Get Updates
Get notified of breaking news, exclusive insights, and must-see stories!

ಪಠ್ಯಪುಸ್ತಕದಲ್ಲಿ ಆದಿಗುರು ಶಂಕರಾಚಾರ್ಯರಿಗೆ ಅವಮಾನ- ಸತ್ಯಾಂಶವೇನು..?

ಬೆಂಗಳೂರು, ಜೂನ್ 09: ಪ್ರಾಣಿಗಳಲ್ಲೇ ಅತಿ ವಿಷಯುಕ್ತ ಪ್ರಾಣಿ ಎಂದರೆ ಮನುಷ್ಯನಂತೆ.. ಪ್ರಾಣಿಗಳಿಗೆ ಹಲ್ಲಿನಲ್ಲೋ ಬಾಲದಲ್ಲೋ ದೇಹದ ಕೆಲವು ಭಾಗದಲ್ಲಿ ಮಾತ್ರ ವಿಷವಿದ್ದರೇ ಮನುಷ್ಯನಿಗೆ ಮೈತುಂಬ ವಿಷ ಅನ್ನೋ ಮಾತು ಚಾಲ್ತಿಯಲ್ಲಿದೆ. ಈ ಮನುಷ್ಯ ಪ್ರಾಣಿಗೆ ಧರ್ಮದ ಅಫೀಮು, ಜಾತಿಯ ವಿಷ ತಲೆಯನ್ನು ಹೊಕ್ಕರೆ ಕಾಮಾಲೆ ಕಣ್ಣಿನಂತೆ ಎಲ್ಲವೂ ಹಳದಿಯಾಗಿ ವ್ಯತಿರಿಕ್ತ ವಿಚಾರಧಾರೆ ಹೊರಬರುತ್ತೆ.

ಇಷ್ಟೋದು ಪೀಠಿಕೆ ಹಾಕಲು ಕಾರಣವಾಗಿರುವುದೆಕೆಂದರೆ ರೋಹಿತ್ ಚಕ್ರತೀರ್ಥ ಪಠ್ಯ ಪುಸ್ತಕ ಸಮಿತಿಯ ಯಡವಟ್ಟುಗಳು. ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಕಾರಣರಾಗಿದ್ದ ಶಂಕರಚಾರ್ಯರಿಗೂ ಪಠ್ಯಪುಸ್ತಕದಲ್ಲಿ ಅವಮಾನ ಮಾಡಲಾಗಿದೆ.

ರೋಹಿತ್ ಚರ್ಕತೀರ್ಥ ಮರು ಪರಿಷ್ಕರಣೆ ಮಾಡಿರುವ ಒಂಭತ್ತನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದ ಪದ್ಯ ಭಾಗದಲ್ಲಿ ""ಶಂಕರ ಎಂದರೆ ಮಂಗಳ ಉಂಟು ಮಾಡುವವನು ಶಿವ ಎಂದು ಅರ್ಥ. ಮೂವರು ಪ್ರಮುಖ ಮತಾಚಾರ್ಯರಲ್ಲಿ ಮೊದಲನೆಯವರ ಹೆಸರು ಶಂಕರ. ಆದರೆ ಸಂಕರ ಎಂದರೆ ಬೆರಕೆ, ಕಲಬೆರಕೆ, ಒಪ್ಪತ್ತಕ್ಕದ್ದಲ್ಲದ ಮಿಶ್ರಣ ಎಂಬ ಅರ್ಥವೂ ಹೊಮ್ಮುತ್ತದೆ'' ಎಂದು ಭಾಷಾ ಸೊಬಗು ಭಾಗದಲ್ಲಿ ಸೇರಿಸಲಾಗಿದೆ. ಇದೇ ವಿಚಾರ ವಿವಾದದ ಕಿಡಿ ಹೊತ್ತಲು ಕಾರಣವಾಗಿರುವುದು.

9ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದ ಪದ್ಯ

9ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದ ಪದ್ಯ

ಒಂಭತ್ತನೇ ತರಗತಿಯ ಪದ್ಯಭಾಗದಲ್ಲಿ ರಾಘವಾಂಕ ವಿರಚಿತ ಹರಿಶ್ಚಂದ್ರ ಕಾವ್ಯ ಭಾಗದ ನಿನ್ನ ಮುತ್ತಿನ ಸತ್ತಿಗೆಯನಿತ್ತು ಸಲಹುವನ್ನು ಆಯ್ದುಕೊಳ್ಳಲಾಗಿದೆ. ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯಹರಿಶ್ಚಂದ್ರ ಕುರಿತಾದ ಮನಮೋಹಕ ಸುಂದರ ಕಾವ್ಯ. ದೇವಲೋಕದಲ್ಲಿ ಇಂದ್ರ ಭಾಲೋಕದಲ್ಲಿ ಸತ್ಯವಂತ ರಜ ಯಾರು ಎಂದಾಗ ವಸಿಷ್ಟ ಮಹರ್ಷಿಗಳು ಹರಿಶ್ಚಂದ್ರ ಎಂದು ಉತ್ತರಿಸುತ್ತಾರೆ. ಇದಕ್ಕೆ ವಿಶ್ವಾಮಿತ್ರ ಆಕ್ಷೇಪಿಸಿ ಹರಿಶ್ಚಂದ್ರನ ಬಳಿಯಲ್ಲಿ ಸುಳ್ಳು ಹೇಳಿಸಿಯೇ ಸಿದ್ದಿ ಎಂದು ಪಂಥಾಹ್ವಾನವನ್ನು ನೀಡುತ್ತಾರೆ. ವಿಶ್ವಾಮಿತ್ರ ಹರಿಶ್ಚಂದ್ರನ ಆಸ್ಥಾನಕ್ಕೆ ತೆರಳಿ ಕೊಡಲು ಅಸಾಧ್ಯ ಎನ್ನುವವುದನ್ನು ಕೇಳುತ್ತಾನೆ. ಹರಿಶ್ಚಂದ್ರ ಬಹಳ ಭಯ ಭಕ್ತಿಯಿಂದ ಹರಿಶ್ಚಂದ್ರ ಕೇಳಿದ್ದನ್ನೆಲ್ಲಾ ದಾನವಾಗಿ ಕೊಡುತ್ತಾನೆ. ಇದರಿಂದ ವಿಶ್ವಾಮಿತ್ರರಿಗೆ ಮೊದಲ ಯತ್ನದಲ್ಲೇ ಸೋಲು ಉಂಟಾಗುತ್ತದೆ. ಆ ಬಳಕ ತನ್ನ ಮಂತ್ರ ಶಕ್ತಿಯಿಂದ ಮೃಗ ಪಕ್ಷಿಗಳನ್ನು ಸೃಷ್ಟಿಸುತ್ತಾನೆ. ಈ ವೇಳೆ ಹರಿಶ್ಚಂದ್ರ ತನ್ನ ಪತ್ನಿ ಪರಿವಾರದೊಂದಿದೆ ವಸಿಷ್ಟರ ಆಶ್ರಮಕ್ಕೆ ಭೇಟಿಕೊಟ್ಟು ಆಶೀರ್ವಾದವನ್ನು ಪಡೆಯುತ್ತಾನೆ. ಈ ಸಮಯದಲ್ಲಿ ಸತ್ಯವಂತನಾಗಿ ಬದುದು ಎನ್ನುವ ವಸಿಷ್ಟರು ತಪೋವನದಲ್ಲಿ ವಿಶ್ವಾವಿತ್ರನ ಆಶ್ರಮಕ್ಕೆ ಹೋಗಬೇಡ ಎಂದು ಎಚ್ಚರಿಕೆ ನೀಡುತ್ತಾರೆ. ಹರಿಶ್ಚಂದ್ರ ಭೇಟೆಯನ್ನಾಡುತ್ತ ವಿಶ್ವಾಮಿತ್ರರ ತಪೋವನಕ್ಕೆ ತೆರಳುತ್ತಾನೆ. ಅಲ್ಲಿ ಗಾನರಾಣಿಯರು ಇರುತ್ತಾರೆ. ಗಾನರಾಣಿಯರ ವೈಯ್ಯಾರ , ಸೌಂದರ್ಯ, ಅವರಾಡುವ ಮಾತು. ತಮ್ಮನ್ನು ಮದುವೆಯಾಗು ಎಂದು ಹರಿಶ್ಚಂದ್ರನ್ನು ಪೀಡಿಸುತ್ತಾರೆ. ಹರಿಶ್ಚಂದ್ರ ಸತ್ಯ ಧರ್ಮಕ್ಕೆ ವಿರುದ್ಧವಾಗಿ ಪತ್ನಿಗೆ ಮೋಸ ಮಾಡಲ್ಲ ಮದುವೆಯಾಗುವುದಿಲ್ಲ ಎಂದು ತಿರಸ್ಕರಿಸುವವುದೇ ಪದ್ಯ ಭಾಗದ ಸಾರಂಶ.

ಆದರೆ ಈ ಪದ್ಯಕ್ಕೂ ಶಂಕರಾಚಾರ್ಯರಿಗೂ ಅದ್ಯಾವುಗೇ ಸಂಬಂಧವಿಲ್ಲ ಆದರೂ ಭಾಷ ಸೊಬಗನ್ನು ಹೇಳಲು ಹೋಗಿ ಶಂಕರಾಚಾರ್ಯರ ಹೆಸರನ್ನು ಎಳೆದು ತರಲಾಗಿದೆ. ಕೇವಲ ಶಂಕರ ಎಂದು ಬಳಸಿದ್ದರೇ ಅದು ಶಂಕರಾಚಾರ್ಯರಿಗೆ ಅನ್ವಯಿಸುತ್ತಿರಲಿಲ್ಲ. ಮೂವರು ಪ್ರಮುಖ ಮತಾಚಾರ್ಯರಲ್ಲಿ ಮೊದಲನೆಯವರು ಶಂಕರ, ಸಂಕರ ಎಂದರೆ ಕಲಬೆರಕೆ, ಬೆರಕೆ ಎಂದಲ್ಲ ಬಳಸಿರೋದು ಅಸಂಬದ್ದವಾಗಿದೆ.

ಶಂಕರ ಮತ್ತು ಸಂಕರ ಪದಗಳ ಅರ್ಥವೇು..?

ಶಂಕರ ಮತ್ತು ಸಂಕರ ಪದಗಳ ಅರ್ಥವೇು..?

ಶಂಕರ : ಮಂಗಳವನ್ನುಂಟುಮಾಡವವನು, ಶಿವ, ಅದ್ವೈತ ಪ್ರತಿಪಾದಕರಾದ ಆದಿ ಶಂಕರಾಚಾರ್ಯ, ಸಂತೋಶವನ್ನುಂಟು ಮಾಡುವವ ಎಂದಿದೆ.

ಸಂಕರ ಎಂದರೆ: ಶಿವ , ಈಶ್ವರ, ಕಲಬೆರಕೆ, ಮಿಶ್ರಣ, ಅಂತರ್ಜಾತಿ ವಿವಾಹಗಳಿಂದಾಗುವ ಮಿಶ್ರತಳಿ, ಸಂಕೀರ್ಣವರ್ಣ, ಅಡ್ಡತಳಿ, ಮಿಶ್ರತಳಿ, ಗುಡಿಸಿಹಾಕುವಂಥದ್ದದ್ದು(ಕಸ), ಹೊಲಸಾದುದ್ದು(ತಿಪ್ಪೆ), ಕಾವ್ಯಮಿಮಾಂಸೆಯ ಮಿಶ್ರಾಲಂಕಾರಗಳಲ್ಲಿ ಒಂದು, ಎಂದಿದೆ.

ಭಾಷಾ ಸೊಬಗನ್ನು ಹೇಳುವಾಗ ಶಂಕರ ಬಳಸುವ ಕಡೆ ಮತ್ತು ಸಂಕರ ಎದು ಹಳಸಿದರೆ ಉಂಟಾಗುವ ಅರ್ಥವ್ಯತಾಸವನ್ನು ಮಾತ್ರ ತಿಳಿಸಬಹುದಿತ್ತು. ಆದರೆ ಶಂಕರಾಚಾರ್ಯರ ಹೆಸರನ್ನು ತಂದು ವಿವಾದವ್ನು ರೋಹಿತ್ ಚಕ್ರತೀರ್ಥ ಎಳೆದುಕೊಂಡಿದ್ದಾರೆ.

ಪದ್ಯದಲ್ಲಿ ಭಾಷ ಸೋಬಗು ಅನ್ನೋ ಹೊಸ ವಿಚಾರ..

ಪದ್ಯದಲ್ಲಿ ಭಾಷ ಸೋಬಗು ಅನ್ನೋ ಹೊಸ ವಿಚಾರ..

""ಶಂಕರಾಚಾರ್ಯರ ವಿವಾದಕ್ಕೆ ಕಾರಣವಾಗಿರುವುದು ವಿಷಾದನೀಯ ಶಂಕರ ಪದವನ್ನು ತಪ್ಪಾಗಿ ಸಂಕರ ಎಂದು ಉಚ್ಛರಿಸಿದರೆ ಉಂಟಾಗುವ ಅರ್ಥ ವ್ಯತ್ಯಾಸವನ್ನು ಹೇಳಿದ್ದರೇ ಸಾಕಿತ್ತು. ಅಲ್ಲಿ ಅನಾವಶ್ಯಕವಾಗಿ ಮೂವರು ಮತಾಚಾರ್ಯರಲ್ಲಿ ಮೊದಲಿಗರು ಶಂಕರ ಎಂದು ಎಳೆದು ತರಲಾಗಿದೆ. ಈ ಹಿಂದಿನ ಪಠ್ಯಪುಸ್ತಕದಲ್ಲಿ ಭಾಷಾ ಸೊಬಗು ಅನ್ನೋ ವಿಚಾರ ಇರಲಿಲ್ಲ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಈ ಭಾಗವನ್ನು ಸೇರಿಸಲಾಗಿದೆ'' ಎಂದು ಸರ್ಕಾರಿ ಪ್ರೌಢಶಾಲಾ ಶಿಕ್ಷಕ ರವಿಚಂದ್ರ ತಿಳಿಸಿದ್ದಾರೆ.

ಕೆಲ ಬ್ರಾಹ್ಮಣ ಸಮುದಾಯ ಶಂಕರರನ್ನು ಒಪ್ಪುವುದಿಲ್ಲ

ಕೆಲ ಬ್ರಾಹ್ಮಣ ಸಮುದಾಯ ಶಂಕರರನ್ನು ಒಪ್ಪುವುದಿಲ್ಲ

ಶಂಕರಾಚಾರ್ಯರು ಹಿಂದೂ ಧರ್ಮದಲ್ಲಿನ ಪುನರುಜ್ಜೀವನಕ್ಕೆ ನಾಂದಿಯನ್ನು ಹಾಡಿದವರು. ಬ್ರಾಹ್ಮಣರು ನಂಬಿಬಂದಿದ್ದ ಕೆಲವೊಂದು ಆಚಾರ ವಿಚಾರಗಳಿಗೆ ವಿರೋಧಿಯಾಗಿದ್ದವರು. ಸನ್ಯಾಸಿಯಾಗಿದ್ದು ಕೊಂಡು ಸರ್ವಸಂಗಪರಿತ್ಯಾಗಿಯಂತಿರದೇ ತನ್ನ ತಾಯಿ ಅಂತ್ಯ ಸಂಸ್ಕಾರವನ್ನು ತಾವೇ ನೆರವೇರಿಸಿದ್ದರು. ಈ ವಿಚಾರವೂ ಸೇರಿದಂತೆ ಹಲವಾರು ವಿಚಾರದಲ್ಲಿ ಶಂಕರಾಚಾರ್ಯರನ್ನು ಬ್ರಾಹ್ಮಣ ಸಮುದಾಯದ ಕೆಲ ಒಳಪಂಗಡಗಳು ಒಪ್ಪುವುದಿಲ್ಲ. ಇದಕ್ಕಾಗಿಯೇ ಶಂಕರಾಚಾರ್ಯರಿಗೆ ಅಪಮಾನ ಎಸಗಿರುವ ಸಾಧ್ಯತೆಯಿದೆ.

ಇನ್ನು ಈಗಾಗಲೇ ಪಠ್ಯಪುಸ್ತಕದ ಕೆಲವು ಲೋಪದೋಷಗಳಾಗಿರುವುದನ್ನು ಶಿಕ್ಷಣ ಸಚಿವ ಬಿಸಿ ನಾಗೇಶ್ ಒಪ್ಪಿಕೊಂಡಿದ್ದು. ಮರುಪರಿಷ್ಕರಣೆಯಲ್ಲಿನ ಲೋಪವನ್ನು ಸರಿ ಪಡಿಸುವುದಾಗಿ ತಿಳಿಸಿದ್ದಾರೆ. ಆದರೆ ಶಂಕರಾಚಾರ್ಯರಂತಹ ಮೇರು ವ್ಯಕ್ತಿತ್ವಕ್ಕೆ ರೋಹಿತ್ ಚಕ್ರತೀರ್ಥ ಅಪಮಾನಿಸಿದ್ದು ಸರಿಯಲ್ಲ.

Recommended Video

      300 ಅಡಿ ಆಳದ ಬೋರ್ವೆಲ್ ಗೆ ಬಿದ್ದಿದ್ದ 18 ತಿಂಗಳ ಮಗುವಿನ ರಕ್ಷಿಸಿದ ಭಾರತೀಯ ಸೇನೆ | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+