ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಕೊಂದಿದ್ದು ಮುನ್ನಾ'

|
Google Oneindia Kannada News

ಬೆಂಗಳೂರು, ಫೆ.6 : ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರನ್ನು ಕೊಂದಿದ್ದು ಭೂಗತ ಪಾತಕಿ ಮುನ್ನಾ ಎಂಬುದು ಸಿಐಡಿ ವರದಿಯಿಂದ ದೃಢಪಟ್ಟಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಪೊಲೀಸರ ಗನ್ ಕಸಿದುಕೊಂಡು ಮುನ್ನಾ ಗುಂಡು ಹಾರಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಗುರುವಾರದ ವಿಧಾನ ಪರಿಷತ್ ಕಲಾಪದಲ್ಲಿ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರ ನೀಡಿದ ಗೃಹ ಸಚಿವರು, ಪೊಲೀಸರು ಮುನ್ನಾನನ್ನು ಹಿಡಿಯಲು ಮುಂದಾದಾಗ ಈ ಘಟನೆ ನಡೆದಿದೆ. ಪಿಎಸ್‌ಐ ಮುರಳಿ ಅವರಿಂದ ಗನ್ ಕಿತ್ತುಕೊಂಡ ಮುನ್ನಾ, ಬಂಡೆ ಅವರತ್ತ ಗುಂಡು ಹಾರಿಸಿದ್ದಾನೆ ಎಂದು ಹೇಳಿದರು. [ಮಲ್ಲಿಕಾರ್ಜುನ ಬಂಡೆ ಪ್ರಕರಣದ ಹಿನ್ನೋಟ]

Mallikarjun Bande

ಕಲಬುರಗಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರನ್ನು ಕೊಂದಿದ್ದು ಭೂಗತ ಪಾತಕಿ ಮುನ್ನಾ ಎಂಬುದು ಸಿಐಡಿ ವರದಿಯಿಂದ ದೃಢಪಟ್ಟಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ತನಿಖೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಜಾರ್ಜ್ ತಿಳಿಸಿದರು. [ಬಂಡೆಯನ್ನು ಸಾಯಿಸಿದ್ದು ಪೊಲೀಸ್ ಗುಂಡು]

ಪ್ರಕರಣಕ್ಕೆ ಸಂಬಂಧಿಸಿದ ಸಿಐಡಿ ವರದಿಯನ್ನು ಕಲಬುರಗಿಯ ಪ್ರಧಾನ ಸಿವಿಲ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿ, ಸ್ವೀಕೃತಿ ಪಡೆದು ತನಿಖೆ ಮುಕ್ತಾಯಗೊಳಿಸಲಾಗಿದೆ ಎಂದು ಗೃಹ ಸಚಿವರು ಸದನಕ್ಕೆ ಮಾಹಿತಿ ನೀಡಿದರು. ಬಂಡೆ ಅವರ ಕುಟುಂಬಕ್ಕೆ 55 ಲಕ್ಷ ಪರಿಹಾರ ಹಾಗೂ ನಿವೇಶನ ನೀಡಿದ್ದೇವೆ. ಬಂಡೆ ಅವರ ನಿವೃತ್ತಿ­ವರೆಗಿನ ವೇತನ ನೀಡಲಾಗುವುದು ಎಂದು ಹೇಳಿದರು. [ಬಂಡೆ ತಲೆಗೆ ಬಿದ್ದ ಬುಲೆಟ್ ಪೊಲೀಸರಿಗೆ ಸಿಕ್ಕಿಲ್ಲ]

ಈ ಶೂಟೌಟ್ ಪ್ರಕರಣದಲ್ಲಿ ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯ ತೋರಿರುವುದು ಸಿಐಡಿ ವರದಿಯಿಂದ ತಿಳಿದುಬಂದಿದೆ. ಕಲಬುರಗಿ ವಿಭಾಗದ ಡಿವೈಎಸ್‌ಪಿ ಉದಯಕುಮಾರ್‌ ಬೇವಿನಗಿಡದ್‌, ರೋಜಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ನಾರಾಯಣಪ್ಪ, ಹೆಡ್‌ ಕಾನ್‌ಸ್ಟೆಬಲ್‌ ಸಂಗಮನಾಥ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದರು.

2014ರ ಜನವರಿ 8ರಂದು ಕಲಬುರಗಿಯಲ್ಲಿ ಮುನ್ನಾ ಜೊತೆಗಿನ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಪಿಎಸ್‌ಐ ಮಲ್ಲಿಕಾರ್ಜನ ಬಂಡೆ ಅವರು ಜ.15ರಂದು ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಜ.16ರಂದು ಆಳಂದ ತಾಲೂಕಿನ ಖಜೂರಿಯಲ್ಲಿ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಅಂತ್ಯ ಸಂಸ್ಕಾರ ನಡೆದಿತ್ತು.

English summary
In legislative council Karnataka Home minister K.J.George said, Rowdy Munna killed PSI Mallikarjun Bande in shootout at Kalaburagi district on January 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X