದವರೆಗೆ 25,200 ರೂ. ವಸೂಲಾಗಿದೆ. ಸರ್ಕಾರಕ್ಕೆ ಎಲ್ಲ ಮೊತ್ತ ಸಂದಾಯವಾಗಿದೆಯಲ್ಲದೆ ಖಾಸಗಿ ಕಂಪನಿಗೆ ಶೂನ್ಯ ಪಾವತಿಯಾಗಿದೆ.

 ಚಿತ್ರದುರ್ಗ- ರಾಯಚೂರು ಟೋಯಿಂಗ್ ಸಂಗ್ರಹ

ಚಿತ್ರದುರ್ಗ- ರಾಯಚೂರು ಟೋಯಿಂಗ್ ಸಂಗ್ರಹ

ಚಿತ್ರದುರ್ಗ ಜಿಲ್ಲೆಯಲ್ಲಿ 2019ರಲ್ಲಿ 18,000 ರೂ. ವಸೂಲಾಗಿದ್ದು, ಈ ಮೊತ್ತವನ್ನೂ ಸರ್ಕಾರಕ್ಕೆ ಪಾವತಿಸಲಾಗಿದೆ. ಖಾಸಗಿಗೆ ಶೂನ್ಯ ಪಾವತಿ ಎಂದು ತೋರಿಸಲಾಗಿದೆ. 2020, 2021, 2022ರ ಜನವರಿ ಅಂತ್ಯದವರೆಗೆ ಟೋಯಿಂಗ್‌ನಿಂದ ಯಾವುದೇ ವಸೂಲು ಮಾಡಿಲ್ಲ.

ರಾಯಚೂರು ಜಿಲ್ಲೆಯಲ್ಲಿಯೂ 2019ರಲ್ಲಿ 19,100 ರೂ. ವಸೂಲು ಮಾಡಲಾಗಿದೆ. ಇದೂ ಸೇರಿದಂತೆ 2020, 2021, 2022ರ ಜನವರಿ ಅಂತ್ಯದವರೆಗೆ ಟೋಯಿಂಗ್‌ನಿಂದ ವಸೂಲು ಮಾಡಿಲ್ಲ.

ಬಳ್ಳಾರಿ ಜಿಲ್ಲೆಯಲ್ಲಿ 2019ರಲ್ಲಿ 13,80,000 ರೂ. ವಸೂಲಿ ಮಾಡಲಾಗಿದ್ದರೆ, ಈ ಪೈಕಿ ಸರ್ಕಾರಕ್ಕೆ 13,80,000 ರೂ.ಗಳನ್ನು ಸಂದಾಯ ಮಾಡಲಾಗಿದೆ. 2020ರಲ್ಲಿ 10,76,700, 2021ರಲ್ಲಿ 4,59,300 ರೂ. 2022ರ ಜನವರಿ ಅಂತ್ಯದವರೆಗೆ 1,12,000 ರೂ.ಗಳನ್ನು ವಸೂಲು ಮಾಡಲಾಗಿದೆ. ಈ ಮೂರೂ ವರ್ಷಗಳಲ್ಲಿ ಖಾಸಗಿ ಕಂಪನಿಗೆ ಶೂನ್ಯ ಪಾವತಿ ಎಂದು ತೋರಿಸಲಾಗಿದೆ.

 ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೂ ಬಾಡಿವೋನ್ ಕ್ಯಾಮೆರಾ

ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೂ ಬಾಡಿವೋನ್ ಕ್ಯಾಮೆರಾ

ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೂ ಬಾಡಿವೋನ್ ಕ್ಯಾಮೆರಾಗಳನ್ನು ನೀಡಲು ಉದ್ದೇಶಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಲ್ಲಿ 1,097 ಸಂಖ್ಯೆ ಬಾಡಿವೋರ್ನ್ ಕ್ಯಾಮೆರಾಗಳನ್ನು ಖರೀದಿಸಿ ಬೆಂಗಳೂರು ನಗರ ಸಂಚಾರ ವಿಭಾಗದ ವ್ಯಾಪ್ತಿಯ ಅಧಿಕಾರಿ ಸಿಬ್ಬಂದಿಗೆ ವಿತರಿಸಲಾಗುತ್ತಿದೆ. 1028 ಬಾಡಿವೋರ್ನ್ ಕ್ಯಾಮೆರಾಗಳನ್ನು ಖರೀದಿಸಲು ಕಾರ್ಯಾದೇಶ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಟೋಯಿಂಗ್ ಮಾಡುವ ಕಾರ್ಯಾಚರಣೆ ಕುರಿತು ಗೊಂದಲ ಏರ್ಪಟಿತ್ತು. ಈ ಸಂಬಂಧ ಸಂಚಾರಿ ಜಂಟಿ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಸ್ವಪ್ಪನೆ ನೀಡಿದ್ದರು. ಆದರೂ ಈ ವಿಚಾರದಲ್ಲಿ ಗೊಂದಲ ಮುಂದುವರೆದಿತ್ತು. ಸಿಬ್ಬಂದಿ ಜವಾಬ್ದಾರಿ, ಮಾರ್ಗಸೂಚಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಂದೇ ಏಜೆನ್ಸಿಗೆ ಟೋಯಿಂಗ್‌ನ್ನು ನೀಡಿಲ್ಲ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಸಭೆ ಬಳಿಕ ರವಿಕಾಂತೇಗೌಡ ಮಾಹಿತಿ ನೀಡಿದ್ದರು.

ಮಾಹಿತಿ ಕೃಪೆ: ದಿ ಫೈಲ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+