Darshan Case: ಜೈಲಲ್ಲಿರುವ ನಟ ದರ್ಶನ್‌ಗೆ ಕೊಂಚ ರಿಲೀಫ್! ಕೋರ್ಟ್ ನೀಡಿದ ಅನುಮತಿಯೇನು?
ಬೆಂಗಳೂರು, ಸೆಪ್ಟಂಬರ್ 09: ರೇಣುಕಾಸ್ವಾಮಿ ಪ್ರಕರಣ ಆರೋಪಿ ನಟ ದರ್ಶನ್ ತೂಗುದೀಪ ಸದ್ಯ ಜೈಲಿನಲ್ಲಿದ್ದಾರೆ. ಜೈಲಿನ ಶಿಕ್ಷೆ ಅನುಭವಿಸಲಾಗದೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕು ಹಾಗೂ ಹೆಚ್ಚುವರಿ ದಿಂಬು, ಹಾಸಿಗೆ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯು ಇಂದು ಬೆಳಗ್ಗೆ ನಡೆದಿತ್ತು. ಮಧ್ಯಾಹ್ನ ಆದೇಶ ಪ್ರಕಟಿಸುವುದಾಗಿ ನ್ಯಾಯಲಯ ತಿಳಿಸಿತ್ತು. ಇದೀಗ ಆದೇಶ ನೀಡಿದ್ದು, ಸದ್ಯಕ್ಕೆ ಬಳ್ಳಾರಿ ಜೈಲಿಗೆ ವರ್ಗಾಯಿಸಲು ಸಕಾರಣವಿಲ್ಲ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಬಳ್ಳಾರಿ ಜೈಲ್‌ಗೆ ಸ್ಥಳಾಂತರಕ್ಕೆ ಕೋರ್ಟ್ ನಿರಾಕರಿಸಿದೆ.
ಬೆಳಗಿನ ವಿಚಾರಣೆ ವೇಳೆ ದರ್ಶನ್ 'ತನಗೆ ವಿಷಯ ನೀಡುವಂತೆ ಆದೇಶಿಸಲು' ಕೋರಿದ್ದಾರೆ. ದರ್ಶನ್ ಜೈಲು ಯಾತನೆ ಬಗ್ಗೆ ಕೆಲವರು ನಾಟಕ ಅಂತಲೂ ಕರೆದಿದ್ದಾರೆ. ಹಲವರು ದರ್ಶನ್‌ಗೆ ಈ ರೀತಿ ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಿಂಬು, ಹಾಸಿಗೆ, ಬೆಡ್‌ಶೀಟ್ ನೀಡುವಂತೆ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಆರೋಪಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ತಮ್ಮನ್ನು ಪರಪ್ಪನ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆ ವೇಳೆ ಎಲ್ಲ ಆರೊಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
ಸ್ಥಳಾಂತರಕ್ಕೆ ನಕಾರ, ಓಟಾಟಕ್ಕೆ ಅನುಮತಿ: ಕೋರ್ಟ್
ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನಿರಾಕರಿಸಿದೆ. ಯಾವುದೇ ಸಕಾರಗಳು ಇಲ್ಲ. ದರ್ಶನ್ ಬೆಂಗಳೂರು ಜೈಲಿನಲ್ಲೇ ಇರಬೇಕು. ಆದರೆ ಜೈಲಿನ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘಿಸುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ. ಒಂದು ವೇಳೆ ಉಲ್ಲಂಘಿಸಿದರೆ ದರ್ಶನ್ ಸ್ಥಳಾಂತರ ಬಗ್ಗೆ ಯೋಚಿಸಬಹುದು ಎಂದು ಜೈಲಾಧಿಕಾರಿ/ ಐಜಿಗೆ ಅಧಿಕಾರ ನೀಡಿದೆ.
ಬೆಂಗಳೂರು ಜೈಲಿನಲ್ಲಿ ದರ್ಶನ್ ಗೆ ಜೈಲಿನ ಮ್ಯಾನುವಲ್ ಹಾಗೂ ಕಾನೂನಿಗೆ ಒಳಪಟ್ಟು ಅಗತ್ಯ ದಿಂಬು, ಬೆಡ್ ಶೀಟ್ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಕೋರ್ಟ್ ಅನುಮಿತಿ ನೀಡಿದೆ.
ಪರಪ್ಪನ ಅಗ್ರಹಾರದಲ್ಲಿ ಆರೋಪಿ ದರ್ಶನ್ ಜೈಲಿನೊಳಗೆ ವಾಕ್ ಮಾಡಬಹುದು. ಆವರಣದೊಳಗೆ ಓಡಾಡುವುದು, ಗಾರ್ಡ್‌ನ ನಲ್ಲಿ ಅಲ್ಲಿ ಇಲ್ಲಿ ಸುತ್ತಾಡಲು ಅವಕಾಶ ಸಿಕ್ಕಿದೆ. ಬೇರೆ ಬೇರೆ ಖೈದಿಗಳಿಗೆ ನೀಡುವ ಸೌಕರ್ಯಗಳನ್ನು ನಿಯಮದಡಿ ನೀಡಲು ಕೋರ್ಟ್ ಅನುಮತಿ ನೀಡಿದೆ. ಆದರೆ ಯಾವ ಕಾರಣಕ್ಕೂ ಜೈಲಿನ ನಿಯಮ ಉಲ್ಲಂಘಿಸುವಂತಿಲ್ಲ. ಹಾಗೇನಾದರು ಆದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದಿದೆ. ಈ ಮೂಲಕ ದರ್ಶನ್ ಜೈಲಿನ ಒಳಗೆ ಓಡಾಟ, ಇತರ ಕೈದಿಗಳ ಜೊತೆ ತಕ್ಕಮಟ್ಟಿಗೆ ಮಾತನಾಡಲು, ಹೆಚ್ಚುವರಿ ದಿಂಬು, ಹಾಸಿಗೆ ಪಡೆಯಲು ಅನುಮತಿ ನೀಡಿದೆ.












Click it and Unblock the Notifications