ಖಾಸಗಿ ಸಂಸ್ಥೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ: ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು,ಫೆಬ್ರವರಿ 02: ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತೆ ಶಿಫಾರಸುಗಳುಳ್ಳ ಡಾ. ಸರೋಜಿನಿ ಮಹಿಷಿ ಅವರ ವರದಿಗೆ ಮೂವತ್ತೆರಡು ವರ್ಷಗಳ ನಂತರ ಬೆಲೆ ಸಿಗುತ್ತಿದೆ. ಉನ್ನತ ಮಟ್ಟದ ಸಮಿತಿ 14 ಪ್ರಮುಖ ಶಿಫಾರಸುಗಳನ್ನು ಹಾಗೂ 9 ಹಕ್ಕೋತ್ತಾಯಗಳ ಪ್ರತಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯ ಸಮೀಕ್ಷಾ ವರದಿಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮತ್ತು ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಲ್ಲಿಸಿದರು.

ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಚಂದ್ರಶೇಖರ್ ಪಾಟೀಲ್, ನಲ್ಲೂರ್ ಪ್ರಸಾದ್, ಹೇಮಲತಾ ಮಹಿಷಿ, ಡಾ. ಚಂದ್ರಶೇಖರ್ ಪಾಟೀಲ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮುಂತಾದವರು ಉಪಸ್ಥಿತರಿದ್ದರು.

'ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಮತ್ತು ಆಡಳಿತ ಭಾಷೆ. ಪರಿಷ್ಕೃತ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿ ಗೊಳಿಸಲು ಕಾನೂನಿನ ಚೌಕಟ್ಟಿನಲ್ಲಿ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗವುದು' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪ್ರಮುಖ ಶಿಫಾರಸು -1

ಪ್ರಮುಖ ಶಿಫಾರಸು -1

ಐಟಿ-ಬಿಟಿ ಬಹುರಾಷ್ಟ್ರೀಯ ಸಂಸ್ಥೆಗಳು, ವ್ಯಾಪಾರ, ವಾಣಿಜ್ಯ, ರೆಸಾರ್ಟ್, ಆಸ್ಪತ್ರೆ, ಮನೋರಂಜನಾ ಕೇಂದ್ರ, ಹೋಟೆಲ್ ಉದ್ಯಮ, ಸಾರಿಗೆ, ಪ್ರವಾಸೋದ್ಯಮ, ನವೋದ್ಯಮ, ಇ-ಕಾಮರ್ಸ್, ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ ಇವುಗಳಿಗೆ ರಾಜ್ಯ ಸರ್ಕಾರ ನೆಲ,ಜಲ, ವಿದ್ಯುತ್ ರಸ್ತೆ, ಹೆರಿಗೆ ರಜೆ ಸೌಲಭ್ಯ ನೀಡುತ್ತಿದೆ. ಇವುಗಳಲ್ಲಿ ಸಿ ಅಂಡ್ ಡಿ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರನ್ನೇ ನೇಮಿಸಬೇಕು.
2

ಯಾರಿಗೆ ಮೀಸಲಾತಿ, ಆದ್ಯತೆ

ಯಾರಿಗೆ ಮೀಸಲಾತಿ, ಆದ್ಯತೆ

ಸ್ಥಳೀಯರು ಎಂದು ಪರಿಗಣಿಸಲು 15 ವರ್ಷ ರಾಜ್ಯದಲ್ಲಿ ವಾಸವಾಗಿರಬೇಕಲ್ಲದೆ, ಕನ್ನಡ ಭಾಷಾ ಜ್ಞಾನವಿರಬೇಕು. ಕನ್ನಡದಲ್ಲಿ ಎಸ್‍ಎಸ್‍ಎಲ್‍ಸಿವರೆಗೂ ಓದಿದ ಶಾಲಾ ಸರ್ಟಿಫಿಕೇಟ್, ಆಧಾರ್‍ಕಾರ್ಡ್, ಪಡಿತರ ಚೀಟಿ , ಜನ್ಮಪ್ರಮಾಣ ಪತ್ರಗಳಲ್ಲಿ ಒಂದನ್ನಾದರೂ ಹೊಂದಿರಬೇಕು. ಹೊರ ರಾಜ್ಯ ಸೇರಿದಂತೆ ಯಾವುದೇ ದೇಶದಲ್ಲಿ ಎಸ್‍ಎಸ್‍ಎಲ್‍ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳನ್ನು ಸ್ಥಳೀಯರು ಎಂದು ಪರಿಗಣಿಸಿ ಒಳನಾಡಿನ ಕನ್ನಡಿಗರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು.

ಪ್ರಮುಖ ಶಿಫಾರಸು -2

ಪ್ರಮುಖ ಶಿಫಾರಸು -2

ರಾಜ್ಯದಲ್ಲಿ ವ್ಯವಹಾರ ನಡೆಸುವ ಖಾಸಗಿ ಬಹುರಾಷ್ಟ್ರೀಯ ಬ್ಯಾಂಕ್‍ ಗಳು ಒಳಗೊಂಡಂತೆ ನೇಮಕಾತಿ ವೇಳೆ ಕನ್ನಡ ಭಾಷಾಜ್ಞಾನ ಕಡ್ಡಾಯಗೊಳಿಸಬೇಕು. ಎಸ್‍ಎಸ್‍ಎಲ್‍ಸಿಯಲ್ಲಿ ಕನ್ನಡ ಕಲಿತವರನ್ನು ಹೊರತುಪಡಿಸಿ ಉಳಿದವರಿಗೆ ರಾಜ್ಯ ಭಾಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಷರತ್ತು ವಿಧಿಸಬೇಕು. ಈ ನಿಯಮವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಪಾಲಿಸುತ್ತಿದೆ.

ಶಿಫಾರಸು 3-4

ಶಿಫಾರಸು 3-4

3-ರಾಜ್ಯದಲ್ಲಿರುವ ತಾಂತ್ರಿಕ ಕಾಲೇಜುಗಳಲ್ಲೇ ಕ್ಯಾಂಪಸ್ ಆಯ್ಕೆ ನಡೆಯಬೇಕು. ಆದೇಶಗಳು ಪಾಲನೆಯಾಗುತ್ತಿವೆಯೇ ಎಂಬುದನ್ನು ಕಾರ್ಮಿಕ ಇಲಾಖೆ ಪರಿಶೀಲಿಸಬೇಕು, ಈ ಇಲಾಖೆಗಳು ನಡೆಸುವ ಪರಾಮರ್ಶೆಯಲ್ಲಿ ಲೋಪವಿದ್ದರೆ ಅದನ್ನು ಪರಿಶೀಲಿಸುವ ಮತ್ತು ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ವಹಿಸುವ ಅಧಿಕಾರವನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ನೀಡಬೇಕು.

4-ರಾಜ್ಯ ಸರ್ಕಾರದ ಎಲ್ಲಾ ಉದ್ದಿಮೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು, ಅನಿವಾರ್ಯ ಸಂದರ್ಭದಲ್ಲಿ ಉನ್ನತ ತಾಂತ್ರಿಕತೆ ಕೌಶಲ್ಯವಿರುವ ಅನ್ಯ ರಾಜ್ಯದವರನ್ನು ನೇಮಿಸಿಕೊಳ್ಳಲು ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು.

ಶಿಫಾರಸು 5-6

ಶಿಫಾರಸು 5-6

5. ಅಪ್ರೆಂಟಿಸ್ ಗಳ ಆಯ್ಕೆಯನ್ನು ತಾಂತ್ರಿಕ ಇಲಾಖೆ ಮಾಡುತ್ತಿದ್ದು, ಅಲ್ಲಿ ಹೊರರಾಜ್ಯಗಳ ಅಭ್ಯರ್ಥಿಗಳು ಬರುತ್ತಿದ್ದಾರೆ. ಅದನ್ನು ತಡೆಯಲು ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಓದಿದವರನ್ನು ಮಾತ್ರ ಪರಿಗಣಿಸಬೇಕು.
6. ಸರ್ಕಾರಿ ಇಲಾಖೆಗಳು ಮತ್ತು ಉದ್ದಿಮೆಗಳಲ್ಲಿ ಗುತ್ತಿಗೆ ಅಥವಾ ದಿನಗೂಲಿ ಆಧಾರದ ಮೇಲೆ ನೇಮಕಾತಿ ಮಾಡುವಾಗ ಕಡ್ಡಾಯವಾಗಿ ಕನ್ನಡಿಗರಿಗೆ ಆದ್ಯತೆ, ಹೊರಗುತ್ತಿಗೆ ಸಂಸ್ಥೆಗಳಿಗೂ ಇದೇ ಷರತ್ತು ವಿಧಿಸಬೇಕು. ಇದರ ನಿಗಾ ವಹಿಸಲು ಅಧಿಕಾರವನ್ನು ಕಾರ್ಮಿಕ ಇಲಾಖೆಗೆ ಹಾಗೂ ಮೇಲುಸ್ತುವಾರಿಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ನೀಡಬೇಕು.

ತಾಂತ್ರಿಕ ಸಲಹಾ ಮಂಡಳಿ

ತಾಂತ್ರಿಕ ಸಲಹಾ ಮಂಡಳಿ

7. ನೂರಕ್ಕಿಂತಲೂ ಹೆಚ್ಚು ನೌಕರರಿರುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡದ ಪ್ರತಿನಿಧಿಯನ್ನು ಸೇರಿಸಬೇಕು. ಖಾಸಗಿ ಮತ್ತು ಕೇಂದ್ರ ಸಾರ್ವಜನಿಕ ಉದ್ದಿಮೆಗಳ ನೇಮಕಾತಿ ಪಟ್ಟಿಯನ್ನು ವಾಣಿಜ್ಯ ಕೈಗಾರಿಕೆ ಇಲಾಖೆಗೆ ಕಳುಹಿಸಲಾಗುವುದು. ಅದೇ ಪಟ್ಟಿ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೂ ಕಳುಹಿಸಬೇಕು.
8. ಐಟಿಐ ಶಿಕ್ಷಣ ಪಡೆದ ಅಭ್ಯರ್ಥಿಗಳು ಪ್ರಸ್ತುತ ಕೈಗಾರಿಕೆಗೆ ಅಗತ್ಯವಾದ ಕೌಶಲ್ಯ ಹೊಂದಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿದೆ. ಇದಕ್ಕಾಗಿ ಕಾಲೋಚಿತ ಬೆಳವಣಿಗೆಗೆ ಅನುಗುಣವಾಗಿ ತಂತ್ರಜ್ಞಾನ ಕಲಿಸುವ ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿ ರಚಿಸಬೇಕು.

ಕನ್ನಡಕ್ಕೆ ಆದ್ಯತೆ ನೀಡಬೇಕು

ಕನ್ನಡಕ್ಕೆ ಆದ್ಯತೆ ನೀಡಬೇಕು

9 ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ಉದ್ಯೋಗಾವಕಾಶಗಳ ಮಾಹಿತಿ ನೀಡುವ ಎಂಪ್ಲಾಯ್ ಮೆಂಟ್ ನ್ಯೂಸ್ ಪತ್ರಿಕೆಯನ್ನು ವಾರ್ತಾ ಇಲಾಖೆ ಮೂಲಕ ಕನ್ನಡದಲ್ಲಿ ಪ್ರಕಟಿಸಬೇಕು. ಕಾಲಕಾಲಕ್ಕೆ ಕನ್ನಡ ದಿನಪತ್ರಿಕೆಗಳು ಉದ್ಯೋಗಾವಕಾಶದ ಜಾಹೀರಾತು ನೀಡಬೇಕು.

10 ರಾಜ್ಯ, ಕೇಂದ್ರ, ಸರ್ಕಾರಿ ಕಚೇರಿಗಳಲ್ಲೂ ಉದ್ಯಮಿಗಳು ಮತ್ತು ಖಾಸಗಿ ಕಂಪೆನಿಗಳು ನಾಮಫಲಕ, ಜಾಹೀರಾತು ಫಲಕ, ಹೆದ್ದಾರಿ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕು.

 ಅಂತರ್ಜಾಲ ಸಂವಹನ ಕನ್ನಡದಲ್ಲೆ

ಅಂತರ್ಜಾಲ ಸಂವಹನ ಕನ್ನಡದಲ್ಲೆ

12 ರಾಜ್ಯದಲ್ಲಿ ಐಸಿಎಸ್ ಇ, ಸಿಬಿಎಸ್ ಇ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ ಸೇರಿದಂತೆ ಆಂಗ್ಲಭಾಷಾ ಶಿಕ್ಷಣ ಸಂಸ್ಥೆಗಳಲ್ಲಿ 1 ರಿಂದ 10ನೆ ತರಗತಿವರೆಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು.
13. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ಕನ್ನಡದಲ್ಲೇ ಉತ್ತರಿಸುವ ಅವಕಾಶವಿರಬೇಕು. ಇದಕ್ಕೆ ಅಗತ್ಯ ಪಠ್ಯಕ್ರಮವನ್ನು ಸೃಷ್ಟಿಸುವ ಕೆಲಸವನ್ನು ಆಯಾ ಇಲಾಖೆ ಮಾಡಬೇಕು. ಕನ್ನಡ ವಿವಿಯ ನೆರವು ಪಡೆಯಬೇಕು.
14. ಸರ್ಕಾರದ ಎಲ್ಲಾ ಇಲಾಖೆಗಳ ಮತ್ತು ನಿಗಮ ಮಂಡಳಿಗಳಲ್ಲಿ ಕನ್ನಡ ತಂತ್ರಾಂಶ ಬಳಸಬೇಕು. ಅಂತರ್ಜಾಲ ಸಂವಹನ ಕನ್ನಡದಲ್ಲೆ ನಡೆಯಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah on Wednesday promised to bring out a legislation to implement the recommendations of the five-member expert panel that has revised the 30-year-old Dr. Sarojini Mahishi Committee report on providing jobs to Kannadigas
Please Wait while comments are loading...