Village Accountant; ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಕಾರ್ಯಗಳು
ಬೆಂಗಳೂರು, ನವೆಂಬರ್ 07; ಕಂದಾಯ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ತಲುಪಿಸುವ ಕಾರ್ಯವನ್ನು ಗ್ರಾಮಲೆಕ್ಕಿಗ (village accountant) ಮಾಡುತ್ತಾರೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚನೆಗೊಂಡಿರುವ ಸಮಿತಿ ಗ್ರಾಮ ಲೆಕ್ಕಿಗರ ನೇಮಕಾತಿ ಪ್ರಕ್ರಿಯೆ ನೋಡಿಕೊಳ್ಳುತ್ತದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ ರ ಮೇರೆಗೆ ಪ್ರತಿಯೊಂದು ಗ್ರಾಮ ಅಥವಾ ಗ್ರಾಮಗಳ ಸಮೂಹಕ್ಕಾಗಿ ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶಕ್ಕೆ ಒಳಪಟ್ಟು ಗ್ರಾಮ ಲೆಕ್ಕಾಧಿಕಾರಿಯವರನ್ನು ನೇಮಕ ಮಾಡುತ್ತಾರೆ. ಗ್ರಾಮ ಲೆಕ್ಕಿಗರು ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ಕೆಲಸ ನಿರ್ವಹಿಸುತ್ತಾರೆ ಮತ್ತು ಗ್ರಾಮಕ್ಕೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ. ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಗ್ರಾಮ ಲೆಕ್ಕಿಗರಾಗಿ ನೇಮಕವಾಗುತ್ತಾರೆ.
ಸದ್ಯ ಗ್ರಾಮಲೆಕ್ಕಿಗರ ಹುದ್ದೆಯನ್ನು ಕರ್ನಾಟಕ ಜನರಲ್ ಸರ್ವೀಸಸ್ (Revenue Subordinate Branch) (Cadre & Recruitment)(ತಿದ್ದುಪಡಿ) ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ನೇಮಕಾತಿ ಮಾಡಲಾಗುತ್ತಿದೆ. ಆದರೆ ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸಹ ಚಿಂತನೆ ಇದೆ.
ಕಂದಾಯ ವಸೂಲಿ, ಜನನ ಮರಣಗಳ ನೋಂದಣಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ವರದಿ ನೀಡುವುದು, ಜಾತಿ/ ಆದಾಯ ಪತ್ರ ನೀಡುವ ಬಗ್ಗೆ ವರದಿ ನೀಡುವುದು, ಪಡಿತರ ಚೀಟಿ ವಿತರಣೆ, ಸಾರ್ವಜನಿಕರಿಗೆ ಇತರೆ ಇಲಾಖೆಗೆ ಗ್ರಾಮ ಮಟ್ಟದ ಅಂಕಿ ಅಂಶಗಳ ಪ್ರಾರಂಭಿಕ ದಾಖಲೆ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಗ್ರಾಮಲೆಕ್ಕಿಗರು ಮಾಡುತ್ತಾರೆ.

ಶಿಸ್ತುಕ್ರಮವನ್ನು ಎದುರಿಸಬೇಕಾಗುತ್ತದೆ
ಗ್ರಾಮ ಲೆಕ್ಕಿಗ ನೇರವಾಗಿ ಕಂದಾಯ ನಿರೀಕ್ಷಕರ ನಿಯಂತ್ರಣದಲ್ಲಿರುತ್ತಾರೆ. ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಿಗ ಕಂದಾಯ ಆಡಳಿತದ ಪ್ರಮುಖ ಅಧಿಕಾರಿ. ಗ್ರಾಮಸ್ಥರಿಗೆ ಸದಾ ಲಭ್ಯವಾಗುವಂತೆ ತನ್ನ ವೃತ್ತ ಕೇಂದ್ರ ಗ್ರಾಮದಲ್ಲಿ ಆತ ವಾಸಿಸಬೇಕು.
ಗ್ರಾಮ ಲೆಕ್ಕಿಗ ನೇಮಕಾತಿ ಸಂದರ್ಭದಲ್ಲಿಯೇ ಸ್ಥಳೀಯರಿಗೆ ಆದ್ಯತೆ ಎಂದು ಷರತ್ತು ಹಾಕಿರಲಾಗುತ್ತದೆ. ಗ್ರಾಮ ಲೆಕ್ಕಿಗರ ಕೇಂದ್ರ ಸ್ಥಾನವನ್ನು ಜಿಲ್ಲಾಧಿಕಾರಿ ನಿದಗಿ ಮಾಡುತ್ತಾರೆ. ಕೇಂದ್ರ ಸ್ಥಾನದಲ್ಲಿ ವಾಸಿಸದ ಗ್ರಾಮ ಲೆಕ್ಕಿಧಿಕಾರಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ.

ಗ್ರಾಮಲೆಕ್ಕಾಧಿಕಾರಿ ಅಧಿಕಾರ ಮತ್ತು ಕಾರ್ಯಗಳು
ರಾಜ್ಯ ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳ ಕಾರ್ಯಗಳನ್ನು ಪಟ್ಟಿ ಮಾಡಲಾಗಿದೆ. ವಿವಿಧ ಕಾಯ್ದೆಗಳ ಅಡಿಯಲ್ಲಿ ಹಲವು ಕಾರ್ಯಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಮಾಡಬೇಕಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಅನ್ವಯ ಸೆಕ್ಷನ್ 17 (1) ಗ್ರಾಮಲೆಕ್ಕಾಧಿಕಾರಿಗಳು ರಾಜ್ಯ ಸರ್ಕಾರವು ನಿಗದಿಪಡಿಸಿದ ವಹಿಗಳು, ಖಾತೆಗಳು ಇತ್ಯಾದಿಗಳನ್ನು ನಿರ್ವಹಣೆ ಮಾಡುತ್ತಾರೆ.
ವಿಭಾಗ 145; ಗ್ರಾಮಲೆಕ್ಕಾಧಿಕಾರಿಗಳು ಗ್ರಾಮಗಳ ಗಡಿ ಗುರುತುಗಳ ನಾಶ ಅಥವ ಅನಧಿಕೃತ ಬದಲಾವಣೆಯನ್ನು ತಡೆಯಬೇಕಾಗುತ್ತದೆ.

ಬೆಳೆ ಕಟಾವು ಪ್ರಯೋಗ ನಡೆಸುವುದು
ನಿಯಮ 141 (ಎ); ಹಕ್ಕು ದಾಖಲೆ ವಹಿ ಮತ್ತು ಹಕ್ಕು ಬದಲಾವಣೆ ವಹಿಗಳು ಸಾರ್ವಜನಿಕರಿಗೆ ಪರಿಶೀಲನೆಗಾಗಿ ಮುಕ್ತವಾಗಿಡಬೇಕು ಮತ್ತು ಅರ್ಜಿ ಸ್ವೀಕರಿಸಿದ ಅಥವ ಬರವಣಿಗೆಯಲ್ಲಿ ಕೋರಿಕೆ ಅಥವ ಮೌಖಿಕ ಕೋರಿಕೆ ಮೇರೆಗೆ ಸಾರ್ವಜನಿಕರಿಗೆ ಒದಗಿಸುವುದು.
ನಿಯಮ 145 (1); ಗ್ರಾಮಲೆಕ್ಕಿಗ ಪ್ರತ್ಯೇಕ ಖಾತೆ (ನಮೂನೆ 24) ಮತ್ತು ಖಿರ್ದಿ (ನಮೂನೆ 25) ಅನ್ನು ನಿರ್ವಹಣೆ ಮಾಡಬೇಕು.
ನಿಯಮ 147 (1); ಗ್ರಾಮಲೆಕ್ಕಾಧಿಕಾರಿಗಳು ತನ್ನ ಉಸ್ತುವಾರಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಬೇಕು.

ಆಸ್ತಿ ಜಪ್ತಿ ಪ್ರಕ್ರಿಯೆ ನಡೆಸಬೇಕು
ನಿಯಮ 122; ಗ್ರಾಮಲೆಕ್ಕಾಧಿಕಾರಿಗಳು ಪಂಚಾಯಿತಿದಾರರ ಸಮ್ಮುಖದಲ್ಲಿ ಸುಸ್ಥಿದಾರನ ಜಪ್ತಿ ಪ್ರಕ್ರಿಯೆಯನ್ನು ನಡೆಸಬೇಕು. ಜಪ್ತಿ ಪ್ರಕ್ರಿಯೆ ಮುಗಿದ ಬಳಿಕ ಜಪ್ತಿ ಮಾಡಿದ ಸರಕುಗಳ ಪಟ್ಟಿಯನ್ನು ಗ್ರಾಮಲೆಕ್ಕಾಧಿಕಾರಿ ಮತ್ತು ಪಂಚಾಯಿತಿದಾರರು ದೃಢೀಕರಿಸಬೇಕು. ಜಪ್ತಿ ಮಾಡಿದ ಎಲ್ಲಾ ಸರಕು ಸಾಮಾಗ್ರಿಗಳು ಗ್ರಾಮಲೆಕ್ಕಾಧಿಕಾರಿಗಳ ವಶದಲ್ಲಿ ಇಡಬೇಕು.
ನಿಯಮ 131; ಗ್ರಾಮಲೆಕ್ಕಾಧಿಕಾರಿಗಳು ಕೆಲವು ದಾಖಲೆಗಳ ಪ್ರಮಾಣೀಕೃತ ಪ್ರತಿಗಳನ್ನು ನೇರವಾಗಿ 10 ದಿನಗಳಲ್ಲಿ ಅರ್ಜಿದಾರರಿಗೆ ನೀಡಬಹುದಾಗಿದೆ.












Click it and Unblock the Notifications