ಡಿ.ಕೆ.ರವಿ ಸಾವಿನ ಬಗ್ಗೆ ಶಾಕಿಂಗ್ ರಹಸ್ಯ ಬಿಚ್ಚಿಟ್ಟ ನಿವೃತ್ತ ಪೊಲೀಸ್ ಅಧಿಕಾರಿ
ದಕ್ಷ ಐಎಎಸ್ ಅಧಿಕಾರಿ ಎಂದು ಕರೆಸಿಕೊಂಡಿದ್ದ ಡಿ.ಕೆ.ರವಿ ಅವರು ರಾಜ್ಯದ ಮನೆಮಾತಾಗಿದ್ದರು. ಆದರೆ ದಿಢೀರನೆ ಅವರ ಸಾವಿನ ವಿಚಾರ ತಿಳಿದು ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. 2015ರ ಮಾರ್ಚ್ 16ರಂದು ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸೇವೆಯಲ್ಲಿರುವಾಗಲೇ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.
ಬಳಿಕ ಇದನ್ನು ಕೆಲವರು ಆತ್ಮಹತ್ಯೆ ಎಂದು ಕರೆದರೆ, ಹಲವರು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಪ್ರಕರಣ ಮುಗಿದು ಹತ್ತು ವರ್ಷಗಳು ಕಳೆದಿವೆ. ಇದೀಗ ರವಿ ಅವರ ಸಾವಿನ ವಿಚಾರದ ಬಗ್ಗೆ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ರವಿ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ಅದು ಆತ್ಮಹತ್ಯೆ ಎಂದು ದೃಢಪಡಿಸಿತ್ತು. ಆದರೂ ಡಿಕೆ ರವಿ ಅವರ ಸಾವಿನ ಸುತ್ತ ಹನುಮಾನದ ಹುತ್ತ ಹಾಗೆಯೇ ಇತ್ತು. ಇಂದಿಗೂ ಅವರನ್ನು ಕೊಲೆ ಮಾಡಲಾಗಿದೆ ಎಂದೇ ಜನ ಆಗಾಗ ಮಾತನಾಡಿಕೊಳ್ಳುತ್ತಿರುತ್ತಾರೆ. ರವಿ ಅವರ ಸಾವಿನ ಸುತ್ತ ಹಲವು ವದಂತಿ ಕೂಡ ಇದೆ.
ಇವುಗಳಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎನ್ನುವುದು ಇಂದಿಗೂ ನಿಗೂಢವಾಗಿಯೇ ಇದೆ. ಇನ್ನು ರವಿ ಅವರ ಸಾವಿನ ವಿಚಾರವಾಗಿ ಹಿರಿಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರು "ರಾಜೇಶ್ ರಿವೀಲ್ಸ್" ಯುಟ್ಯೂಬ್ ಚಾನಲ್‌ನ ಸಂದರ್ಶನದಲ್ಲಿ ಕೆಲ ಅಚ್ಚರಿ ಸಂಗತಿಗಳನ್ನು ಹೇಳಿಕೊಂಡಿದ್ದಾರೆ.

'ಕೆಲವು ಸಾವುಗಳು ಜನರಿಗೆ ತೃಪ್ತಿ ತರುವುದಿಲ್ಲ. ಜನರ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಇರುತ್ತವೆ. ಆದರೆ ಆ ಆಲೋಚನೆಗಳಿಗೆ ತಕ್ಕಂತೆ ಏನೂ ನಡೆಯುವುದಿಲ್ಲ. ಏಕೆಂದರೆ ಈಗಿನ ಸೈನ್ಸ್ ತುಂಬಾ ಅಡ್ವಾನ್ಸ್ಡ್ ಆಗಿದೆ. ಈ ಮನುಷ್ಯ ತಾನೇ ನೇಣು ಹಾಕಿಕೊಂಡಿದ್ದಾನೆ ಅಥವಾ ಈ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ ಎಂಬುದು ಮರಣೋತ್ತರ ಪರೀಕ್ಷೆ ನಡೆಸುವಾಗಲೇ ನೂರಕ್ಕೆ ನೂರರಷ್ಟು ಖಚಿತವಾಗಿ ತಿಳಿಯುತ್ತೆ. ನಾವು ಇಂತಹ ನೂರಾರು ಮೃತದೇಹಗಳನ್ನು ನೋಡಿರುವುದರಿಂದ ಚೆನ್ನಾಗಿ ತಿಳಿದಿರುತ್ತೆ. ಆದ್ರೆ ನಾವು ಡಾಕ್ಟರ್ ಅಲ್ಲದ ಕಾರಣ ಏನನ್ನೂ ಮಾತನಾಡೋಕೆ ಹೋಗಲ್ಲ' ಎಂದು ಎಸ್.ಕೆ.ಉಮೇಶ್ ಹೇಳಿದ್ದಾರೆ.
'ಹಾಗಾಗಿ ಯಾವುದೇ ಒಬ್ಬ ಮನುಷ್ಯನ್ನ ಈ ಜಗತ್ತಲ್ಲಿ ಕೊಂದು ನೇಣು ಹಾಕೋಕೆ ಸಾಧ್ಯವಿಲ್ಲ. ಮೃತದೇಹ ನೋಡಿದ ತಕ್ಷಣವೇ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ನೂರರಷ್ಟು ತಿಳಿಯುತ್ತೆ. ಪ್ರಪಂಚದಲ್ಲೇ ಯಾರೇ ಸುಳ್ಳು ಹೇಳಿದರೂ ಶವ ಮಾತ್ರ ಸುಳ್ಳು ಹೇಳುವುದಿಲ್ಲ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ, ಅವರೇ ನೇಣು ಹಾಕಿಕೊಂಡಿದ್ದಾರಾ ಅನ್ನೋದು ಮೃತದೇಹದ ಭಾಗ ಓಪನ್ ಮಾಡಿದ ಕೂಡಲೇ ಅದೇ ಹೇಳುತ್ತೆ' ಎಂದಿದ್ದಾರೆ.
'ಒಂದು ಕನ್ನಡಿಯನ್ನ ನೆಲಕ್ಕೆ ಬೀಳಿಸಿದರೆ ಹೇಗೆ ಒಡೆದು ಹೋಗುತ್ತೋ, ಅದೇ ರೀತಿ ಕಾಣಿಸಿಬಿಡುತ್ತದೆ. ಒಂದು ವೇಳೆ ನೀವು ಒಡೆದ ಕನ್ನಡಿಯನ್ನು ಜೋಡಿಸಿದರೂ ಅದು ಗೊತ್ತಾಗುತ್ತೆ. ಹಾಗಾಗಿ ಈ ವಿಚಾರದಲ್ಲಿ ಏನೇನೋ ಮಾಡಲು ಸಾಧ್ಯವಿಲ್ಲ. ಒಬ್ಬ ಮನುಷ್ಯ ಸತ್ತರೆ ಏನೆಲ್ಲ ಬದಲಾವಣೆ ಆಗುತ್ತೆ ಅನ್ನೋದನ್ನು ಅಷ್ಟು ಖಚಿತವಾಗಿ ಹೇಳಲಾಗುತ್ತೆ. ವೈದ್ಯರು ಕೂಡ ಅಲ್ಲಿ ಏನು ನಡೆದಿರುತ್ತೋ ಅದೇ ವರದಿ ಕೊಡಬೇಕು. ಅವರು ಕೂಡ ಮೃತದೇಹ ನೋಡಿದ ಕೂಡಲೇ ಕಾರಣ ಏನೆಂದು ಹೇಳುತ್ತಾರೆ' ಎಂದು ಉಮೇಶ್ ಅವರು ವಿವರಿಸಿದ್ದಾರೆ.












Click it and Unblock the Notifications