ಜನಾರ್ದನ ಪೂಜಾರಿ ಹೇಳಿಕೆಗೆ ಜೈ ಅಂದ ಯಡಿಯೂರಪ್ಪ!

Posted By:
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ 07 : 'ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕಿತ್ತುಹಾಕಿ' ಎಂಬ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸಿದರು. ಕೆಲಸ ಮಾಡದ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, 'ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಾಮಮಾರ್ಗ ಅನುಸರಿಸುತ್ತಿದೆ. ಅಧಿಕಾರಿಗಳೇ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಹಾಯ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು. ['ಸಿದ್ದರಾಮಯ್ಯ ಮಾತಿಗೆ ಪಕ್ಷದಲ್ಲಿ ಕಿಮ್ಮತ್ತಿಲ್ಲ']

'ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈಬಿಡಬೇಕು' ಎಂಬ ಜನಾರ್ದನ ಪೂಜಾರಿ ಅವರ ಹೇಳಿಕೆಗೆ ನನ್ನ ಬೆಂಬಲವಿದೆ. ಸಂಪುಟದಲ್ಲಿ ಕೆಲಸ ಮಾಡದ ಸಚಿವರಿದ್ದಾರೆ ಎಂದು ಅವರ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಆ ಮಂತ್ರಿಗಳ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಯಡಿಯೂರಪ್ಪ ಒತ್ತಾಯಿಸಿದರು. [ಕಾಂಗ್ರೆಸ್ ಸಮಾವೇಶ : ಪೂಜಾರಿ ಮಾತಿಗೆ ಚಪ್ಪಾಳೆಗಳ ಸುರಿಮಳೆ]

ಶನಿವಾರ ಮೈಸೂರಿನಲ್ಲಿ ಗ್ರಾಮ ಸ್ವರಾಜ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಜನಾರ್ದನ ಪೂಜಾರಿ ಅವರು, 'ಸಚಿವ ಸಂಪುಟದಲ್ಲಿ ಕೆಲಸ ಮಾಡದ ಬಹಳಷ್ಟು ಸಚಿವರಿದ್ದಾರೆ. ಇವರನ್ನು ಕಿತ್ತೆಸೆಯುವ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡದಿದ್ದಲ್ಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ' ಎಂದು ಎಚ್ಚರಿಕೆ ನೀಡಿದ್ದರು.

ಕೆಲಸ ಮಾಡದ ಸಚಿವ ಪಟ್ಟಿ ಬಿಡುಗಡೆಗೊಳಿಸಿ

ಕೆಲಸ ಮಾಡದ ಸಚಿವ ಪಟ್ಟಿ ಬಿಡುಗಡೆಗೊಳಿಸಿ

'ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕಿತ್ತುಹಾಕಿ' ಎಂಬ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಅವರು, 'ಕೆಲಸ ಮಾಡದ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿ' ಎಂದು ಸವಾಲು ಹಾಕಿದರು.

'ಸಿದ್ದರಾಮಯ್ಯ ಸಾಧನೆ ಶೂನ್ಯ'

'ಸಿದ್ದರಾಮಯ್ಯ ಸಾಧನೆ ಶೂನ್ಯ'

'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ ಶೂನ್ಯ. ಅವರ ಸಾಧನೆಯನ್ನು ಅಂಕಿ-ಅಂಶಗಳೇ ಸಾರಿ ಹೇಳುತ್ತಿವೆ. ಕಾಂಗ್ರೆಸ್ ತನ್ನ ಎರಡೂವರೆ ವರ್ಷಗಳ ಸಾಧನೆ ಏನು? ಎಂಬುದನ್ನು ಜನರ ಮುಂದಿಡಬೇಕು' ಎಂದು ಯಡಿಯೂರಪ್ಪ ಅವರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ

ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ

'ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಾಮಮಾರ್ಗ ಅನುಸರಿಸುತ್ತಿದೆ. ಅಧಿಕಾರಿಗಳೇ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸಹಾಯ ಮಾಡುತ್ತಿದ್ದಾರೆ' ಎಂದು ಯಡಿಯೂರಪ್ಪ ಅವರು ಆರೋಪಿಸಿದರು.

'ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ'

'ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ'

'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದಿಂದಾಗಿ ಜನರು ಅಕ್ರೋಶಗೊಂಡಿದ್ದಾರೆ. ಆದ್ದರಿಂದ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ' ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪೂಜಾರಿ ಅವರು ಹೇಳಿದ್ದೇನು?

ಪೂಜಾರಿ ಅವರು ಹೇಳಿದ್ದೇನು?

ಮೈಸೂರಿನಲ್ಲಿ ಶನಿವಾರ ನಡೆದ ಕಾಂಗ್ರೆಸ್ 'ಗ್ರಾಮ ಸ್ವರಾಜ್' ಸಮಾವೇಶದಲ್ಲಿ ಮಾತನಾಡಿದ್ದ ಜನಾರ್ದನ ಪೂಜಾರಿ ಅವರು 'ಗ್ರಾಮಾಂತರ ಮಟ್ಟದಲ್ಲಿ ನಾನು ಸಂಚರಿಸಿದ್ದೇನೆ. ಕಾರ್ಯಕರ್ತರು, ನಾಗರಿಕರ ದೂರು ಒಂದೇ ನಾಗರಿಕರಿಗೆ, ಕಾರ್ಯಕರ್ತರಿಗೆ ಕಾಂಗ್ರೆಸ್ ಸಚಿವರು ಗೌರವ ಕೊಡುತ್ತಿಲ್ಲ ಎನ್ನುವುದು. ನಮ್ಮದು ಕಾರ್ಯಕರ್ತರಿಂದ ಹುಟ್ಟಿದ ಪಕ್ಷ. ಕಾರ್ಯಕರ್ತರಿಗೆ ಗೌರವ ಕೊಡದೇ ಇದ್ದರೆ ಹೇಗೆ?' ಎಂದು ಪಕ್ಷದ ನಾಯಕರು ಇದ್ದ ವೇದಿಕೆಯಲ್ಲಿಯೇ ಪ್ರಶ್ನಿಸಿದ್ದರು.

'ಸಂಪುಟದಿಂದ ಸಚಿವರನ್ನು ಕಿತ್ತುಹಾಕಿ'

'ಸಂಪುಟದಿಂದ ಸಚಿವರನ್ನು ಕಿತ್ತುಹಾಕಿ'

ಸಮಾವೇಶದಲ್ಲಿ ಮಾತನಾಡಿದ ಪೂಜಾರಿ ಅವರು, 'ಅನೇಕ ಸಚಿವರು ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಅವರನ್ನು ಸಚಿವ ಸಂಪುಟದಿಂದ ಕಿತ್ತುಹಾಕಿ. ಇಂಥವರಿಂದ ಯಾರಿಗೂ ಪ್ರಯೋಜನವಿಲ್ಲ. ಇದು ಕಾರ್ಯಕರ್ತರ ಅಭಿಪ್ರಾಯವೂ ಹೌದು' ಎಂದು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

'ಧೈರ್ಯ ಎಲ್ಲಿ ಹೋಯಿತು?' ಎಂದು ಪ್ರಶ್ನಿಸಿದ್ದರು

'ಧೈರ್ಯ ಎಲ್ಲಿ ಹೋಯಿತು?' ಎಂದು ಪ್ರಶ್ನಿಸಿದ್ದರು

ಸಮಾವೇಶದಲ್ಲಿ ಮಾತನಾಡಿದ್ದ ಪೂಜಾರಿ ಅವರು 'ಸಿದ್ದರಾಮಯ್ಯನವರೇ ನಿಮಗಿದ್ದ ಧೈರ್ಯ ಈಗ ಎಲ್ಲಿಗೆ ಹೋಯಿತು? ಇನ್ನಾದರೂ ಧೈರ್ಯ ಮಾಡಿ. ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಉಳಿಸಿ' ಎಂದು ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Chief Minister of Karnataka and BJP national vice president B.S.Yeddyurappa urge the CM Siddaramaiah to remove non-performing ministers from cabinet.
Please Wait while comments are loading...