ತೈಲ ಬೆಲೆ ಇಳಿಕೆಯಿಂದ ರಾಜ್ಯಕ್ಕೆ 400 ಕೋಟಿ ನಷ್ಟ
ಕಲಬುರಗಿ, ನ, 28 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಪರಿಣಾಮ ವರ್ಷದ ಅಂತ್ಯಕ್ಕೆ ರಾಜ್ಯದ ಬೊಕ್ಕಸಕ್ಕೆ 400 ಕೋಟಿಗೂ ಅಧಿಕ ಆದಾಯ ಕೊರತೆ ಕಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಕೊರತೆ ತುಂಬುವ ಸಂಬಂಧ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಹೇಳಿದರು.[ಕಲಬುರಗಿ ಸಚಿವ ಸಂಪುಟ ಸಭೆಯ ತೀರ್ಮಾನಗಳು]

ಬಸ್ ದರ ಇಳಿಕೆ ಮಾಡುವ ಯಾವ ಪ್ರಸ್ತಾಪವೂ ರಾಜ್ಯ ಸರ್ಕಾರದ ಮುಂದಿಲ್ಲ. ಸಾರ್ವಜನಿಕ ಸಾರಿಗೆ ನಷ್ಟದಲ್ಲಿಯೇ ಸಂಚರಿಸುತ್ತಿದೆ. ಅಲ್ಲದೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿದಿದೆ ಎಂದು ದೇಶದ ಯಾವುದೇ ಸಾರ್ವಜನಿಕ ಸಾರಿಗೆ ಸಂಸ್ಥೆ ದರ ಇಳಿಕೆ ಮಾಡಿದ ಉದಾಹರಣೆ ಇಲ್ಲ ಎಂದು ಹೇಳಿದರು.
ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆಯಾದರೆ ಬಸ್ ದರ ಇಳಿಸುವ ಸಂಬಂಧ ಚರ್ಚೆ ನಡೆಸಬಹುದು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಹಿಂದಿನ ಸಾರಿ ತೈಲ ಬೆಲೆ ಇಳಿಸಿದ್ದಾಗ ಬಿಜೆಪಿ ಮತ್ತು ಅನೇಕ ಸಂಘಟನೆಗಳು ಬಸ್ ದರ ಇಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು.












Click it and Unblock the Notifications