Road Accident: ಆಕ್ಸಿಡೆಂಟ್ ಆದವರ ಚಿಕಿತ್ಸೆಗೆ ಸಿಗಲಿದೆ ₹2.5 ಲಕ್ಷ ನೆರವು, ಪಡೆಯುವುದು ಹೇಗೆ?
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಹಣಕಾಸಿನ ಸಮಸ್ಯೆಯಿಂದಾಗಿ ಚಿಕಿತ್ಸೆ ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೋಟಾರು ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಗೆ ವಿಶೇಷ ಸೌಲಭ್ಯ ಕಲ್ಪಿಸಿದೆ. ಈ ವಿಶೇಷ ಯೋಜನೆಯಡಿ ₹1.5 ಲಕ್ಷ ಆರ್ಥಿಕ ನೆರವು ಅಪಘಾತ ಸಂತ್ರಸ್ತರಿಗೆ ಸಿಗಲಿದೆ. ಇದರೊಂದಿಗೆ ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ ₹1 ಲಕ್ಷ ನೆರವು ಒದಗಿಸುವ ಆದೇಶ ಹೊರಡಿಸಿದೆ.
ಮೋಟಾರು ವಾಹನಗಳಿಂದ ಉಂಟಾಗುವ ರಸ್ತೆ ಅಪಘಾತ ಸಂತ್ರಸ್ತರ ನಗದು ರಹಿತ ಚಿಕಿತ್ಸೆಗೆ ಭಾರತ ಸರ್ಕಾರದ ಯೋಜನೆ ಸಿಟಿಆರ್‌ಎವಿ-2025ರ ಅಡಿಯಲ್ಲಿ ನೀಡುವ 1.5 ಲಕ್ಷ ರೂಪಾಯಿ ನೆರವಿನ ಜೊತೆಗೆ ರಾಜ್ಯದಿಂದ ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ನೆರವು ಒದಗಿಸುವುದಾಗಿ ಆದೇಶದಲ್ಲಿ ತಿಳಿಸಿದೆ. ಈ ಸೌಲಭ್ಯ ಯಾರಿಗೆಲ್ಲ ಸಿಗಲಿದೆ? ಪಡೆಯುವುದು ಹೇಗೆ? ಎಂಬ ವಿವರ ಇಲ್ಲಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಪಘಾತ ಸಂತ್ರಸ್ತರ ಯೋಜನೆಯನ್ನು ಮಾರ್ಪಡಿಸಿ, ಪ್ರತಿ ಅಪಘಾತ ಸಂತ್ರಸ್ತರಿಗೆ ರೂ. 1.5 ಲಕ್ಷಗಳವರೆಗಿನ ಚಿಕಿತ್ಸೆ ಒದಗಿಸುವ ಕೇಂದ್ರ ಸರ್ಕಾರದ ಯೋಜನೆ ಜೊತೆಗೆ ರಾಜ್ಯ ಸರ್ಕಾರದಿಂದಲೂ ಪ್ರತಿ ವ್ಯಕ್ತಿಗೆ 1 ಲಕ್ಷ ರೂಪಾಯಿ ಟಾಪ್ ಅಪ್ ಒದಗಿಸಲು ಅನುಮೋದನೆ ನೀಡಲಾಗಿದೆ.
ರೋಗಿಗಳಿಗೆ ಚಿಕಿತ್ಸೆ ಹೇಗೆ?
ವೆಂಟಿಲೇಟರ್‌ನಲ್ಲಿ ಇರುವ ರೋಗಿಗಳು ಹಾಗೂ ಮಲ್ಟಿ ಆರ್ಗನ್ ವೈಫಲ್ಯ (ಬಹು ಅಂಗಾಂಗ ವೈಫಲ್ಯ) ಅಥವಾ ಇತರ ಗಂಭೀರ ಚಿಕಿತ್ಸೆಗೆ ಒಳಪಟ್ಟವರು ಸಿಟಿಆರ್‌ಎವಿ ಯೋಜನೆಯ 7 ದಿನಗಳ ಚಿಕಿತ್ಸೆ ನಂತರವೂ ರಾಜ್ಯ ಸರ್ಕಾರದ ಪ್ಯಾಕೇಜ್ ಪ್ರಕಾರ ಹೆಚ್ಚು ದಿನಗಳ ಚಿಕಿತ್ಸೆಗೆ ಒಳಗಾದಲ್ಲಿ ಅವರಿಗೆ ಹೆಚ್ಚುವರಿಯಾಗಿ 1 ಲಕ್ಷ ರೂಪಾಯಿ ಟಾಪ್-ಅಪ್ ನೆರವು ರಾಜ್ಯ ಆರೋಗ್ಯ ಇಲಾಖೆಯೇ ಒದಗಿಸಲಿದೆ.
ರೋಗಿಗೆ ನೊಂದಾಯಿತವಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾದರೆ, ಆ ಆಸ್ಪತ್ರೆ ಎನ್‌ಎಬಿಎಚ್, ಎನ್‌ಕ್ಯುಎಎಸ್ ಮಾನ್ಯತೆ ಪಡೆದಿರಬೇಕು. ಅಥವಾ ರಾಜ್ಯದ ನೊಂದಾವಣೆ ಮಾನದಂಡಗಳನ್ನು ಪೂರೈಸಿರಬೇಕು. ಈ ಸಂದರ್ಭದಲ್ಲಿ ಎಸ್‌ಎಎಸ್‌ಟಿ ಪ್ಯಾಕೇಜ್ ದರಗಳಲ್ಲಿ 1 ಲಕ್ಷ ರೂಪಾಯಿ ಮಿತಿಗೆ ಒಳಪಟ್ಟಿರಬೇಕು. ಎಬಿ-ಎಆರ್‌ಕೆ ನೊಂದಾಯಿತವಲ್ಲದ ಆಸ್ಪತ್ರೆಗಳಲ್ಲಿ ವೈದ್ಯಕೀಯವಾಗಿ ನ್ಯಾಯಸಮ್ಮತವಾದಲ್ಲಿ, 7 ದಿನಗಳ ನಂತರವೂ ಚಿಕಿತ್ಸೆಯನ್ನು ಮುಂದುವರಿಸಲು ಅವಕಾಶ ನೀಡಬೇಕು. ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ 1.5 ಲಕ್ಷ ರೂಪಾಯಿ ಮೀರಿದ ಚಿಕಿತ್ಸಾ ವಿಧಾನಗಳಿಗೆ ವೈದ್ಯಕೀಯ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ರಾಜ್ಯ ಸರ್ಕಾರದ ಸಹಾಯಧನವನ್ನು ನೀಡಲಾಗುವುದು.
ರಾಜ್ಯದ ಹೆಚ್ಚುವರಿ ಧನಸಹಾಯ ವಿಚಾರದಲ್ಲಿ ತಾಂತ್ರಿಕ ಅಡಚಣೆಗಳಿದ್ದಲ್ಲಿ, ಪ್ರತ್ಯೇಕ ದಾಖಲಾತಿ ಪ್ರಕ್ರಿಯೆ ಜಾರಿಗೆ ತರಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಕ್ರಮವಹಿಸಬೇಕು. ಅಪಘಾತ ಸಂತ್ರಸ್ತರಿಗೆ ರಾಜ್ಯದ ಹೆಚ್ಚುವರಿ ಸಹಾಯವನ್ನು ಅನುಷ್ಠಾನಗೊಳಿಸಲು ಎನ್‌ಎಚ್‌ಎ/MoRTH ವೇದಿಕೆಯ ಟಿಎಂಎಸ್ 2.0 ಅನ್ನು ಬಳಸಿಕೊಳ್ಳಲು ಎಸ್‌ಎಎಸ್‌ಟಿಗೆ ಅನುಮತಿ ನೀಡಲಾಗಿದೆ. ಈ ಯೋಜನೆಯನ್ನು ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ಅಸ್ತಿತ್ವದಲ್ಲಿರುವ ರಾಜ್ಯ ಬಜೆಟ್‌ನಲ್ಲಿ ಒದಗಿಸಿರುವ ಅನುದಾನದ ಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications