Landslide: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ
ಮಂಗಳೂರು, ಆಗಸ್ಟ್ 22: ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ನಿಲ್ದಾಣಗಳ ಮಧ್ಯೆ ಕಳೆದ ಆಗಸ್ಟ್ 9ರ ಶುಕ್ರವಾರ ರಾತ್ರಿ ರೈಲು ಹಳಿಗಳ ಮೇಲೆ ಗುಡ್ಡ ಕುಸಿದು ರೈಲು ಸಂಚಾರ ಅಸ್ತವ್ಯಸ್ಥವಾಗಿತ್ತು. ಶನಿವಾರದಿಂದಲೇ ಹಲವು ರೈಲುಗಳ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಹತ್ತು ದಿನಗಳ ಬಳಿಕ ರೈಲುಗಳ ಹಳಿಗಳ ಮೇಲಿನ ನಿಲ್ದಾಣಗಳ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿದ್ದು, ಒಂದು ರೈಲು ಬಿಟ್ಟು ಉಳಿದೆಲ್ಲ ರೈಲುಗಳ ಸಂಚಾರ ಪುನಾರಂಭವಾಗಿದೆ.
ಕೆಲವು ದಿನಗಳಿಂದ ವ್ಯಾಪಕ ಮಳೆ ಸುರಿದ ಪರಿಣಾಮ ಗುಡ್ಡ ಕುಸಿದಿತ್ತು. ಇದರಿಂದ ಸಕಲೇಶಪುರ ಮಾರ್ಗವಾಗಿ ಸಂಚರಿಸುವ ರೈಲುಗಳಿಗೆ ಅಡಚಣೆ ಉಂಟಾಗಿತ್ತು. ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ ಇತ್ತು. ಗುಡ್ಡ ಕುಸಿದ ದಿನ ಆಲೂರಿನಲ್ಲೇ ರೈಲುಗಳ ಸ್ಥಗಿತಗೊಂಡಿದ್ದವು.

ನಂತರ ಹಳಿಗಳ ಮೇಲಿನ ಮಣ್ಣು ತೆರವು ಕಾರ್ಯಾಚರಣೆ ಆರಂಭವಾಗಿ ಸುಮಾರು ಹತ್ತು ದಿನಗಳಲ್ಲಿ ಕೆಲಸ ಮುಗಿದಿದೆ. ಹಳಿಗಳ ಪುನಶ್ಚೇತನ ಕಾರ್ಯ ಪೂರ್ಣಗೊಂಡಿದೆ. ಯಾವುದೇ ಅಡತಡೆ ಇಲ್ಲ ಎಂದು ತಿಳಿಸಿರುವ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳು, ಕಳೆದ ಸೋಮವಾರ ಸಂಜೆ 4:45ರಿಂದ ನಿಗದಿತ ರೈಲುಗಳು ಇದೇ ಟ್ರ್ಯಾಕ್ ಮೂಲಕ ಸಂಚರಿಸಲು ಆರಂಭಿಸಿವೆ ಎಂದರು.
ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ರೈಲು (07378) ಮಾತ್ರ ಆಗಸ್ಟ್ 20 ರಂದು ರದ್ದಾಗಿತ್ತು. ಇನ್ನುಳಿದಂತೆ ಬಹುತೇಕ ಎಲ್ಲ ರೈಲುಗಳು ವೇಳಾಪಟ್ಟಿಯಂತ ಸಂಚಾರ ನಡೆಸಿವೆ. ಸಕಲೇಶಪುರ ಹಾಗೂ ಬಾಳ್ಳುಪೇಟೆ ರೈಲು ನಿಲ್ದಾಣಗಳ ಮಧ್ಯೆ ಯಾವುದೇ ಅಡಚಣೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೆದ್ದಾರಿ ರಸ್ತೆ ಅಡಚಣೆ ಬಳಿ ರೈಲು ಸಂಚಾರ ತೊಂದರೆ
ವಿಪರೀತ ಮಳೆಯಿಂದಾಗಿ ಸಕಲೇಶಪುರ ವ್ಯಾಪ್ತಿಯಲ್ಲಿ ಆಗಾಗ ತೊಂದರೆ ಆಗುತ್ತಲೇ ಇರುತ್ತದೆ. ಇಲ್ಲಿ ಮಾತ್ರವಲ್ಲದೇ ಅಂಕೋಲಾ ರಸ್ತೆಯಲ್ಲೂ ಸಹ ಗುಡ್ಡ ಕುಸಿದು ಸಾಕಷ್ಟು ತೊಂದರೆ ಉಂಟು ಮಾಡಿತ್ತು. ಗ್ಯಾಸ್ ಟ್ಯಾಂಕರ್ ನದಿಗೆ ಉರುಳಿದ್ದ ಪರಿಣಾಮ ಗ್ರಾಮಸ್ಥರು ಊರು ಬಿಟ್ಟಿದ್ದರು. ನಿರಂತರ ಕಾರ್ಯಾಚರಣೆ ಮೂಲಕ ಟ್ಯಾಂಕರ್ ಲೀಕ್ ಮಾಡಿ ಲಾರಿ ಹೊರತೆಗೆಯಲಾಯಿತು. ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ಥವಾಯಿತು.
2030ರ ವೇಳೆಗೆ ಬೆಂಗಳೂರಿಗೆ ಸಿಗಲಿದೆ 400 ಕಿಮೀ ವ್ಯಾಪ್ತಿಯ ಮೆಟ್ರೋ, ಉಪನಗರ ರೈಲು ಜಾಲ
ಈ ಹೆದ್ದಾರಿ ಗುಡ್ಡ ಕುಸಿತ ಬೆನ್ನಲ್ಲೆ ಸಕಲೇಶ್ವರ ಬಾಳ್ಳುಪೇಟೆ ರೈಲು ನಿಲ್ದಾಣಗಳ ಮಧ್ಯೆ ಹಳಿಗಳ ಮೇಲೆ ಅಪಾರ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿತ ಬಿದ್ದಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹಾರವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications