ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಬಂತು 1,64,770 ಡೋಸ್ ಕೊವ್ಯಾಕ್ಸಿನ್

|
Google Oneindia Kannada News

ಬೆಂಗಳೂರು, ಮೇ 31; ಕರ್ನಾಟಕದಲ್ಲಿ ಕೋವಿಡ್ ಲಸಿಕೆಯ ಕೊರತೆ ಇದೆ. ಆದ್ದರಿಂದ ಸರ್ಕಾರ 45 ವರ್ಷ ಮೀರಿದವರಿಗೆ ಮೊದಲು ಲಸಿಕೆ ನೀಡಲು ಆದ್ಯತೆ ಕೊಟ್ಟಿದೆ. ಕೊವ್ಯಾಕ್ಸಿನ್ ಲಸಿಕೆ ಸಿಗುತ್ತಿಲ್ಲ ಎಂದು ಜನರು ದೂರುತ್ತಿದ್ದರು.

Recommended Video

Walk - In ಮಾಡಿ !! covaxin ಲಸಿಕೆ ಹಾಕಿಸಿಕೊಳ್ಳಿ !! | Oneindia Kannada

ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದವರು 2ನೇ ಡೋಸ್‌ಗಾಗಿ ಕಾಯುತ್ತಿದ್ದರು. ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರು ಖಾಸಗಿ ಆಸ್ಪತ್ರೆಗಳಿಗೆ ಸಹ ಭೇಟಿ ನೀಡುತ್ತಿದ್ದರು.

ಬೆಂಗಳೂರು; 27 ಕೇಂದ್ರದಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ಲಭ್ಯ, ಪಟ್ಟಿ ಬೆಂಗಳೂರು; 27 ಕೇಂದ್ರದಲ್ಲಿ ಕೊವ್ಯಾಕ್ಸಿನ್ 2ನೇ ಡೋಸ್ ಲಭ್ಯ, ಪಟ್ಟಿ

ಕೇಂದ್ರ ಸರ್ಕಾರ ಕೊವ್ಯಾಕ್ಸಿನ್ ಕೊರತೆ ನೀಗಿಸಲು ರಾಜ್ಯಕ್ಕೆ ಸಹಕಾರ ನೀಡಿದೆ. 1,64,770 ಡೋಸ್ ಕೊವ್ಯಾಕ್ಸಿನ್ ಕರ್ನಾಟಕಕ್ಕೆ ಸೋಮವಾರ ಆಗಮಿಸಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 120 ದಿನ ಬೇಕೇ ಬೇಕು! ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 120 ದಿನ ಬೇಕೇ ಬೇಕು!

Karnataka Received 1,64,770 Doses Covaxin From Union Govt

ಇದುವರೆಗೂ ರಾಜ್ಯಕ್ಕೆ 17.8 ಲಕ್ಷ ಡೋಸ್ ಕೊವ್ಯಾಕ್ಸಿನ್ ಸರಬರಾಜು ಆಗಿದೆ. ಕೇಂದ್ರ ಸರ್ಕಾರದಿಂದ 15.86 ಲಕ್ಷ ಡೋಸ್ ಲಸಿಕೆ ಬಂದಿದೆ. ರಾಜ್ಯ ಸರ್ಕಾರ ಖರೀದಿ ಮಾಡಿರುವ ಪೈಕಿ 1.94 ಲಕ್ಷ ಡೋಸ್ ಬಂದಿದೆ.

ಈಗ ರಾಜ್ಯದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್ ಸಂಗ್ರಹವನ್ನು 2ನೇ ಡೋಸ್ ಲಸಿಕೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವರು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು ಕಾರವಾರ; ಕೊವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಜನರ ಹಿಂದೇಟು

27 ಕೇಂದ್ರದಲ್ಲಿ ಲಭ್ಯ; ಬೆಂಗಳೂರು ನಗರದಲ್ಲಿ 27 ಕೇಂದ್ರದಲ್ಲಿ ಕೊವ್ಯಾಕ್ಸಿನ್ ಲಭ್ಯವಿದೆ. ಬಿಬಿಎಂಪಿ ಆಯುಕ್ತರು ವಲಯವಾರು ಕೊವ್ಯಾಕ್ಸಿನ್ ಲಸಿಕೆ ಲಭ್ಯವಿರುವ ಸೆಂಟರ್‌ಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎರಡನೇ ಡೋಸ್‌ಗೆ ಕಾಯುತ್ತಿರುವವರು ನೇರವಾಗಿ ವಾಕ್ಇನ್ ಮೂಲಕ ಬರಬಹುದು ಎಂದು ಮಾಹಿತಿ ನೀಡಿದ್ದಾರೆ.

English summary
Karnataka health minister Dr. K. Sudhakar tweeted that state received 1,64,770 doses of Covaxin from union govt supply today. Available stock will be used to provide 2nd dose on priority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X