Tungabhadra Dam: ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ, ಜನರಿಗೆ ಮಹತ್ವದ ಎಚ್ಚರಿಕೆ
ಬೆಂಗಳೂರು, ಅಕ್ಟೋಬರ್ 22: ಉತ್ತರ ಕರ್ನಾಟಕದ ಪ್ರಮುಖ ಎರಡು ನದಿಗಳಲ್ಲಿ ನೀರಿನ ಒಳಹರಿವು ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಪರಿಣಾಮ ತುಂಗಭದ್ರಾ ಅಣೆಕಟ್ಟು ಭರ್ತಿಯಾಗಿದೆ. ಇನ್ನೂ ಕೆಲವು ದಿನಗಳ ಕಾಲ ಮಳೆ ಬರುವ ಪ್ರಯುಕ್ತ ಎಂದಿನಂತೆ ಸರ್ಕಾರ ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಜಲಾನಯನ ಪ್ರದೇಶಗಳ ನಿವಾಸಿಗಳಿಗೆ ಮಹತ್ವದ ಸೂಚನೆ ನೀಡಿದೆ.
ಎರಡು ವಾರಗಳಿಂದ ಉತ್ತರ ಕರ್ನಾಟಕ, ಪಶ್ಚಿಮ ಘಟ್ಟಗಳಲ್ಲಿ ಅತ್ಯಧಿಕ ಭಾರೀ ಮಳೆ ಆಗುತ್ತಿದೆ. ಇದೀಗ 'ಡಾನಾ ಚಂಡಮಾರುತ'ದ ಪ್ರಭಾವ (Cyclone Dana) ಸಹ ಇದೆ. ಹೀಗಾಗಿ ಇನ್ನಷ್ಟು ದಿವಸಗಳ ಕಾಲ ಮಳೆ ಬರುವ ಮುನ್ಸೂಚನ ಇದೆ. ಹೀಗಾಗಿ ಭರ್ತಿಯಾಗಿರುವ ಬನವಾಸಿ ಸಮೀಪದ ವಾರದ ಮೂಲದಿಂದ ಹುಟ್ಟುವ ವರದಾ ನದಿ, ತುಂಗಾ ಹಾಗೂ ಭದ್ರಾನದಿಗಳ ಒಳಹರಿವು ಹೆಚ್ಚಾಗಿ ತುಂಗಭದ್ರಾ ಅಣೆಕಟ್ಟು ತುಂಬಿಕೊಂಡಿದೆ. ಇದೀಗ ಈ ಡ್ಯಾಂನಿಂದ ಅಪಾರ ಪ್ರಮಾಣದ ನೀರನ್ನು ಇಂದು ಮಂಗಳವಾರ ಸಂಜೆವರೆಗೆ ಬಿಡುಗಡೆ ಮಾಡಲಾಗುತ್ತದೆ.

ಸದರಿ ಕಾರಣದಿಂದ ಅಣೆಕಟ್ಟಿನ ಕೆಳಗಭಾಗ ಜನರು ಹಾಗೂ ತುಂಗಭದ್ರಾ ನದಿಯ ಕೆಳ ಭಾಗದ ನಿವಾಸಿಗಳಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರ (KSNDMC) ಪ್ರವಾಹದ ಎಚ್ಚರಿಕೆ ನೀಡಿದೆ. ಸುರಕ್ಷತ ಸ್ಥಳದಲ್ಲಿರುವಂತೆ ಮನವಿ ಮಾಡಿಕೊಂಡಿದೆ.
ಇಂದು ಎಷ್ಟು ಕ್ಯೂಸೆಕ್ ನೀರು ಬಿಡುಗಡೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರ (KSNDMC) ತಿಳಿಸಿರುವ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 9 ಗಂಟೆಯ ನಂತರ ಕೊಪ್ಪಳದ ಜಿಲ್ಲೆ ವ್ಯಾಪ್ತಿಯಲ್ಲಿರುವ ತುಂಗಭದ್ರಾ ಜಲಾಶಯದಿಂದ ಬರೋಬ್ಬರಿ 90,000 ದಿಂದ 1,20,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.
ಈ ಸಂಬಂಧ ಅಣೆಕಟ್ಟಿನ ಕೆಳಭಾಗದಲ್ಲಿ ಪ್ರವಾಸ ಉಂಟಾಗಬಹುದು. ಮೊದಲೇ ಬರಗಾಳ, ಪ್ರವಾಹ, ನೆರೆಯಿಂದ ತತ್ತರಿಸಿರುವ ಜನರು ಮತ್ತೆ ತೊಂದರೆ ಸಿಲುಕಬಾರದು ಎಂಬ ಕಾಳಜಿಯಿಂದ ಕೆಎಸ್‌ಎನ್‌ಡಿಎಂಸಿ ಮುನ್ನೆಚ್ಚರಿಕೆ ನೀಡಿದೆ. ಇವತ್ತು ಮಾತ್ರಲವಲ್ಲದೇ ಮಳೆ ಹೆಚ್ಚಾದರೆ ನೀರು ಬಿಡುಗಡೆ ಪ್ರಕ್ರಿಯೆ ನಾಳೆ ಬುಧವಾರ ಸಹ ಮುಂದುವರಿಯಬಹುದು. ಆದ್ದರಿಂದ ವ್ಯಾಪಕ ಮಳೆ ಅಲರ್ಟ್ ಕೊಟ್ಟಾಗಲೆಲ್ಲ, ಜಲಾನಯನ ಪ್ರದೇಶದ ಜನರು ಎಚ್ಚರಿಕೆ ವಹಿಸಬೇಕಿದೆ.
ಕೇವಲ ತುಂಗಭದ್ರಾ ಮಾತ್ರವಲ್ಲದೇ ಕಾವೇರಿ ನದಿ ತುಂಬಿದ್ದರಿಂದ ಕೆಆರ್‌ಎಸ್ ಜಲಾಶಯ, ಹಾರಂಗಿ ನದಿ ಪಾತ್ರ ಹೆಚ್ಚಾಗಿದ್ದರಿಂದ ಹಾರಂಗಿ ಡ್ಯಾಂ, ಹೀಗೆ ಆಲಮಟ್ಟಿ, ಘಟಪ್ರಭಾ, ಭದ್ರಾ ಜಲಾಶಯಗಳು ಭರ್ತಿಯಾಗಿವೆ. ಇದೀಗ ಸಣ್ಣ ಪ್ರಮಾಣದಲ್ಲಿ ಅವುಗಳಿಂದಲೂ ನೀರನ್ನು ಹೊರ ಬೀಡಲಾಗುತ್ತಿದೆ.












Click it and Unblock the Notifications